ಮಿಷನ್ ಕರ್ಮಯೋಗಿ: ಅನುಷ್ಠಾನದ ವೇಳೆ ಎಚ್ಚರ ಅಗತ್ಯ
Team Udayavani, Jun 2, 2021, 6:45 AM IST
ಕೇಂದ್ರ ಸರಕಾರ ತನ್ನ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಅದರಂತೆ ಖಾಸಗಿ ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯನ್ನು ನೇಮಿಸಿಕೊಂಡು ಮೊದಲ ಹಂತದಲ್ಲಿ ಕೇಂದ್ರದ ಏಳು ಸಚಿವಾಲಯ ಮತ್ತು ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯನ್ನು ಪರಿಷ್ಕರಿಸಲು ತೀರ್ಮಾನಿಸಿದೆ. ಜನಪರ ಆಡಳಿತ ನೀಡುವ ಉದ್ದೇಶದೊಂದಿಗೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವಂತಹ ಹಲವು ಉಪಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರಕಾರದ ಈ ಮತ್ತೂಂದು ದಿಟ್ಟ ನಡೆ ಒಟ್ಟಾರೆ ಆಡಳಿತ ನಿರ್ವಹಣ ಶೈಲಿಯಲ್ಲಿ ಆಮೂ ಲಾಗ್ರ ಬದಲಾವಣೆಯನ್ನು ತರುವ ನಿರೀಕ್ಷೆ ಇದೆ. ಆದರೆ ಯೋಜನೆಯ ಜಾರಿ ವೇಳೆ ಸರಕಾರ ಒಂದಿಷ್ಟು ಎಚ್ಚರಿಕೆಯನ್ನು ವಹಿಸಲೇಬೇಕಿದೆ.
ಕಳೆದ ಏಳು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತ ವ್ಯವಸ್ಥೆಯನ್ನು ಸಕ್ರಿಯವಾಗಿಸಲು ಮತ್ತು ಜನಸ್ನೇಹಿಯಾಗಿಸಲು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ್ದ “ಮಿಷನ್ ಕರ್ಮಯೋಗಿ’ ಯೋಜನೆಯಡಿಯಲ್ಲಿ ಇದೀಗ ಅಧಿಕಾರಿಗಳ ಒಟ್ಟಾರೆ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಸರಕಾರ ಈ ವಿನೂತನ ಯೋಜನೆಯ ಜಾರಿಗೆ ಮುಂದಾಗಿದೆ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರಿಗಳಿಗೆ ಇಂಥ ಬೃಹತ್ ಮಟ್ಟದ ತರಬೇತಿಯನ್ನು ನೀಡಲಾಗುತ್ತಿದ್ದು ಇಡೀ ಯೋಜನೆಯ ಸಮಗ್ರ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಮೊದಲ ಹಂತದಲ್ಲಿ ಏಳು ಇಲಾಖೆಗಳು ತನ್ನ ಅಧಿಕಾರಿಗಳನ್ನು ಆಧುನಿಕ ತಂತ್ರಜ್ಞಾನ ಜಗತ್ತಿನ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಲು ಸನ್ನದ್ಧವಾಗಿದೆ. ಈಗಾಗಲೇ ಈ ಯೋಜನೆಯ ಪ್ರಾಥಮಿಕ ಹಂತದ ಪ್ರಕ್ರಿಯೆಗಳು ಆರಂಭಗೊಂಡಿದ್ದು ಸಿಬಂದಿ ಮತ್ತು ತರಬೇತಿ ನಿರ್ದೇಶನಾಲಯ ಸಲಹಾ ಸಂಸ್ಥೆಯನ್ನು ನೇಮಿಸಲು ಪ್ರಸ್ತಾವಗಳನ್ನು ಆಹ್ವಾನಿಸಿದೆ. ಉಳಿದ ಆರು ಇಲಾಖೆಗಳು ಈ ದಿಸೆಯಲ್ಲಿ ಕಾರ್ಯಾಚರಿಸುತ್ತಿವೆ.
ಅಧಿಕಾರಿಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವುದು, ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಅಧಿಕಾರಿಗಳ ಕಾರ್ಯನಿರ್ವಹಣ ಶೈಲಿಯನ್ನು ಮಾರ್ಪಾ ಡುಗೊಳಿಸುವ ಮೂಲಕ ಜನರಿಗೆ ತ್ವರಿತ ಸ್ಪಂದನೆ, ಭವಿಷ್ಯದಲ್ಲಿ ಇಲಾಖೆಗಳಿಗೆ ನೇಮಕಗೊಳ್ಳುವ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದಂತೆ ಸವಿಸ್ತಾರವಾದ ಪಾಠ, ಬದಲಾಗು ತ್ತಿರುವ ಕಾಲಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆಯಲ್ಲೂ ಕೆಲಸದ ಶೈಲಿಯಲ್ಲಿ ಬದಲಾವಣೆ…ಇವೇ ಮೊದಲಾದ ಉದ್ದೇಶಗಳನ್ನು ಈ ಯೋಜನೆ ಒಳಗೊಂಡಿದೆ.
ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ, ಅವರನ್ನು ಜನತೆಗೆ ಉತ್ತರದಾಯಿಗಳನ್ನಾಗಿಸುವ ಹಾಗೂ ಒಟ್ಟಾರೆ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕವನ್ನಾಗಿಸುವ ಸರಕಾರದ ಉದ್ದೇಶ ಸ್ವಾಗತಾರ್ಹ.ಆದರೆ ಕೇಂದ್ರ ಸರಕಾರದ ಈ ಉದ್ದೇಶಿತ ಯೋಜನೆಯನ್ನು ಮೇಲ್ನೋಟಕ್ಕೆ ಗಮ ನಿಸಿದಾಗ ಇದೊಂದು ಕಾರ್ಪೋರೆಟ್ ಶೈಲಿಯ ಆಡಳಿತ ವ್ಯವಸ್ಥೆಯಂತೆ ಭಾಸವಾಗದಿರದು. ಹಣಕಾಸು, ಆರೋಗ್ಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಿಬಂದಿ ಮತ್ತು ತರಬೇತಿಯಂಥ ಮಹತ್ವದ ಸಚಿವಾಲಯ ಮತ್ತು ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಖಾಸಗಿ ಸಂಸ್ಥೆಗಳನ್ನು ನೇಮಕ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕಿದೆ. ಪರಿಶೀಲನೆ, ಪರಿಷ್ಕರಣೆ, ತರಬೇತಿಯ ನೆಪದಲ್ಲಿ ಸರಕಾರಿ ವ್ಯವಸ್ಥೆಯ ಮಾಹಿತಿಗಳು, ಪ್ರಮುಖ ಅಂಕಿಅಂಶಗಳು, ದಾಖಲೆಗಳು ಸೋರಿಕೆಯಾಗದಂತೆ ಕಟ್ಟುನಿಟ್ಟಿನ ನಿಗಾ ಇರಿಸುವುದು ಅತ್ಯವಶ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.