ಕೋವಿಡ್ ಲಸಿಕೆ ನೀತಿ : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ
ಕೇಂದ್ರದ ಲಸಿಕಾ ನೀತಿಯು 'ಮೇಲ್ನೋಟಕ್ಕೆ ಇದು ಅಸಮರ್ಪಕ ಕಾರ್ಯವೈಖರಿಯಂತಿದೆ’ : ಸುಪ್ರೀಂ
Team Udayavani, Jun 2, 2021, 6:49 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವ ಮತ್ತು ಆ ವಯಸ್ಸಿಗಿಂತ ಕೆಳಗಿನ(18-44) ವಯೋಮಾನದವರಿಗೆ ಲಸಿಕೆಗಾಗಿ ಪಾವತಿಸುವ ವ್ಯವಸ್ಥೆಯ ಕೇಂದ್ರದ ಲಸಿಕಾ ನೀತಿಯು “ಮೇಲ್ನೋಟಕ್ಕೆ ಇದು ಅಸಮರ್ಪಕ ಕಾರ್ಯವೈಖರಿಯಂತಿದೆ’ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿ ಬೀಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪ್ರಮಾಣಗಳ ಕೊರತೆಯ ವಿಷಯ ಹಾಗೂ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು, ತನ್ನ ಲಸಿಕಾ ನೀತಿಯನ್ನು ಪರಿಶೀಲಿಸಲು ಮತ್ತು “ಡಿಸೆಂಬರ್ 31, 2021 ರವರೆಗೆ ಲಸಿಕೆಗಳ ಲಭ್ಯತೆಯ ಮಾರ್ಗಸೂಚಿಯನ್ನು ದಾಖಲಿಸುವಂತೆ” ಕೇಂದ್ರಕ್ಕೆ ಆದೇಶಿಸಿದೆ.
ಲಸಿಕೆಗಳ ಬೆಲೆಯ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಲಯವು, ಭಾರತದಲ್ಲಿ ಲಭ್ಯವಿರುವ ಲಸಿಕೆಗಳ ಬೆಲೆಯನ್ನು ಅಂತಾರಾಷ್ಟ್ರೀಯ ಬೆಲೆಗಳಿಗೆ ಹೋಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಭಾರತದಲ್ಲಿ, 18-44 ವರ್ಷ ವಯಸ್ಸಿನವರು ಲಸಿಕೆಗಳಿಗೆ ದುಬಾರಿ ಬೆಲೆಯನ್ನು ಪಾವತಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಹೆಚ್ಚಿನ ರಾಷ್ಟ್ರಗಳಲ್ಲಿ, ಲಸಿಕೆಗಳನ್ನು ಸರ್ಕಾರಗಳು ಸಂಗ್ರಹಿಸಿ ಜನರಿಗೆ ಯಾವುದೇ ವೆಚ್ಚವಿಲ್ಲದೆ ವಿತರಿಸುತ್ತಿವೆ.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 85 ಅಂಕ ಕುಸಿತ, ಅಲ್ಪ ಏರಿಕೆ ಕಂಡ ನಿಫ್ಟಿ
ವ್ಯಾಕ್ಸಿನೇಷನ್ ಸಮಸ್ಯೆಯನ್ನು “ಸಂಪೂರ್ಣವಾಗಿ ನಿರ್ಣಾಯಕ” ಎಂದು ಕರೆದ ನ್ಯಾಯಾಲಯ, ಪ್ರಸ್ತುತ 18-44 ವರ್ಷ ವಯಸ್ಸಿನ ಜನರು ಕೇವಲ ಸೋಂಕಿಗೆ ಒಳಗಾಗುತ್ತಿರುವುದಲ್ಲ, ಸೋಂಕಿನ ತೀವ್ರ ಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರದ ಲಸಿಕಾ ನೀತಿಯ ಬಗ್ಗೆ ಚಾಟಿ ಏಟು ಕೊಟ್ಟಿದೆ.
ಈ ‘ಸಾಂಕ್ರಾಮಿಕ ರೋಗದ ಸ್ವರೂಪ” ಕಿರಿಯ ವಯಸ್ಸಿನವರಿಗೂ ಲಸಿಕೆ ಹಾಕುವಂತಹ ಸನ್ನಿವೇಶವನ್ನು ಸೃಷ್ಟಿಸಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ತಿಳಿಸಿದೆ.
ಇನ್ನು, “18-44 ವಯೋಮಾನದ ವ್ಯಕ್ತಿಗಳಿಗೆ ಲಸಿಕೆ ನೀಡುವ ಪ್ರಾಮುಖ್ಯತೆಯಿಂದಾಗಿ, ಮೊದಲ 2 ಹಂತಗಳ ಅಡಿಯಲ್ಲಿ ಈ ವಯೋ ಮಾನದವರಿಗೆ ಉಚಿತ ಲಸಿಕೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ನಂತರ ನೀತಿ ಮತ್ತು ಅದನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳು ಪಾವತಿ ಮೂಲಕ 18-44 ವಯೋಮಾನದವರಿಗೆ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಕೇಂದ್ರ ಸರ್ಕಾರದ ಲಸಿಕಾ ನೀತಿ ಅಸಮರ್ಪಕ ಎಂದಿದೆ.
