ವಿಶಿಷ್ಟ ವೈದ್ಯಕೀಯ ಚಿಕಿತ್ಸಾ ಬುದ್ದಿಮತ್ತೆ ಹೋಮಿಯೋಪಥಿ


Team Udayavani, Jun 2, 2021, 6:30 AM IST

Typical Medical Treatment Brain Homeopathy

ಇಂದಿನ ಜಾಗತಿಕ ಸವಾಲಾಗಿರುವ ಕೊರೊನಾ, ಕಪ್ಪು ಮತ್ತು ಬಿಳಿ ಫ‌ಂಗಸ್‌ ಸೋಂಕಿನ ತೀವ್ರತೆಯು ರೋಗಾಣುವಿಗಿಂತಲೂ ಹೆಚ್ಚು ಆ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅಲವಂಬಿಸಿಕೊಂಡಿದೆ. ಸಶಕ್ತ ರೋಗ ಪ್ರತಿರೋಧಕ ಶಕ್ತಿ ಇದ್ದವರಲ್ಲಿ ಸೋಂಕು ಬಾರದಿರಬಹುದು ಅಥವಾ ಬಂದರೂ ಗೌಣವಾಗಿರಬಹುದು. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ನಿಜವಾಗಿಯೂ ನಾವು ಮಾಡಬೇಕಾಗಿರುವುದು ಜನರ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯ ಮೂಲ ಆಶಯವೂ ಇದೇ ಆಗಿದೆ.

ಇಂದಿನ ಆಧುನಿಕ ವೈದ್ಯಪದ್ಧತಿಯನ್ನು 2,400 ವರ್ಷಗಳಷ್ಟು ಹಿಂದೆ (460 -370 ಬಿ.ಸಿ.) ಮೊತ್ತಮೊದಲ ಬಾರಿಗೆ ಪರಿಚಯಿಸಿದ್ದು ಹಿಪ್ಪೊ ಕ್ರಾಟ್ಸ್‌. ಅವರು ಹೋಮಿಯೋಪಥಿ ತಣ್ತೀ ದ ಬಗ್ಗೆಯೂ ಉಲ್ಲೇಖೀಸಿದ್ದರು. ಆರೋಗ್ಯವಂತನಿಗೆ ಹೆಲೆಬೋರಸ್‌ ಎಂಬ ಸಸ್ಯವನ್ನು ನೀಡುವಾಗ ಉಂಟಾಗುವ ಖನ್ನತೆ ಅದೇ ಹೆಲೆಬೋರಸ್‌ ಗಿಡದಂಶವನ್ನು ಔಷಧ ರೂಪದಲ್ಲಿ ಕೊಟ್ಟಾಗ ಕಡಿಮೆಯಾಗುವುದನ್ನು ಬರೆದಿದ್ದಾರೆ. ಇದು ಹೋಮಿಯೋಪಥಿ ಅನುರೂಪತಾ ನಿಯಮ.

ಸುಮಾರು 17ನೆಯ ಶತಮಾನದವರೆಗೆ ಅಲೋ ಪಥಿ ಚಿಕಿತ್ಸಾ ಪದ್ಧತಿ ಊಹಾತ್ಮಕ ನೆಲೆಯಲ್ಲಷ್ಟೇ ನಡೆಯುತ್ತಿತ್ತು. ಇದನ್ನು ಯೂರೋಪ್‌ನ ಶ್ವಾಸನ್‌ಬರ್ಗ್‌ನ ದೊರೆಯ ಮರಣದ ಸಮಯದಲ್ಲಿ ಪ್ರಶ್ನಿಸಿದ್ದ ಅಂದಿನ ಅಲೋಪತಿ ವೈದ್ಯರಾಗಿದ್ದ ಮೇಧಾವಿ ಡಾ| ಸಾಮ್ಯುವೆಲ್‌ ಹಾನಿಮನ್‌ ತನ್ನ ವೃತ್ತಿ ಜೀವನಕ್ಕೇ ತಿಲಾಂಜಲಿ ಇಡಬೇಕಾಯಿತು. ಅಲೋಪಥಿ ಹೆಸರನ್ನು ಇಟ್ಟಿದ್ದೇ ಇದೇ ಸಾಮ್ಯುವೆಲ್‌ ಹಾನಿಮನ್‌.

