ಕೋವಿಡ್; ಶಾಮಿಯಾನಗಾರರ ಬದುಕು ದುಸ್ತರ
ಶಾಮಿಯಾನ ಕುಟುಂಬಗಳಿಗೂ ಸಹಾಯ ನೀಡಲು ಆಗ್ರಹ | ಕೊರೊನಾ ಕರ್ಫ್ಯೂದಿಂದ ಉದ್ಯೋಗಕ್ಕೆ ಕತ್ತರಿ
Team Udayavani, Jun 1, 2021, 7:03 PM IST
ಶಿರೂರ: ಕೊರೊನಾ ಕರ್ಫ್ಯೂದಿಂದ ವ್ಯಾಪಾರಸ್ಥರ, ಕುಲಕಸುಬುದಾರರ ಬದುಕು ಮೂರಾಬಟ್ಟೆಯಾಗಿದೆ. ಶಾಮಿಯಾನ್ ಕೆಲಸ ನಂಬಿ ಜೀವನ ನಡೆಸುತ್ತಿದ್ದ ಗ್ರಾಮದಲ್ಲಿನ ಕುಟುಂಬಗಳ ಬದುಕು ದುಸ್ತರವಾಗಿದೆ.
ಸತತ ಎರಡನೇ ವರ್ಷವೂ ಶಾಮಿಯಾನ ನಿರ್ವಹಿಸುವ ಕುಟುಂಬಗಳಿಗೆ ಬದುಕು ಕಠಿಣವಾಗಿದೆ. ಇತ್ತೀಚೆಗೆ ಶಾಮಿಯಾನ ಒಂದು ಅಗತ್ಯ ಸೇವೆಯಾಗಿ ಆ ಕುಟುಂಬಗಳಿಗೆ ದೊಡ್ಡ ಆಸರೆಯಾಗಿತ್ತು. ಸಮಾಜದ ಎಲ್ಲ ವರ್ಗದ ಜನರ ಸಂದರ್ಭಕ್ಕೆ ಅನುಸಾರವಾಗಿ ಇದು ಅಗತ್ಯವಾಗುತ್ತಿತ್ತು. ಮದುವೆ, ಶುಭ-ಸಮಾರಂಭ, ಸಭೆ-ಸಮಾರಂಭಗಳಿಗೆ ಸರಕಾರದ ಕಾರ್ಯಕ್ರಮಗಳಿಗೆ ಹೀಗೆ ಅನೇಕ ವೇದಿಕೆಗಳನ್ನು ಸಿದ್ಧತೆ ಮಾಡುತ್ತಿದ್ದ ಗ್ರಾಮೀಣ ಭಾಗದ ಶಿರೂರು, ಬೆನಕಟ್ಟಿ, ನೀಲಾನಗರ, ಮಲ್ಲಾಪುರ ಗ್ರಾಮಗಳಲ್ಲಿನ ಕುಟುಂಬಗಳು ಈಗ ಕೊರೊನಾ ತಂದೊಡ್ಡಿದ ದುಃ ಸ್ಥಿತಿ ಎದುರಿಸಬೇಕಾಗಿದೆ.
ಕೊರೊನಾ ಕರ್ಫ್ಯೂದಿಂದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮದುವೆಗಳನ್ನು ನಿರ್ಬಂ ಧಿಸಿದ್ದಾರೆ. ಎಲ್ಲ ಸರಿ ಇದ್ದಿದ್ದರೆ ಜನಪ್ರತಿನಿಧಿ ಗಳು, ಸಂಘ-ಸಂಸ್ಥೆಗಳು ಏರ್ಪಡಿಸುತ್ತಿದ್ದ ಸಾಮೂಹಿಕ ವಿವಾಹಗಳಲ್ಲಿ ಬೃಹತ್ ಪ್ರಮಾಣದ ಶಾಮಿಯಾನ ಹಾಕಿ ಧ್ವನಿ-ಬೆಳಕು ಅಳವಡಿಸಿ ಆ ಮೂಲಕ ಜೀವನ ಸಾಗಿಸುತ್ತಿದ್ದರು. ಕಳೆದ ವರ್ಷವೇ ಅಪಾರ ನಷ್ಟ ಅನುಭವಿಸಿದ್ದರು. ಈ ವರ್ಷವಾದರೂ ಪರಿಸ್ಥಿತಿ ಸರಿ ಹೋಗಬಹುದು ಎನ್ನುವ ನೀರಿಕ್ಷೆಯಲ್ಲಿರುವಾಗಲೇ ಎರಡನೇ ಅಲೆ ಅಪ್ಪಳಿಸಿದ್ದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ತೊಡಗಿಸಿ ತಂದ ಹೊಸ ಸಾಮಗ್ರಿಗಳು ಬಳಸಲಾಗದೇ ಮನೆಯ ಮುಂದೆ ತುಕ್ಕು ಹಿಡಿಯುತ್ತಿವೆ ಎಂಬುದು ಶಾಮಿಯಾನ್ ಮಾಲೀಕ ಈರಣ್ಣ ಹೊಳಿ ಮಾತು.
ಮುಂದಿನ ದಿನಗಳಲ್ಲಿಯೂ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ನಮಗೆ ವರ್ಷಕ್ಕೆ 4ರಿಂದ 5 ಲಕ್ಷ ರೂಪಾಯಿ ನಷ್ಟದ ಹೊರೆ ಬಂದಿದೆ. ಸರಕಾರ ಅನೇಕ ಕುಲಕಸುಬುದಾರರಿಗೆ ಆರ್ಥಿಕ ಸಹಾಯ ನೀಡಿದೆ. ಶಾಮಿಯಾನ್ ಕುಟುಂಬಗಳಿಗೂ ಸಹಾಯ ನೀಡಲಿ ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.