ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು
Team Udayavani, Jun 3, 2021, 3:06 PM IST
ಚಾಮರಾಜನಗರ: ಒಂದೇ ಕುಟುಂಬದನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಬುಧವಾರಜರುಗಿದೆ. ಗ್ರಾಮದ ಮಹದೇವಪ್ಪ (47),ಅವರ ಪತ್ನಿ ಮಂಗಳಮ್ಮ (40) ಅವರಮಕ್ಕಳಾದ ಜ್ಯೋತಿ (14), ಶ್ರುತಿ (12) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಗ್ರಾಮದವರೊಬ್ಬರುಮಹಾದೇವಪ್ಪ ಅವರನ್ನುಕಬ್ಬಿನ ತೊಂಡೆ ತರುವಸಲುವಾಗಿ ಕರೆಯಲು ಹೋದಾಗ ಬಾಗಿಲುತೆರೆಯಲಿಲ್ಲ. ಮನೆಯೊಳಗಿನಿಂದ ಯಾವುದೇಶಬ್ದ ಬರಲಿಲ್ಲ. ಆಗ ಮನೆಯ ಮೇಲೆ ಹತ್ತಿಹೆಂಚು ತೆರೆದು ನೋಡಿದಾಗ, ನಾಲ್ವರೂ ನೇಣುಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.ಮಹಾದೇವಪ್ಪಅವರಿಗೆಮೂವರುಪುತ್ರಿಯರಿದ್ದು, ಹಿರಿಯ ಪುತ್ರಿಗೆ ವಿವಾಹವಾಗಿದೆ. ಇನ್ನಿಬ್ಬರು ಹೆಣ್ಣು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು.
ಕುಟುಂಬದ ಮುಖ್ಯಸ್ಥ ಮಹಾದೇವಪ್ಪಒಂದೂವರೆ ಎಕರೆ ಮಳೆ ಆಶ್ರಿತ ಜಮೀನುಹೊಂದಿದ್ದು,ಕೂಲಿ ಕಾರ್ಮಿಕರಾಗಿದ್ದರು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಾಮಾಜಿಕ ಅಂತರದಭಯ ಕಾಡಿತ್ತಾ?
ಮಹದೇವಪ್ಪ ಅವರಿಗೆ ಕೋವಿಡ್ ಪಾಸಿಟಿವ್‌ಆಗಿ, ಗುಣಮುಖರಾಗಿ 20 ದಿನಗಳಾಗಿತ್ತು.ಮನೆಯ ಉಳಿದ ಸದಸ್ಯರಿಗೆ ಸೋಂಕು ತಗುಲಿರಲಿಲ್ಲ. ಸೋಂಕು ಬಂದು ಚೇತರಿಸಿಕೊಂಡಿದ್ದರೂ, ಸಾಮಾಜಿಕವಾಗಿ ಜನ ತಮ್ಮನ್ನುದೂರ ಇಡಬಹುದೆಂಬ ಆತಂಕ ಮಹದೇವಪ್ಪಅವರಿಗಿತ್ತು ಎನ್ನಲಾಗಿದೆ.
ಕೋವಿಡ್ ಬಂದು ಗುಣಮುಖರಾದ ನಂತರವೂ ಅವರು,ಮನೆಯೊಳಗೇ ಇದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಹದೇವಪ್ಪ ಮಂಗಳವಾರ ರಾತ್ರಿ9ಗಂಟೆ ಸಮಯದಲ್ಲಿ ಗ್ರಾಮದಕುಮಾರ್ ಎಂಬುವರ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ.
ಆ ಸಂದರ್ಭದಲ್ಲಿ ಫೋನಿನಿಂದ ಮಾತನಾಡಿದರೂ ಕೊರೊನಾ ಹರಡುತ್ತದೆಯೇ ಎಂದುಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಯಾರು ನಿನಗೆ ಹೇಳಿದ್ದು? ಆ ರೀತಿ ಏನೂ ಆಗಲ್ಲ ಎಂದುಕುಮಾರ್ ಸಮಾಧಾನ ಹೇಳಿದ್ದಾರೆ. ಆಗ ಆತ ಯಾವುದೇ ಸಮಸ್ಯೆ ತಿಳಿಸಲಿಲ್ಲ. ಆತನಿಗೆ ಒಂದುತಿಂಗಳ ಹಿಂದೆಕೋವಿಡ್ ಬಂದು ಗುಣಮುಖನಾಗಿದ್ದ. ನಾನೇ ಚಿಕಿತ್ಸೆ ಗೆ ಸಹಾಯ ಮಾಡಿದ್ದಾರೆ ಎಂದುಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.