ಜಗತ್ತಿನ ಅತ್ಯಂತ ಪ್ರಾಚೀನ ಔಷಧ ಪದ್ಧತಿಗಳಲ್ಲಿ ಆಯುರ್ವೇದವೂ ಒಂದು. ಧನ್ವಂತರಿ ಬ್ರಹ್ಮನಿಂದ ಪಡೆದ ಜ್ಞಾನ ಅಥರ್ವ ವೇದದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಜೀವನಕ್ರಮವಾಗಿ ವಿಷದ ವಾಗಿ ವಿವರಿಸಲ್ಪಟ್ಟಿದೆ. ರಾಜಾಶ್ರಯದಲ್ಲಿ ಹುಲು ಸಾಗಿ ಬೆಳೆದು ಸುಶ್ರುತನಂಥ ಮಹಾಮೇಧಾವಿ ಕಣ್ಣಿನ ಶಸ್ತ್ರಚಿಕಿತ್ಸಾ ತಜ್ಞನನ್ನು (ಕ್ರಿ.ಪೂ. 7 ಅಥವಾ 6) ಜಗತ್ತಿಗೆ ನೀಡಿತ್ತು. 60 ಬಗೆಯ ಗಾಯದ ಆರೈಕೆ, 120 ಶಸ್ತ್ರಚಿಕಿತ್ಸಾ ಉಪಕರಣಗಳು, 300 ಶಸ್ತ್ರಕ್ರಿಯಾ ವಿಧಾನಗಳನ್ನು ವಿವರಿಸಲಾಗಿದೆ ಎಂದರೆ ಭಾರತೀಯ ವೈದ್ಯ ವಿಜ್ಞಾನದ ಅಗಾಧ ಬೆಳವಣಿಗೆ ಯನ್ನು ಮನವರಿಕೆ ಮಾಡಿಕೊಳ್ಳಬಹುದು.

