![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 2, 2021, 4:23 PM IST
ರಾಮನಗರ: ಎರಡನೇ ಅಲೆಗಿಂತಲೂಮೂರನೇ ಅಲೆ ಇನ್ನೂ ಗಂಭೀರವಾಗಿರುತ್ತದೆಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಹೀಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆ ಪರಿಸ್ಥಿತಿ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕುಎಂದು ರಾಮನಗರ ವಿಧಾನಸಭಾ ಕ್ಷೇತ್ರದಶಾಸಕಿ ಅನಿತಾ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ಪಿಡಿಒಗಳು, ತಾಪಂ, ಜಿಪಂ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ವಚ್ಯುಯಲ್ ಸಭೆನಡೆಸಿದ ಅವರು ಮಾತನಾಡಿ, ಮೂರನೇಅಲೆಯ ತೀವ್ರತೆಯ ಬಗ್ಗೆ ತಜ್ಞರ ಚರ್ಚೆಗಳಾಗುತ್ತಿವೆ. ನಾವು ಸಿದ್ಧರಾಗಬೇಕಾಗಿದೆ.ಮುಂಜಾಗ್ರತೆಗೆ ಬೇಕಾದ ಎಲ್ಲಾ ಕ್ರಮಗಳನ್ನುಕಲೆ ಹಾಕಿ ಎಂದು ಸಲಹೆ ನೀಡಿದರು.ವಿಶೇಷವಾಗಿ ಗ್ರಾಮೀಣ ಭಾಗದಲ್ಲಿಕೋವಿಡ್ ಸೋಂಕಿನ ಬಗ್ಗೆ ನಿರಂತರ ಜಾಗೃತಿವಹಿಸಬೇಕಾಗಿದೆ. ಮೂರನೇ ಅಲೆಯಬಗ್ಗೆಯೂ ಅರಿವು ಮೂಡಿಸಿ ಎಂದುಹೇಳಿದರು.
ಆಹಾರ ಕಿಟ್ ವಿತರಿಸಿ: ಕೋವಿಡ್ ತುರ್ತುನಿಧಿ ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿನ ಅನುದಾನವನ್ನು ಬಳಸಿಕೊಂಡುಕ್ಷೇತ್ರದಲ್ಲಿನ ಬಡವರನ್ನು ಗುರುತಿಸಿ, ವಿಶೇಷಸಂದರ್ಭ ಎಂದು ಪರಿಗಣಿಸಿ ಆಹಾರ ವಿತರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒಇಕ್ರಂ ಅವರಿಗೆ ಸೂಚಿಸಿದರು.
ಕೋವಿಡ್ ಕೇರ್ ಸೆಂಟರ್‌ಗಳಿಗೆ ಆಗಾಗ್ಗೆಭೇಟಿ ನೀಡಿ ಪರಿಶೀಲಿಸಿ, ಕ್ರಮವಹಿಸುವಂತೆಸಿಇಒ ಇಕ್ರಂ ಅವರಿಗೆ ಸೂಚಿಸಿದರು. ನರೇಗಯೋಜನೆಯಡಿ ಕಾಮಗಾರಿಗಳ ಬಗ್ಗೆಮಾಹಿತಿ ಪಡೆದುಕೊಂಡ ಅವರು, ಟಾರ್ಗೆಟ್‌ರೀಚ್ ಮಾಡಿ ಎಂದರು.ಸಭೆಯಲ್ಲಿ ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿ, ಕನಕಪುರ ತಹಶೀಲ್ದಾರ್(ಪ್ರಭಾರ) ಹರ್ಷವರ್ಧನ, ಡಿಎಚ್‌ಒ ಡಾ.ನಿರಂಜನ್, ಆರ್‌ಸಿಎಚ್ ಅಧಿಕಾರಿ ಡಾ.ಪದ್ಮಾ,ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಾಯಕನಿರ್ದೇಶಕ ಸಿ.ವಿ.ರಾಮನ್, ರಾಮನಗರ ಇಒಶಿವಕುಮಾರ್, ಪಿಎಚ್‌ಸಿಗಳ ವೈದ್ಯರು,ರಾಮನಗರನಗರಸಭೆಕಮೀಷನರ್ ನಂದಕುಮಾರ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂಗಳ ಪಿಡಿಒಗಳು ಭಾಗವಹಿಸಿದ್ದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.