ಉದ್ಯಮದ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ: ಮುಖ್ಯ ಕಾರ್ಯದರ್ಶಿ
Team Udayavani, Jun 2, 2021, 4:54 PM IST
ಬೆಂಗಳೂರು: ಕೊವಿಡ್ ಎರಡನೇ ಅಲೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಕುರಿತು ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದ್ದಾರೆ.
ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಲಾಕ್‌ಡೌನ್ ನಂತರದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಉದ್ಯಮ ವಲಯದೊಂದಿಗೆ ಬುಧವಾರ ನಡೆಸಿದ ವರ್ಚುವಲ್ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೊವಿಡ್ ಸಂದರ್ಭದಲ್ಲಿ ಉದ್ಯಮಗಳು ಎದುರಿಸುತ್ತಿರುವ ಸಂಕಷ್ಟ ಹಾಗೂ ಕೈಗೊಳ್ಳಬಹುದಾದ ಪರಿಹಾರಗಳ ಕುರಿತು ಕೈಗಾರಿಕೋದ್ಯಮಿಗಳು ಹಾಗೂ ನಾನಾ ವಾಣಿಜ್ಯ ಸಂಘಗಳ ಪದಾಧಿಕಾರಿಗಳು ನೀಡಿದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಉದ್ಯಮಿಗಳು ಮುಂದಿಟ್ಟ ಬೇಡಿಕೆಗಳು ಸಮಂಜಸವಾಗಿದ್ದು. ಎಲ್ಲವೂ ಆರ್ಥಿಕ ನೆರವನ್ನು ಬೇಡುತ್ತಿಲ್ಲ. ಉದ್ಯಮಿಗಳ ಮನವಿಯನ್ನು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕೈಗಾರಿಕೆಗಳ ಪುನಾರಂಭ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು,”ಎಂದರು.
ಇದನ್ನೂ ಓದಿ: ಲಾಕ್ ಡೌನ್ ವಿಸ್ತರಣೆ ಮಾಡುತ್ತೇವೆ, ಕೆಲವೊಂದು ನಿರ್ಬಂಧಗಳ ಸಡಿಲಿಕೆ ಮಾಡುತ್ತೇವೆ: ಬಿ ಎಸ್ ವೈ
“ಮೇ ತಿಂಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿತ್ತು. ಕೊವಿಡ್19 ಎರಡನೇ ಅಲೆಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಇನ್ನು ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಿ, ಕೈಗಾರಿಕೆಗಳ ಕಾರ್ಯಚರಣೆಗೆ ಅನುವು ಮಾಡಿಕೊಡಬಹುದು. ಆರ್ಥಿಕತೆಯ ಪುನಾರಂಭಿಸಲು ಸಮಯ ಬಂದಿದೆ,”ಎಂದು ತಿಳಿಸಿದರು.
ಕೊವಿಡ್ ಎರಡನೇ ಅಲೆ ಎದುರಿಸಲು ಸರ್ಕಾರದ ಜತೆಗೆ ಕೈ ಜೋಡಿಸಿರುವ ಕೈಗಾರಿಕೆಗಳು, ವಾಣಿಜ್ಯ ಸಂಘಟನೆಗಳಿಗೆ ಧನ್ಯವಾದ ಹೇಳಿದ ಮುಖ್ಯಕಾರ್ಯದರ್ಶಿ, “ಎಲ್ಲ ಕೈಗಾರಿಕೆಗಳು ಸಹಕಾರ ನೀಡಿವೆ. ಆಹಾರ, ಔಷಧ ವಿತರಣೆ, ಆಕ್ಸಿಜನ್ ಪೂರೈಕೆ, ಅಗತ್ಯ ವಸ್ತುಗಳ ಪೂರೈಕೆ, ಪೂರೈಕೆ ಸರಪಳಿಗೆ ಧಕ್ಕೆ ಆಗದಂತೆ ಉದ್ಯಮಗಳು ಕಾರ್ಯನಿರ್ವಹಿಸಿವೆ. ಮೂರನೇ ಅಲೆಯನ್ನ ಸಮರ್ಥವಾಗಿ ಎದುರಿಸಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಅದಕ್ಕೂ ಉದ್ಯಮಗಳ ಸಹಕಾರ ಬೇಕು,” ಎಂದರು.
ಇದನ್ನೂ ಓದಿ: ಮನೆಯ ಹಿರಿಜೀವಗಳನ್ನು ಕಿತ್ತುಕೊಂಡ ಕ್ರೂರಿ : ಕೋವಿಡ್ ಗೆ ಸಹೋದರರು ಬಲಿ
ಉದ್ಯಮಗಳು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು:
- ಸಣ್ಣ, ಅತಿಸಣ್ಣ ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಫ್ರಂಟ್‌ಲೈನ್ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ನೀಡಬೇಕು.
- ಬಾರ್ ಮತ್ತು ರೆಸ್ಟೋರೆಂಟ್‌ಗಳು ಸದ್ಯ ಕಾರ್ಯ ನಿರ್ವಹಿಸುತ್ತಿಲ್ಲವಾದ ಕಾರಣ ಮಾಸಿಕ ಪರವಾನಗಿ ಶುಲ್ಕ (75000ರೂ) ಪಾವತಿಗೆ ವಿನಾಯಿತಿ ನೀಡಬೇಕು.
- ಬೆಸ್ಕಾಂ ಶುಲ್ಕ, ಕನಿಷ್ಠ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ
- ಗುಜರಾತ್, ಮಾಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿರುವ ಪ್ರಮುಖ ಉದ್ಯಮಗಳಿಗೆ ಅಗತ್ಯ ಉತ್ಪನ್ನಗಳ ಪೂರೈಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪೂರೈಕೆ ಸರಪಳಿಗೆ ತೊಂದರೆಆಗದಂತೆ ಉದ್ಯಮಗಳು ಪುನಾರಂಭಕ್ಕೆ ಸಹಕರಿಸಬೇಕು.
- ನಗರ ಪ್ರದೇಶಗಳಲ್ಲಿರುವ ನರೇಗಾ ಯೋಜನೆ ಜಾರಿ
- ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಕಲ್ಪಿಸಿ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್ ಪ್ರಕಾಶ್, ಉದ್ಯಮಿ, ಟಿ.ವಿ.ಮೋಹನ್ ದಾ ಸ್ ಪೈ, ಫಿಕ್ಕಿ ಅಧ್ಯಕ್ಷ ಉಲ್ಲಾಸ್ ಕಾಮತ್, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್.ಎಂ. ಸುಂದರ್, ಉಪಾಧ್ಯಕ್ಷ ಐ.ಎಸ್. ಪ್ರಸಾದ್, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಆಟೋಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಎಂಪಿ ಶ್ಯಾಮ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್, , ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್, ಐಟಿ ವಲಯದ ಪ್ರತಿನಿಧಿ ಪ್ರಹ್ಲಾದ್, ಅಸೋಚಾಮ್‌ನ ಬಿ.ವಿ. ನಾಯ್ಡು, ಪ್ರವಾಸೋದ್ಯಮ ವಲಯದ ಪ್ರತಿನಿಧಿ ಶ್ಯಾಮರಾಜು, ಜವಳಿ ಉದ್ದಿಮೆ ವಲಯದ ಅಧ್ಯಕ್ಷ ಆನಂದ್, ರಿಯಲ್‌ಎಸ್ಟೇಟ್ ಉದ್ಯಮ ಸಂಘದ ಗೋವಿಂದರಾಜ್ ಉಪಸ್ಥಿತಿರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.