ಆಯುರ್ವೇದ ಅತ್ಯಂತ ಪ್ರಾಚೀನ ಚಿಕಿತ್ಸಾ ಬುದ್ಧಿಮತ್ತೆಯಾದರೆ, ಹೋಮಿಯೋಪಥಿ ಅತ್ಯಂತ ಇತ್ತೀಚಿನ ವಿಶಿಷ್ಟ ವೈದ್ಯಕೀಯ ಚಿಕಿತ್ಸಾ ಪದ್ಧತಿ. 14 ಭಾಷಾ ಪ್ರವೀಣ, ಮೇಧಾವಿ, ರಸಾಯನಶಾಸ್ತ್ರ, ಖನಿಜಶಾಸ್ತ್ರ, ಸಸ್ಯಶಾಸ್ತ್ರಗಳಲ್ಲಿ ಅಪಾರ ಜ್ಞಾನ ಪಡೆದಿದ್ದ, ಅಂದಿನ ಅಲೋಪಥಿ ವೈದ್ಯನಾಗಿದ್ದ ಡಾ| ಸಾಮ್ಯುವೆಲ್‌ ಹಾನಿಮನ್‌ 1796ರಲ್ಲಿ ಇದನ್ನು ಕಂಡು ಹಿಡಿದ. ಗ್ಯಾಲನ್‌ ವೈಜ್ಞಾನಿಕ ರೀತಿಯ ಯೋಚನಾ ಶೈಲಿಗೆ ಮೊದಲಿಗ ನಾದರೂ ಪರಿಣಾಮಕಾರಿಯಾಗಿ ಅದನ್ನು ಉಪಯೋಗಿಸಿದ್ದು ಡಾ| ಹಾನಿಮನ್‌. 1801ರಲ್ಲಿ ಬಂದ ಜ್ವರ ಮತ್ತು 1831ರಲ್ಲಿ ಯೂರೋಪನ್ನೇ ನಡುಗಿಸಿದ್ದ ವಾಂತಿಭೇದಿಗೆ ಪರಿಣಾಮಕಾರಿ ಹೋಮಿಯೋಪಥಿ ಚಿಕಿತ್ಸೆ ನೀಡಿ ಸಾವಿರಾರು ಮಂದಿಯ ಜೀವ ಉಳಿಸಿದ್ದು ನೋಡಿ ಜಗತ್ತೇ ಬೆರಗಾಗಿತ್ತು. ಜೆ.ಟಿ. ಕೆಂಟ್‌, ಹೆರಿಂಗ್‌, ಕ್ಲಾರ್ಕ್‌, ರಿಚಾರ್ಡ್‌ ಹ್ಯೂಗ್ಸ್‌ ಮುಂತಾದ ಅತಿರಥ ಮಹಾರಥರು ಹೋಮಿಯೋಪಥಿ ವೈದ್ಯರಾದರು. ಮನುಷ್ಯನನ್ನು ದೇಹ ಮತ್ತು ಮನಸ್ಸುಗಳ ಜತೆ ಅಖಂಡವಾಗಿ ನೋಡುವ ಹೋಮಿಯೋಪಥಿ ಆತನನ್ನು ಪರಿಸರದ ಶಿಶುವೆಂದೇ ಕರೆಯುತ್ತದೆ. ರೋಗ ಎನ್ನುವುದು ದೇಹಗಳಲ್ಲಿ ಅಡಗಿ ಕುಳಿತ ಯಾವುದೋ ವಸ್ತುವಲ್ಲವೆಂದೂ, ಮನಸ್ಸು ಮತ್ತು ದೇಹಕ್ಕೆ ಬೇರ್ಪಡಿಸಲಾಗದ ಒಂದಕ್ಕೊಂದು ಪೂರಕ ಸಂಬಂಧವಿದೆ ಎಂದೂ, ರೋಗಕ್ಕಿಂತಲೂ ರೋಗಿಗೇ ಮಹತ್ವ ಕೊಡಬೇಕೆಂದೂ, ಔಷಧ ಎಂಬುದು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಯನ್ನು ಉದ್ದೀಪನಗೊಳಿಸುವಂತಿರಬೇಕೆಂದೂ, ಯಾವುದೇ ಔಷಧವನ್ನು ಆರೋಗ್ಯವಂತ ಮನು ಷ್ಯನ ಮೇಲೆ ಪ್ರಯೋಗಿಸಿ ಪ್ರಮಾಣೀಕರಿಸಿದ ಮೇಲೆಯೇ ಕೊಡತಕ್ಕದ್ದೆಂದೂ, ಔಷಧ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿರಬೇಕೆಂದೂ ಹೋಮಿಯೋಪಥಿ ಪ್ರತಿಪಾದಿಸಿತು. ವೈರಾಣು ವಿನಿಂದಾಗುವ ಕಾಯಿಲೆಗಳಲ್ಲಿ ಹೋಮಿ ಯೋಪಥಿ ಚಿಕಿತ್ಸೆ ಮುಂಚೂಣಿಯಲ್ಲಿದೆ. ಏಡ್ಸ್‌ ವೈರಸ್‌ ಅನ್ನು ಸಂಶೋಧಿಸಿ ನೊಬೆಲ್‌ ಪುರಸ್ಕಾರ ಪಡೆದ ಲ್ಯೂಕ್‌ ಮಾಂಟೆಗ್‌ಮಿರ್‌ನಂಥವರು ಹೋಮಿಯೋಪಥಿಯ ವೈಜ್ಞಾನಿಕ ಬೆಳವಣಿಗೆಗೆ ಹೊಸ ಆಯಾಮ ನೀಡುತ್ತಿದ್ದಾರೆ. ಬೆನೆವಿಸ್ಟ್‌ ಎಂಬ ವಿಜ್ಞಾನಿ ಕಳೆದ ಶತಮಾನದಲ್ಲಿಯೇ ಹೋಮಿಯೋಪಥಿ ತಣ್ತೀವನ್ನು ಪ್ರಯೋಗಾಲಯದಲ್ಲಿ ತೋರಿಸಿದ್ದರೂ ಕಳೆದೊಂದು ದಶಕದಲ್ಲಿ ಅಮೆರಿಕದಲ್ಲಿ ಹೋಮಿ ಯೋಪಥಿ ಔಷಧಗಳ ಮಾರಾಟ ಎಫ್ಡಿಎ ಪ್ರಕಾರ 1,000 ಪಟ್ಟು ಹೆಚ್ಚಾಗಿದ್ದರೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈದ್ಯಪದ್ಧತಿ ಎಂದು ಸಮೀಕ್ಷೆಯಲ್ಲಿ ಕಂಡುಕೊಂಡಿದ್ದರೂ, ಇದರ ಜನಕ ಡಾ| ಸಾಮ್ಯುವೆಲ್‌ ಹಾನಿಮನ್‌ಗಾಗಲೀ, ಹೋಮಿಯೋಪಥಿ ಚಿಕಿತ್ಸಾ ಪದ್ಧತಿಗಾ ಗಲೀ ವೈದ್ಯಲೋಕ ಕೊಡಬೇಕಾದ ಸ್ಥಾನ ಕೊಡದಿರುವುದು ಬೇಸರದ ಸಂಗತಿ.

