ಶೂಟಿಂಗ್ ಇಲ್ಲದೆ ಬೋರು.. ಕರಾವಳಿ ಬೆಡಗಿ ಸೋನಲ್ ಲಾಕ್ ಡೌನ್ ಡೈರಿ

Team Udayavani, Jun 4, 2021, 11:30 AM IST

sonal monteiro

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಿನಿಮಾಗಳ ಪ್ರೀ-ಪ್ರೊಡಕ್ಷನ್‌ ವರ್ಕ್‌, ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್ಸ್‌, ಪ್ರಮೋಶನ್ಸ್‌, ರಿಲೀಸ್‌ ಎಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ಹೀಗಾಗಿ ಅನಿವಾರ್ಯವಾಗಿ ಸಿನಿಮಾದ ಕಲಾವಿದರು, ತಂತ್ರಜ್ಞರು ಕೂಡ ಬೇರೆ ವಿಧಿಯಿಲ್ಲದೆ ಮನೆಯಲ್ಲೇ ಲಾಕ್‌ ಆಗಬೇಕಿದೆ. ಅಂತೆಯೇ ಸ್ಯಾಂಡಲ್‌ವುಡ್‌ನ‌ ಬಿಝಿ ನಾಯಕ ನಟಿಯರಲ್ಲಿ ಒಬ್ಬರಾಗಿರುವ ಸೋನಾಲ್‌ ಮಾಂತೆರೋ ಕೂಡ ಎಲ್ಲರಂತೆ ಮನೆಯಲ್ಲೇ ಲಾಕ್‌ ಆಗಿದ್ದಾರೆ.

“ಪಂಚತಂತ್ರ’ ಸಿನಿಮಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸೋನಾಲ್‌ ಕೈಯಲ್ಲಿ ಸದ್ಯ ಐದಕ್ಕೂ ಹೆಚ್ಚು ಸಿನಿಮಾಗಳಿವೆ. ಕಳೆದ ಎರಡು – ಮೂರು ವರ್ಷಗಳಲ್ಲಿ ಬಿಡುವಿಲ್ಲದೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗಿರುವ ಸೋನಾಲ್‌, ಸಿನಿಮಾ ಕೆಲಸಗಳಿಲ್ಲದೆ ವಾರಗಳ ಕಾಲ ಮನೆಯಲ್ಲಿ ಕುಳಿತಿರುವುದು ಇದೇ ಮೊದಲು.

