ಕೊರೊನಾ ಚಿಕಿತ್ಸಾ ವ್ಯವಸ್ಥೆಗೆ ಸರ್ಕಾರಕಕ್ಕೆ ನಿರಂತರ ಚಾಟಿ
Team Udayavani, Jun 4, 2021, 9:55 PM IST
ಹಾಸನ:ಕೊರೊನಾ 2ನೇ ಆಲೆ ಪ್ರಾರಂಭವಾದನಂತರ ಜಿಲ್ಲೆಯಲ್ಲಿ ಸಾವಿರಾರು ಜನರಿಗೆಕೊರೊನಾಸೋಂಕು ಹರಡಿತು. ನೂರಾರು ಜನರು ಜೀವಕಳೆದುಕೊಂಡರು. ಇಂತಹ ಸಂಕಷ್ಟದ ಸಮಯದಲ್ಲಿಹಲವು ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳುನೊಂದವರ ನೆರವಿಗೆ ನಿಂತಿದ್ದಾರೆ.
ಅಂತಹನೆರವು ನೀಡಿದವರ ಪೈಕಿ ಮಾಜಿ ಸಚಿವ,ಹೊಳೆನರಸೀಪುರಕ್ಷೇತ್ರದ ಶಾಸಕಎಚ್.ಡಿ.ರೇವಣ್ಣ ಮುಂಚೂಣಿಯಲ್ಲಿದ್ದಾರೆ.ಎಚ್.ಡಿ.ರೇವಣ್ಣ ಅವರು ತಮ್ಮ ಸ್ವಕ್ಷೇತ್ರಹೊಳೆನರಸೀಪುರಕ್ಕೆ ಸೀಮಿತರಾಗದೆ ಇಡೀಜಿಲ್ಲೆಯ ಜನರ ನೋವಿಗೆ ನಿರಂತರವಾಗಿಸ್ಪಂದಿಸುತ್ತಾ ಬಂದಿದ್ದಾರೆ. ಹಾಸನ ವೈದ್ಯಕೀಯಕಾಲೇಜು (ಹಿಮ್ಸ್)ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು,ಅವರ ಬಂಧು ಬಳಗದವರು, ಸ್ನೇಹಿತರು ರೇವಣ್ಣಅವರ ಹೆಸರನ್ನು ಸ್ಮರಿಸಿ ಅಂದು ಪುಣ್ಯಾತ್ಮ ರೇವಣ್ಣಅವರು ಹಿಮ್ಸ್ ಮತ್ತು ಆಸ್ಪತ್ರೆ ನಿರ್ಮಿಸಿದ್ದರಿಂದಸಾವಿರಾರು ಜೀವಗಳು ಉಳಿಯುತ್ತಿವೆ ಎಂದುಸ್ಮರಿಸುತ್ತಾರೆ. ಕೊರೊನಾ ಮೊದಲ ಅಲೆಯಸಂದರ್ಭದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಹಣ್ಣು,ತರಕಾರಿ ಮಾರಾಟವಾಗದೆ ರೈತರು ನಷ್ಟಅನುಭವಿಸುತ್ತಿದ್ದಾಗ ರೈತರಿಂದ ನೇರವಾಗಿ ಹಣ್ಣು,ತರಕಾರಿಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದರು.ಸಾವಿರಾರು ಜನರಿಗೆ ಆಹಾರದಕಿಟ್‌ಗಳನ್ನೂವಿತರಿಸಿದ್ದರು.2ನೇ ಅಲೆಯಲ್ಲಿ ಸಾವಿರಾರು ಜನರುಚಿಕಿತ್ಸೆಗಾಗಿ ಪರದಾಡುತ್ತಿದ್ದಾಗ ಸರ್ಕಾರದ ಮೇಲೆನಿರಂತರವಾಗಿ ಒತ್ತಡ ಹೇರಿ ರೆಮ್‌ಡಿಸಿವಿರ್‌ಇಂಜೆಕ್ಷನ್, ಹೆಚ್ಚುವರಿ ಆಕ್ಸಿಜನ್ ತರಿಸಿದ ರೇವಣ್ಣಅವರು ಚಿಕಿತ್ಸಾ ಸೌಲಭ್ಯಕ್ಕಾಗಿ ಸರ್ಕಾರದಿಂದ ಹತ್ತಾರುಕೋಟಿ ರೂ. ಅನುದಾನ ಬಿಡುಗಡೆಗೂಕಾರಣೀಭೂತರಾದರು. ಅಷ್ಟೇಅಲ್ಲ . ವೈಯಕ್ತಿಕವಾಗಿ ಸಾವಿರಾರುಮಾಸ್ಕ್, ಸಾನಿಟೈಸರ್ ಬಾಟಲು,ಆಹಾರದಕಿಟ್‌ಗಳನ್ನೂ ವಿತರಿಸಿದ್ದಾರೆ. ಜಿಲ್ಲೆಯಲ್ಲಿಹಾಗೂ ತಮ್ಮಕ್ಷೇತ್ರದಲ್ಲಿನ ಕೊರೊನಾ ಸೋಂಕಿತರಿಗೆನೆರವು, ಚಿಕಿತ್ಸಾ ವ್ಯವಸ್ಥೆಯ ಬಗ್ಗೆ ಎಚ್.ಡಿ.ರೇವಣ್ಣಅವರು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿವಿವರ ನೀಡಿದ್ದಾರೆ.