ಹೋಮಿಯೋಪಥಿಯ ಪ್ರಪ್ರಥಮ ಉಲ್ಲೇಖ ಪ್ರಾಯಶಃ ಶ್ರೀಮದ್ಭಾಗವತದಲ್ಲಿದೆ. ವ್ಯಾಸ ಮಹಿರ್ಷಿಗಳು ನಾರದರಿಗೆ ಹೀಗೆ ಹೇಳುತ್ತಾರೆ-

ಆಮಯೋ ಯಜ್ಞ ಭೂತಾನಾಂ ಜಾಯತೇ ಯೇನ ಸುವ್ರತ|
ತದೇವ ಹ್ಯಾಮಯಂ ದ್ರವ್ಯಂ ನ ಪುನಾತಿ ಚಿಕಿತ್ಸಾತಮ್‌||
ಅಂದರೆ ಪುಣ್ಯಾತ್ಮರೇ, ಯಾವ ಪದಾರ್ಥದ ಸೇವನೆಯಿಂದ ರೋಗರುಜಿನಗಳು ಉಂಟಾಗು ತ್ತವೋ ಆ ಪದಾರ್ಥಗಳನ್ನೇ ಪರಿವರ್ತಿತ ರೂಪದಲ್ಲಿ ಮತ್ತು ಯುಕ್ತ ಪ್ರಮಾಣದಲ್ಲಿ ಉಪ ಯೋಗಿಸುವುದರಿಂದ ರೋಗ ರುಜಿನಗಳು ದೂರವಾಗುತ್ತವೆ. ( ಪ್ರಥಮ ಸ್ಕಂದ ಅಧ್ಯಾಯ 5) ಇದು ಹೋಮಿಯೋಪಥಿ ಸಾರ.