45 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ಮೇ 1 ರಂದು ಪ್ರಕಟಿಸಿತ್ತು. ಆ ವಯೋಮಾನಕ್ಕಿಂತ ಕೇಳಗಿನವರು ಉತ್ಪಾದಕರಿಂದ ಶೇಕಡಾ 50 ರಷ್ಟು ಕಡಿಮೆ ದರದಲ್ಲಿ ಖರೀದಿಸಬಹುದೆಂದಿತ್ತು, ಆದರೇ, ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಲಸಿಕೆಗಳು ಮಾರಾಟವಾಗುತ್ತಿವೆ. ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆಗೆ ಲಸಿಕೆನ್ನು ನೀಡುತ್ತಿವೆ.
ಇನ್ನು, ಕೇಂದ್ರ ಸರ್ಕಾರದ ಈ ಲಸಿಕಾ ನೀತಿಯನ್ನು ವಿರೋಧ ಪಕ್ಷ ಕಾಂಗ್ರೆಸ್ ಕೂಡ ಪ್ರಶ್ನಿಸಿದ್ದು, “ಒಂದು ದೇಶ, ಒಂದು ಬೆಲೆ” ಗಾಗಿ ಕೇಂದ್ರವನ್ನು ಒತ್ತಾಯಿಸಿದ್ದಲ್ಲದೇ, ಲಸಿಕೆಯನ್ನು ಕೇಂದ್ರ ಸರ್ಕಾರ ಲಾಭದ ಅಸ್ತ್ರವನ್ನಾಗಿ ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದೆ.
ಇನ್ನು, ಲಸಿಕೆ ಸಂಗ್ರಹಕ್ಕಾಗಿ, 35,000 ಕೋಟಿ ಬಜೆಟ್ ನನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲು ಕೇಂದ್ರವನ್ನು ಕೋರ್ಟ್ ಕೇಳಿದೆ. “ಲಸಿಕೆಗಾಗಿ 35,000 ಕೋಟಿ ನಿಗದಿಪಡಿಸಿದ್ದರೆ, ಅದನ್ನು 18-44 ವಯಸ್ಸಿನವರಿಗೆ ಲಸಿಕೆ ಹಾಕಲು ಏಕೆ ಬಳಸಲಾಗುವುದಿಲ್ಲ” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಕೇಂದ್ರವು ತನ್ನ ಲಸಿಕೆ ಖರೀದಿ ಇತಿಹಾಸದ ಸಂಪೂರ್ಣ ಡೇಟಾವನ್ನು ಇಲ್ಲಿಯವರೆಗೆ ನೀಡುವಂತೆ ಕೇಳಿಕೊಂಡಿದ್ದಲ್ಲದೇ, ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳ ಡೋಸ್ ಗಳ ಸಂಖ್ಯೆ ಮತ್ತು ಪೂರೈಕೆಯ ದಿನಾಂಕದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಕೇಳಿಕೊಂಡಿದೆ.
ಕೇಂದ್ರದ ವಾದವನ್ನು ಪ್ರತಿರೋಧಿಸಿದ ಕೋರ್ಟ್, “ಕಾರ್ಯನಿರ್ವಾಹಕ ನೀತಿಗಳಿಂದ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಾಗ ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ಇರಲು ಸಾಧ್ಯವಿಲ್ಲ” ಎಂದು ಹೇಳಿದೆ.
ಸಂಭವನೀಯ ಮೂರನೇ ಅಲೆಯ ಸಿದ್ಧತೆ, ಮಕ್ಕಳ ಸುರಕ್ಷತೆಯ ಬಗ್ಗೆ ನಿಲುವ ಹಾಗೂ ಲಸಿಕೆ ಅಭಿಯಾನದ ಜೊತೆಗೆ ಡಿಸೆಂಬರ್ 31ರೊಳಗೆ ಲಭ್ಯವಿರುವ ಲಸಿಕೆಗಳ ಪ್ರಮಾಣಗಳನ್ನು ಒಳಗೊಂಡು ಸ್ಮಶಾನ ಕಾರ್ಮಿಕರ ಸಂಖ್ಯೆ ಇತ್ಯಾದಿ ವಿಚಾರಗ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.
ಇದನ್ನೂ ಓದಿ : ಕೋವಿಡ್ ಲಾಕ್‌ಡೌನ್ ಆದ ಬೆಳಪು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.