ಕೋವಿಡ್-19 ಸೋಂಕಿತರ ಪತ್ತೆಗೆ ಎಕ್ಸ್‌ರೇ ಸೇತು
ಎಕ್ಸ್‌ರೇ ಚಿತ್ರದ ಮೇಲೆ ಕ್ಲಿಕ್ ಮಾಡಿದ ಬಳಿಕ ಎರಡು ಪುಟದ ವರದಿ ಸ್ವಯಂಚಾಲಿತವಾಗಿ ಮುದ್ರಿತವಾಗುತ್ತದೆ.
Team Udayavani, Jun 3, 2021, 12:50 PM IST
ಹೊಸದಿಲ್ಲಿ: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಬಗ್ಗೆ ಈಗಲೂ ಹಲವು ಅಧ್ಯಯನಗಳು ನಡೆಯುತ್ತಿವೆ. ಅತ್ಯಂತ ಕಡಿಮೆ ಮಟ್ಟದ ರೆಸಲ್ಯೂಷನ್ ಇರುವ ಎದೆಯ ಎಕ್ಸ್‌ರೇ ಮೂಲಕ ಸೋಂಕಿತರನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ:ಬೇರೆ ಮದುವೆಯಾದರೂ ಲವ್ ಮುಂದುವರಿಸಿದ್ದ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನೆರವಿನೊಂದಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರವರ್ತಿತ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ ತಂತ್ರಜ್ಞಾನ ಪಾರ್ಕ್ (ಎಆರ್ ಟಿಪಿಎಆರ್‌ಕೆ) ಮತ್ತು ಸ್ಟಾರ್ಟ್‌ಅಪ್, “ನಿರ್ಮಯಿ’ – ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಈ ಹೊಸ ವ್ಯವಸ್ಥೆಯನ್ನು ರೂಪಿಸಿವೆ. ಎಕ್ಸ್‌ರೇ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲೂ ಸಾಧ್ಯವಿದೆ. ಸೋಂಕು ಪರೀಕ್ಷೆಯಲ್ಲಿ ಶೇ.98.86ರಷ್ಟು ನಿಖರತೆ ಇದೆ.
ಹೊಸ ವ್ಯವಸ್ಥೆಗೆ ಎಕ್ಸ್‌ರೇ ಸೇತು ಎಂದು ಹೆಸರಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ 1,200ಕ್ಕೂ ಅಧಿಕ ವರದಿಗಳನ್ನು ಹೊಸ ವ್ಯವಸ್ಥೆಯ ಆಧಾರದಲ್ಲಿ ಪರಿಶೀಲನೆ ನಡೆಸಲಾಗಿದೆ. ಯಾವ ಭಾಗಕ್ಕೆ ಸೋಂಕು ತಗಲಿದೆ ಎಂಬುದನ್ನು ವೈದ್ಯರ ಸಹಾಯದಿಂದ ಪತ್ತೆ ಹಚ್ಚಲಾಗುತ್ತದೆ.
ಅದಕ್ಕಾಗಿ ವೈದ್ಯರು www.xraysetu.com ಎಂಬ ವೆಬ್ ಸೈಟ್‌ಗೆ ಲಾಗ್‌ಇನ್ ಆಗಬೇಕು. ಬಳಿಕ ‘ಟ್ರೈ ದ ಫ್ರೀ ಎಕ್ಸ್ ರೇ ಸೇತು ಬೇಟಾ’ ಬಟನ್ ಒತ್ತಬೇಕು. ನಂತರ ಹೊಸ ಪುಟ ತೆರೆದುಕೊಳ್ಳಲಿದೆ. ಸ್ಮಾರ್ಟ್ ಫೋನ್ ನಲ್ಲೂ ವೈದ್ಯರು 8046163838 ಎಂಬ ವಾಟ್ಸ್ ಆ್ಯಪ್ ಸಂಖ್ಯೆಗೆ ಮೆಸೇಜ್ ಕಳುಹಿಸುವ ಮೂಲಕ ಎಕ್ಸ್‌ರೇ ಸೇತು ಪ್ರಕ್ರಿಯೆ ಆರಂಭಿ ಸಬಹುದು. ಸೋಂಕಿತನ ಎದೆಯ ಎಕ್ಸ್‌ರೇ ಚಿತ್ರದ ಮೇಲೆ ಕ್ಲಿಕ್ ಮಾಡಿದ ಬಳಿಕ ಎರಡು ಪುಟದ ವರದಿ ಸ್ವಯಂಚಾಲಿತವಾಗಿ ಮುದ್ರಿತವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.