ಅಲೋಪಥಿ ತುರ್ತು ತೊಂದರೆಗಳಾದ ಅಪಘಾತ, ವಿಷಸೇವನೆ, ಹೃದಯಾಘಾತ ಇತ್ಯಾದಿ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಕೆಲಸ ಮಾಡಿದರೆ ಸಾವಿರಾರು ಇತರ ಕಾಯಿಲೆಗಳಲ್ಲಿ ಹೋಮಿಯೋಪಥಿ, ಆಯುರ್ವೇದ ಜನರ ಸ್ವಾಸ್ಥ್ಯವನ್ನು ಕಾಪಿಡಬಲ್ಲುದು. ಸಿದ್ಧ ಮತ್ತು ಯುನಾನಿ ಕೂಡ ಕೆಲವು ನಿರ್ದಿಷ್ಟ ಕಾಯಿಲೆಗಳಲ್ಲಿ ಪರಿಣಾಮಕಾರಿಯಾಗಿದೆ.
ವಿವಿಧ ವೈದ್ಯ ಪದ್ಧತಿಗಳ ನಡುವೆ ಗೋಡೆ ಕಟ್ಟುವ ಬದಲು ಸೇತು ಕಟ್ಟಿದರೆ ವೈದ್ಯಕೀಯ ಬುದ್ಧಿಮತ್ತೆಯನ್ನು ಸರಿಯಾಗಿ ಉಪಯೋಗಿಸಿದರೆ ಅದರ ಬಲುದೊಡ್ಡ ಲಾಭ ಮನುಕುಲಕ್ಕೆ, ಈ ಯುಗಕ್ಕೆ ಆಗಲಿದೆ.

ಕೊರೊನಾ ಮತ್ತು ಹೋಮಿಯೋಪಥಿ
ಇಂದಿನ ಜಾಗತಿಕ ಸವಾಲಾಗಿರುವ ಕೊರೊನಾ, ಕಪ್ಪು ಮತ್ತು ಬಿಳಿ ಫ‌ಂಗಸ್‌ ಸೋಂಕಿನ ತೀವ್ರತೆಯು ರೋಗಾಣುವಿಗಿಂತಲೂ ಹೆಚ್ಚು ಆ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅಲವಂಬಿಸಿಕೊಂಡಿದೆ. ಸಶಕ್ತ ರೋಗ ಪ್ರತಿರೋಧಕ ಶಕ್ತಿ ಇದ್ದವರಲ್ಲಿ ಸೋಂಕು ಬಾರದಿರಬಹುದು ಅಥವಾ ಬಂದರೂ ಗೌಣವಾಗಿರಬಹುದು. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಹೆಣಗಾಡುತ್ತಿ ರುವ ಈ ಸಂದರ್ಭದಲ್ಲಿ ನಿಜವಾಗಿಯೂ ನಾವು ಮಾಡಬೇಕಾಗಿರುವುದು ಜನರ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದಾಗಿದೆ.

ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯ ಮೂಲ ಆಶಯವೂ ಇದೇ ಆಗಿದೆ. ಈಗಾಗಲೇ ಭಾರತದಲ್ಲಿ ಕೊರೊನಾ ಬಾರದಂತೆ ತಡೆಗಟ್ಟು ವಲ್ಲಿ ಹೋಮಿಯೋಪಥಿಯ ಪರಿಣಾಮಕಾರಿ ಔಷಧ “ಆರ್ಸೆನಿಕ್‌ ಆಲ್ಬ್’ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಕೇಂದ್ರ ಆಯುಷ್‌ ಮಂತ್ರಾಲಯದಿಂದಲೇ 2020ರ ಮಾರ್ಚ್‌ ನಲ್ಲಿಯೇ ಶಿಫಾರಸುಗೊಂಡು ದೇಶದೆಲ್ಲೆಡೆ ಉಪಯೋಗಿಸಲಾಗುತ್ತಿದೆ. ಯಾವುದೇ ಔಷಧ ಸೇವನೆಗೂ ಮುನ್ನ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯಗತ್ಯ.

– ಡಾ| ಪ್ರವೀಣ್‌ರಾಜ್‌ ಆಳ್ವ , ಮಂಗಳೂರು

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.