ಅವರೇ ಹೇಳುವಂತೆ, “ಎಲ್ಲರಿಗೂ ಗೊತ್ತಿರುವಂತೆ “ಪಂಚ ತಂತ್ರ’ ಸಿನಿಮಾದ ನಂತರ ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಆಫ‌ರ್ ಬಂದವು. ಹಾಗೆ ಬಂದ ಆಫ‌ರ್ನಲ್ಲಿ ನನಗೆ ಇಷ್ಟವಾದಂತವುಗಳನ್ನ ಒಪ್ಪಿಕೊಳ್ಳುತ್ತಿದ್ದೇನೆ. ಅದರಲ್ಲಿ ಈಗಾಗಲೇ ಕೆಲವು ಸಿನಿಮಾಗಳು ರಿಲೀಸ್‌ ಆಗಿವೆ. ಇನ್ನೂಕೆಲವು ಸಿನಿಮಾಗಳ ಶೂಟಿಂಗ್‌ ಮುಗಿದಿದ್ದು, ರಿಲೀಸ್‌ಗೆ ರೆಡಿಯಿವೆ. ಇನ್ನುಕೆಲವು ಸಿನಿಮಾಗಳದ್ದು ಶೂಟಿಂಗ್‌ ನಡೆಯುತ್ತಿದೆ. ಸುಮಾರು ಮೂರು ವರ್ಷಗಳಿಂದ ಕಂಪ್ಲೀಟ್ ಸಿನಿಮಾದಲ್ಲೇ ಬಿಝಿಯಾಗಿದ್ದೇನೆ. ಕೆಲವೊಮ್ಮೆ ನನ್ನ ಡೇಟ್ಸ್‌ ಹೊಂದಾಣಿಕೆ ಮಾಡಿಕೊಳ್ಳುವುದೇ ನನಗೆ ದೊಡ್ಡ ಚಾಲೆಂಜ್‌ ಆಗಿರುತ್ತಿತ್ತು. ಒಂದೇ ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್‌ ಮಾಡಿದ್ದೂ ಇದೆ. ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಸಮಯಕಳೆಯಬೇಕು ಅಂದ್ರೂ ಸಾಧ್ಯವಾಗುತ್ತಿರಲಿಲ್ಲ. ನನಗೆ ನನ್ನ ವರ್ಕ್‌ ಬಿಟ್ಟು ಬೇರೇನೂ ಯೋಚಿಸದಂತಾಗಿದ್ದೆ.ಕಂಪ್ಲೀಟ್‌ ವರ್ಕೋಹಾಲಿಕ್‌ ಆಗಿದ್ದೆ. ಆದ್ರೆಕೋವಿಡ್‌ ಲಾಕ್‌ ಡೌನ್‌ ಇದ್ದಕ್ಕಿದ್ದಂತೆ ನನ್ನ ಎಲ್ಲ ಕೆಲಸಗಳಿಗೂ ಬ್ರೇಕ್‌ ಹಾಕಿದೆ. ಮೂರು ವರ್ಷಗಳಿಂದ ಯಾವತ್ತೂ ಇಷ್ಟೊಂದು ಫ್ರೀ ಆಗಿರಲಿಲ್ಲ. ಈಗ ಲಾಕ್‌ಡೌನ್‌ ಮುಗಿದು ಮತ್ತೆ ಸಿನಿಮಾ ವರ್ಕ್‌ ಶುರುವಾಗುವವರೆಗೆ ಹೇಗೆ ಸಮಯಕಳೆಯೋದು ಅಂತಾನೇ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ.

ಬೋರೋ ಬೋರು…

“ಲಾಕ್‌ಡೌನ್‌ನಿಂದ ಮನೆಯಲ್ಲಿರೋದು ಅಂದ್ರೆ, ತುಂಬಾನೇ ಬೋರ್‌. ಆದ್ರೆ ಸದ್ಯದ ಮಟ್ಟಿಗೆ ಮನೆಯಲ್ಲಿರದೆ ಬೇರೆ ದಾರಿಯಿಲ್ಲ. ಈ ಸಮಯವನ್ನ ಆದಷ್ಟುಕ್ರಿಯೆಟಿವ್‌ ಆಗಿ ಬಳಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ವಕೌìಟ್‌, ಪ್ರಾಕ್ಟೀಸ್‌, ಸಿನಿಮಾ ನೋಡುವುದು ಹೀಗೆ ದಿನಕಳೆಯುತ್ತಿದೆ. ತುಂಬ ಸಮಯದ ನಂತರ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹಾಗೆಯೇ ಕೆಲವೊಮ್ಮೆ ಎಂಗೇಜ್‌ ಆಗಿರುವಂಥ ವರ್ಕ್‌ ಇಲ್ಲವಲ್ಲ ಅಂಥ ಬೇಜಾರೂ ಆಗುತ್ತದೆ. ಆದ್ರೆ ಈಗಿನ ಪರಿಸ್ಥಿತಿಯಲ್ಲಿಕೋವಿಡ್‌ ಆತಂಕದಿಂದ ಎಲ್ಲರೂ ಹೊರಬರಬೇಕಾಗಿದೆ. ಹಾಗಾಗಿ ಅನಿವಾರ್ಯವಾದ್ರೂ ಎಲ್ಲರೂ ಮನೆಯಲ್ಲೇ ಇದ್ದು ಲಾಕ್‌ಡೌನ್‌ ಪಾಲಿಸೋದು ಒಳ್ಳೆಯದು’ ಎನ್ನುತ್ತಾರೆ ಸೋನಾಲ್‌.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.