ಕೊರೊನಾ 2ನೇ ಅಲೆಯಲ್ಲಿ ಹಾಸನ ಜಿಲ್ಲೆದಾಖಲೆ ನಿರ್ಮಿಸುತ್ತಿದೆಯಲ್ಲಾ?
ಹೌದು, ರಾಜ್ಯದಲ್ಲಿ ಬೆಂಗಳೂರು ನಂತರ ಹಾಸನಜಿಲ್ಲೆ ಹೆಚ್ಚು ಸೋಂಕಿತರಲ್ಲಿ ಸ್ಥಾನ ಪಡೆದಿರುವುದುಬೇಸರದ ಸಂಗತಿ. ಹೊಳೆನರಸೀಪುರಕ್ಷೇತ್ರದಲ್ಲೂಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದರು.ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಕೊರೊನಾವ್ಯಾಪಕವಾಗಿ ಹರಡಿತು. ವಿಶೇಷವಾಗಿ ವಿಪಕ್ಷಗಳಶಾಸಕರ ಸಲಹೆಗಳನ್ನುಕಡೆಗಣಿಸಿತು. ಪಕ್ಷಪಾತಮಾಡಿತು. ಅದರ ಪರಿಣಾಮ ಜಿಲ್ಲೆಯ ಸಾವಿರಾರುಜನರೂ ನೋವು ಅನುಭವಿಸುವಂತಾಗಿದೆ.ನೂರಾರು ಜೀವಗಳು ಬಲಿಯಾದವು.
ಜಿಲ್ಲೆಯಲ್ಲಿ ಚಿಕಿತ್ಸಾ ವ್ಯವಸ್ಥೆ ಹೇಗಿದೆ ?
ಜಿಲ್ಲೆಯಲ್ಲಿಅಧಿಕಾರಿಗಳ ಶ್ರಮದಿಂದಾಗಿ ಸೋಂಕಿತರಿಗೆ ಚಿಕಿತ್ಸೆಸಿಗುತ್ತಿದೆ. ನಿರಂತರವಾಗಿ ಸರ್ಕಾರದ ಮೇಲೆ ಒತ್ತಡತರುತ್ತಲೇ ಬಂದಿದ್ದರ ಪರಿಣಾಮ ಜಿಲ್ಲೆಗೆ ನೂರಾರುರೆಮ್‌ಡಿಸಿವಿರ್ ಇಂಜೆಕ್ಷನ್ ಹೆಚ್ಚುವರಿಯಾಗಿ ಬಂದವು.ಒಂದೇ ದಿನ480 ಇಂಜೆಕ್ಷನ್ ತರಿಸಿ ನೂರಾರು ಜೀವಉಳಿಸಿದ ಸಮಾಧಾನ ನನಗಿದೆ. ನಾನು ಸರ್ಕಾರದಮೇಲೆ ಒತ್ತಡ ತಂದ ಪರಿಣಾಮ10ಕೋಟಿ ರೂ.ಅನುದಾನ ಜಿಲ್ಲೆಗೆ ಬಂದಿತು. ಹೆಚ್ಚುವ ರಿಆಕ್ಸಿಜನ್ ಪ್ಲಾಂಟ್, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಆಕ್ಸಿಜನ್ ಪ್ಲಾಂಟ್‌ಗಳು ಮಂಜೂರಾದವು. ವೈದ್ಯರ ನೇಮಕಾತಿಯೂ ಆಗಿದೆ.ಇದರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಹೋರಾಟವೂ ಇದೆ. ಅವರು ಸರ್ಕಾರಕ್ಕೆ ಪತ್ರ ಬರೆದುಒತ್ತಡ ತಂದರು. ಇನ್ನು ಹಾÓನ ದ ಹಿಮ್ಸ್ ಆಸ್ಪತ್ರೆಯಲ್ಲಿರುವ ಚಿಕಿತ್ಸಾ ಸೌಲಭ್ಯಗ ಳಿವೆ. ಕಾಲೇಜಿನನಿರ್ದೇಶಕರು, ಶಸ್ತ್ರಚಿಕಿತ್ಸಕರು, ಡಿಎಚ್‌ಒ ಒತ್ತಮ ಕೆಲಸಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯವರೂಶ್ರಮಿಸುತ್ತಿದ್ದಾರೆ. ಆ¨ರ ೆ ನೆರವು ಸರ್ಕಾರದಿಂದ ಇನ್ನಷ್ಟುನೆರವು ನಿರೀಕಿಸುÒ ತ್ತೇನೆ.
