![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 2, 2021, 10:53 PM IST
ನವದೆಹಲಿ: ಕೇಂದ್ರಸರ್ಕಾರ ರೂಪಿಸಿರುವ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳು ತನಗೆ ಅನ್ವಯವಾಗುವುದಿಲ್ಲ ಎಂದು ಗೂಗಲ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ನಿಂದನಾತ್ಮಕ ಸಂಗತಿಗಳು ಅಂತರ್ಜಾಲದಲ್ಲಿದ್ದರೆ; ಅದನ್ನು ಅಳಿಸುವ ಸಂಗತಿಯ ಬಗ್ಗೆ ನಡೆದ ವಿಚಾರಣೆ ಹಿನ್ನೆಲೆಯಲ್ಲಿ ಗೂಗಲ್ ಮೇಲಿನಂತೆ ಪ್ರತಿಕ್ರಿಯಿಸಿದೆ. ಈ ಬಗ್ಗೆ ಜು.25ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಅಂತರ್ಜಾಲ ಸೇವಾ ಪೂರೈಕೆದಾರರ ಸಂಸ್ಥೆ, ಫೇಸ್‌ಬುಕ್‌ಗೆ ಕೋರ್ಟ್ ಆದೇಶಿಸಿದೆ.
ಇತ್ತೀಚೆಗೆ ಮಹಿಳೆಯೊಬ್ಬರು; ತನ್ನ ಚಿತ್ರಗಳನ್ನು ಅಶ್ಲೀಲ ವೆಬ್‌ವೊಂದರಲ್ಲಿ ಪ್ರಕಟಿಸಲಾಗಿದೆ, ನ್ಯಾಯಾಲಯದ ಆದೇಶವಿದ್ದರೂ ಅದನ್ನು ವಿಶ್ವಾದ್ಯಂತ ಅಳಿಸಿಲ್ಲ ಎಂದು ದೂರಿದ್ದರು. ಈ ಸಂಬಂಧ ಹಿಂದೆ ಏಕಸದಸ್ಯಪೀಠ ನೀಡಿದ ತೀರ್ಪಿನಲ್ಲಿ, ಗೂಗಲ್ ಆ ಅಶ್ಲೀಲಚಿತ್ರಗಳನ್ನು ಸಿಗದಂತೆ ಮಾಡಬೇಕು ಎನ್ನಲಾಗಿತ್ತು. ಅಷ್ಟು ಮಾತ್ರವಲ್ಲ, ಗೂಗಲನ್ನೂ ಸಾಮಾಜಿಕ ತಾಣವೆಂಬಂತೆ ಪರಿಗಣಿಸಿತ್ತು. ತಾನು ಸಾಮಾಜಿಕ ತಾಣವಲ್ಲ; ತನಗೆ ಕೇಂದ್ರದ ನೂತನ ಐಟಿ ನಿಯಮಗಳು ಅನ್ವಯಿಸುವುದಿಲ್ಲ, ಆದ್ದರಿಂದ ಏಕಸದಸ್ಯಪೀಠ ನೀಡಿರುವ ತೀರ್ಪನ್ನು ರದ್ದು ಮಾಡಬೇಕೆಂದು ಗೂಗಲ್ ವಾದಿಸಿದೆ.
ಇದೇ ವೇಳೆ ಕೇಂದ್ರ ನೂತನ ನಿಯಮಗಳಿಗೆ ಸ್ಪಂದಿಸಿರುವ ಟ್ವಿಟರ್; ಸಮಸ್ಯೆ ಪರಿಹಾರ ಅಧಿಕಾರಿಯೊಬ್ಬರನ್ನು ನೇಮಿಸಿದೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.