ನಿಮ್ಮ ಕ್ಷೇತ್ರದಲ್ಲಿ ಚಿಕಿತ್ಸಾ ವ್ಯವಸ್ಥೆ ಹೇಗಿದೆ?
ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿರುವ280 ಹಾಸಿಗೆಗಳ ಪೈಕಿ154 ಹಾಸಿಗೆಗಳನ್ನುಕೊರೊನಾ ಸೋಂಕಿತರಿಗೆ ಮೀಸಲಿರಿಸಲಾಗಿದೆ.100ಆಕ್ಸಿಜನ್‌ಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.5 ಕೊರೊನಾಕೇರ್ ಸೆಂಟರ್ ತೆರೆಯಲಾಗಿದೆ. ಇನ್ನೂಮೂರ್‍ನಾಲ್ಕುಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ.ಹೊಳೆನರಸೀಪುರ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್‌ಮಂಜೂರಾಗಿದೆ. ಸಿಟಿ ಸ್ಕ್ಯಾನ್ ತರಿಸಲು ಶಾಸಕರನಿಧಿಯಿಂದ 25 ಲಕ್ಷ ರೂ.ನೀಡಿದ್ದೇನೆ.ಕೊರೊನಾಸೋಂಕಿತರ ಚಿಕಿತ್ಸೆಗೆ ನನ್ನಿಂದಾಗಬಹುದಾದ ಎಲ್ಲಾಸಹಾಯ, ಸಹಕಾರ ನೀಡುತ್ತಿದ್ದೇನೆ.ವೈಯಕ್ತಿಕವಾಗಿ ಕೊಡುಗೆ ನೀಡಿರುವಿರಾ ?ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದನಾನು ಮತ್ತು ನನ್ನಕುಟುಂಬ ಶಕ್ತಿಮೀರಿನೆರವಾಗುತ್ತಾ ಬಂದಿದ್ದೇವೆ. ಅದನ್ನು ನಾನುಹೇಳಿಕೊಳ್ಳಲು ಇಚ್ಛಿಸುವುದಿಲ್ಲ.2000ಕ್ಕೂ ಹೆಚ್ಚುಆಹಾರಕಿಟ್‌ಗಳನ್ನು ಮೂರು ದಿನಗಳ ಹಿಂದೆವಿತರಿಸಿದ್ದೇವೆ. ಅದೆಲ್ಲಾ ಮುಖ್ಯವಲ್ಲ. ಜಿಲ್ಲೆಯಹಾಗೂ ನನ್ನಕ್ಷೇತ್ರದ ಜನರಿಗೆ ನನ್ನಿಂದ ಏನೇನಾಗಿದೆಎಂಬುದು ಗೊತ್ತಿದೆ. ದೇವೇಗೌಡರು ಮತ್ತುಕುಟುಂಬಕ್ಕೆ ಜಿಲ್ಲೆಯ ಜನರು ರಾಜಕೀಯ ಶಕ್ತಿನೀಡಿದ್ದಾರೆ. ಜನರ ಋಣ ತೀರಿಸಲು ನಾವುಹೋರಾಟ ಮಾಡುತ್ತಲೇ ಇರುತ್ತೇವೆ.ಕೈಲಾದ ನೆರವುನೀಡುತ್ತಲೇ ಇರುತ್ತೇವೆ.
ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಏನು ಸಲಹೆ ನೀಡುವಿರಿ?
ಸಂಕಷ್ಟಕ್ಕೆ ಸಿಲುಕಿರುವವರಿಗೆ ಆರ್ಥಿಕ ನೆರವುನೀಡಲಿ. ಅಗತ್ಯವಿರುವಷ್ಟು ವೈದ್ಯರು ಮತ್ತುಸಿಬ್ಬಂದಿಯನ್ನು ನೇಮಕ ಮಾಡಲಿ.ಕೊರೊನಾಚಿಕಿತ್ಸೆಗಾಗಿಯೇ ತಾತ್ಕಾಲಿವಾಗಿ ಶುಶ್ರೂಷಕರು,ಡಿ.ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಲಿ.ಜಿಲ್ಲಾಧಿಕಾರಿ, ಡಿಎಚ್‌ಒ ಅವರಿಗೇ ನೇಮಕಾತಿಗೆಅಧಿಕಾರ ನೀಡಲಿ. ಚಿಕಿತ್ಸಾ ವ್ಯವಸ್ಥೆಯ ಸುಧಾರಣೆಗೆಶಾಸಕರ ಸಲಹೆ, ಸೂಚನೆಗಳನ್ನು ಜಿಲ್ಲಾಡಳಿತಪಡೆಯುವುದು ಸೂಕ್ತ. ಪ್ರತಿ ತಾಲೂಕಿಗೂ ಕನಿಷ್ಠ50ಲಕ್ಷ ರೂ. ಆರ್ಥಿಕ ನೆರವು ನೀಡಲಿ.
ಆಯಾಯತಾಲೂಕಿನ ಚಿಕಿತ್ಸಾ ಹೊಣೆಗಾರಿಕೆಯನ್ನು ಶಾಸಕರು,ತಹಶೀಲ್ದಾರರು, ಟಿಎಚ್‌ಒ, ತಾಪಂ ಇಒ ಅವರಿಗೆವಹಿಸಿದರೆ ಸಕಾಲದಲ್ಲಿ ಸೋಂಕಿತರಿಗೆ ಚಿಕಿತ್ಸಾ ವ್ಯವಸ್ಥೆಕಲ್ಪಿಸಲು ಸಾಧ್ಯವಾಗುತ್ತದೆ.ಕೊರೊನಾ ನಿಯಂತ್ರಣಕ್ಕೆ ನಿಮ್ಮ ಸಲಹೆ ಏನು?ಸರ್ಕಾರ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಸೋಂಕು ತಹಬಹದಿಗೆ ಬರುವವರೆಗೂ ಲಾಕ್‌ಡೌನ್ ಮುಂದುವರಿಸುವುದು ಸೂಕ್ತ. ಆದರೆ ಸಂಕಷ್ಟಕ್ಕೆ ಸಿಲುಕುವವರಿಗೆ ಸರ್ಕಾರಆರ್ಥಿಕ ನೆರವು ನೀಡಬೇಕು.
ಮುಖ್ಯವಾಗಿ ಲಸಿಕೆ ನೀಡುವುದನ್ನುತ್ವರಿತಗೊಳಿಸಬೇಕು. ಎಲ್ಲ ವಯೋಮಾನದವರಿಗೂ ಉಚಿತವಾಗಿ ಲಸಿಕೆನೀಡುವುದರಿಂದ ಮಾತ್ರಕೊರೊನಾ ನಿಯಂತ್ರಣಕ್ಕೆ ತರಲು ಸಾಧ್ಯ. ಆದರೆಸರ್ಕಾರ ಇದುವರೆಗೂ ಹಾಸನ ಜಿಲ್ಲೆಗೆ ಲಸಿಕೆ ಪೂರೈಕೆಯಲ್ಲಿ ಪಕ್ಷಪಾತ ಮಾಡಿದೆ.ಇನ್ನು ಮುಂದೆಯಾದರೂ ತಾರತಮ್ಯ ಮಾಡದೆ ಅಗತ್ಯದಷ್ಟು ಲಸಿಕೆ ಪೂರೈಕೆಮಾಡಲಿ. ಜನರೂ ಸಹಕೊರೊನಾ ಮುನ್ನೆಚ್ಚ ರಿಕೆಕ್ರಮಗಳನ್ನುಕೈಗೊಂಡುಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.