ತಾಲೂಕಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ನಿರೀಕ್ಷೆ

Team Udayavani, Jun 4, 2021, 6:37 PM IST

covid news

ಮಂಡ್ಯ: ನಾಗಮಂಗಲ ತಾಲೂಕಿನಲ್ಲಿ ವಲಸಿಗರಸಂಖ್ಯೆ ಹೆಚ್ಚಾಗಿದ್ದು, ಇದರಿಂದಕೊರೊನಾ ಸೋಂಕಿನಎರಡನೇ ಅಲೆಯೂ ವೇಗವಾಗಿ ಹರಡಿತು.ಸೋಂಕನ್ನು ನಿವಾರಿಸಲು ಶಾಸಕಕೆ.ಸುರೇಶ್‌ಗೌಡ ಹಾಗೂ ತಾಲೂಕು ಆಡಳಿತಕ್ಕೆ ಸವಾಲಾಗಿತ್ತು.

ವಲಸಿಗರನ್ನು ಪತ್ತೆ ಹಚ್ಚಿ ಅವರನ್ನುಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ನೀಡಿ ತಾಲೂಕಿನಲ್ಲಿಹರಡಿದ್ದ ಸೋಂಕಿನ ಚೈನ್‌ಲಿಂಕ್‌ಕತ್ತರಿಸಲು ಎಲ್ಲ ರೀತಿಯ ಕ್ರಮಗಳನ್ನುಕೈಗೊಳ್ಳಲಾಗಿದೆ.ಸೋಂಕು ಕಂಡು ಬರುವ ಗ್ರಾಮಗಳನ್ನುಸೀಲ್‌ಡೌನ್‌ ಮಾಡಿ, ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನುಕ್ವಾರಂಟೈನ್‌ಕೇಂದ್ರಗಳಿಗೆ ಕರೆತಂದು ಉತ್ತಮ ಚಿಕಿತ್ಸೆ, ಸೌಲಭ್ಯ ಕಲ್ಪಿಸುವ ಮೂಲಕಸೋಂಕು ನಿಯಂತ್ರಣಕ್ಕೆಕ್ರಮ ವಹಿಸಲಾಗುತ್ತಿದೆ.

ಬಡವರು, ನಿರ್ಗತಿಕರಿಗೆ ಆಹಾರ ಹಾಗೂ ಔಷಧಕಿಟ್‌ಗಳನ್ನು ವಿತರಿಸುವ ಮೂಲಕ ನೆರವು ನೀಡುವುದಲ್ಲದೆ,ಖುದ್ದಾಗಿ ಸೋಂಕಿತರಿರುವಕ್ವಾರಂಟೈನ್‌ಕೇಂದ್ರಗಳು ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯವಿಚಾರಿಸುವ ಮೂಲಕ ಸೋಂಕು ನಿಯಂತ್ರಿಸಲುಪ್ರಯತ್ನ ಮಾಡಲಾಗುತ್ತಿದೆ. ಸದ್ಯ ನಾಗಮಂಗಲತಾಲೂಕು ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಸಕ್ರಿಯ ಪ್ರಕರಣಗಳಲ್ಲಿ ಕೊನೇ ಸ್ಥಾನಪಡೆದಿದೆ. ಈ ಬಗ್ಗೆ ಶಾಸಕ ಕೆ.ಸುರೇಶ್‌ಗೌಡ ಅವರುಉದಯವಾಣಿಯೊಂದಿಗೆ ಸೋಂಕು ನಿಯಂತ್ರಣಕ್ಕೆಸಂಬಂಧಿಸಿ ಕುರಿತಂತೆ ತಮ್ಮ ಅಭಿಪ್ರಾಯಹಂಚಿಕೊಂಡಿದ್ದಾರೆ.

ತಾಲೂಕಿನ ವಲಸಿಗರ ಪತ್ತೆಗೆಯಾವ ಕ್ರಮ ಕೈಗೊಂಡಿದ್ದೀರಾ?

ತಾಲೂಕಿನಲ್ಲಿ ಹೆಚ್ಚು ವಲಸಿಗರು ಬಂದಿದ್ದಾರೆ.ಮೊದಲ ಅಲೆಯಲ್ಲಿ ಯಾವುದೇ ಸೋಂಕುಕಂಡುಬಂದಿರಲಿಲ್ಲ. ನಂತರದ ದಿನಗಳಲ್ಲಿ ಬಾಂಬೆಯಿಂದ ಬಂದಿದ್ದ ವಲಸಿಗರೊಬ್ಬರಲ್ಲಿ ಕಾಣಿಸಿಕೊಂಡಿತ್ತು.ಇದನ್ನು ನಿಯಂತ್ರಿಸಲಾಗಿತ್ತು. ಆದರೆ ಎರಡನೇಅಲೆಯಲ್ಲಿ ಇದು ಹೆಚ್ಚಳವಾಗಿತ್ತು. ಬೆಂಗಳೂರಿನಲ್ಲಿಅತಿ ಹೆಚ್ಚು ಮಂದಿ ತಾಲೂಕಿನವರು ಇದ್ದು,ಬೆಂಗಳೂರಿನಲ್ಲಿ ಸೋಂಕುಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರೂ ಗ್ರಾಮಗಳಿಗೆ ಬಂದಿದ್ದರಿಂದಸೋಂಕು ಹೆಚ್ಚಾಗಿ ಹರಡಿತ್ತು. ಇವರನ್ನು ಪತ್ತೆ ಹಚ್ಚಲುಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು, ಅಂಗನವಾಡಿ,ಆಶಾಕಾರ್ಯಕರ್ತೆಯರು ಪತ್ತೆ ಹಚ್ಚಿ ಎಲ್ಲರನ್ನುಪರೀಕ್ಷೆಗೊಳಪಡಿಸಿ, ಸೋಂಕಿತರನ್ನುಕ್ವಾರಂಟೈನ್‌ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕು ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದೀರಾ?

ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯಕ್ರಮಗಳನ್ನುಕೈಗೊಳ್ಳಲಾಗಿದೆ. ಸೋಂಕುಕಂಡುಬಂದವರನ್ನು ಕೂಡಲೇಕ್ವಾರಂಟೈನ್‌ಕೇಂದ್ರಗಳಿಗೆಕರೆತಂದು ಅವರಿಗೆ ಉತ್ತಮ ಚಿಕಿತ್ಸೆ, ಗುಣಮಟ್ಟದಬಿಸಿಯೂಟ, ಶೌಚಾಲಯ, ಶುಚಿತ್ವ, ಬಿಸಿನೀರು,ಹೊದಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನುಕಲ್ಪಿಸಲಾಗಿದೆ. ಖುದ್ದಾಗಿ ಅವರನ್ನು ಭೇಟಿ ಮಾಡಿಸಮಸ್ಯೆ ಆಲಿಸಿ ಬಗೆಹರಿಸುವ ಮೂಲಕ ಸೋಂಕುನಿಯಂತ್ರಣಕ್ಕೆಕ್ರಮ ವಹಿಸಲಾಗಿದೆ.

ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಸೌಲಭ್ಯ ಹೇಗಿದೆ?

ಸರ್ಕಾರದ ಮಟ್ಟದಲ್ಲಿ ತಾಲೂಕಿಗೆ ವಿಶೇಷ ಸೌಲಭ್ಯಗಳುಕೊಟ್ಟಿಲ್ಲ. ವಿರೋಧ ಪಕ್ಷದವರು ಎಂದು ನಿರ್ಲಕ್ಷವಹಿಸಿದ್ದಾರೆ. ಸ್ಥಳೀವಾಗಿ ತಾಲೂಕು ಆಡಳಿತಹಾಗೂ ದಾನಿಗಳ ಸಹಾಯದಿಂದ ಅಗತ್ಯ ಸೌಲಭ್ಯನೀಡಲಾಗುತ್ತಿದೆ. ಸೋಂಕು ನಿಯಂತ್ರಿಸಲು ದೂರದೃಷ್ಟಿಯಕ್ರಮಕೈಗೊಳ್ಳಬೇಕಿತ್ತು. ಹೆಚ್ಚು ಹೆಚ್ಚುಪರೀಕ್ಷೆಗಳು ನಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರಪರೀûಾಕಿಟ್‌ಗಳನ್ನು ಒದಗಿಸಬೇಕು. ಪರೀಕ್ಷೆ ಹೆಚುc ‌ನಡೆದಂತೆ ಸೋಂಕು ನಿಯಂತ್ರಿಸಲು ಸಾಧ್ಯವಾಗಲಿದೆ.ಸೋಂಕಿತರ ಪ್ರಥಮ ಸಂಪರ್ಕದ 30 ಮಂದಿ ಹಾಗೂದ್ವಿತೀಯ ಸಂಪರ್ಕದ20 ಮಂದಿಗೆ ಪರೀಕ್ಷೆ ಅಗತ್ಯವಾಗಿನಡೆಯಬೇಕಿದೆ. ಹೋಂ ಕ್ವಾರಂಟೈನ್‌ ವ್ಯವಸ್ಥೆ ಸರಿಯಲ್ಲ. ರ್ಯಾಪಿಡ್‌, ಆಂಟಿಜೆನ್‌ ಟೆಸ್ಟ್‌ಗಳಲ್ಲಿ ಸರಿಯಾದವರದಿ ಬರುವುದಿಲ. ಆರ್‌ಟಿಪಿಸಿಆರ್‌ನಲ್ಲೂ ನೆಗೆಟಿವ್‌ ವರದಿ ಬಂ¨ರೂ‌ ಸಿಟಿ ಸ್ಕಾನ್‌ನಲ್ಲಿ ವೈರಸ್‌ಗಂಭೀರವಾಗಿ ಹರಡಿರುತ್ತೆ. ಆದರೆ ಸರ್ಕಾರ ಸೋಂಕಿನಸಂಖ್ಯೆಕಡಿಮೆ ಮಾಡುವ ಬದಲು ಜನರ ಜೀವಉಳಿಸಲು ಮುಂದಾಗಬೇಕು.

ಸೋಂಕುನಿಯಂತ್ರಣಕ್ಕೆವೈಯಕ್ತಿಕ ಕೊಡುಗೆಏನು?

ನಮ್ಮ ತಾಲೂಕಿನಲ್ಲಿ ಹೆಚ್ಚು ಬಡವರಿದ್ದಾರೆ. ಅವರುಸಿಟಿ ಸ್ಕಾ Âನ್‌ ಮಾಡಿಸಿಕೊಳ್ಳಲು ಆರ್ಥಿಕವಾಗಿ ಸಬಲರಾಗಿಲ್ಲ. ಅಂಥವರಿಗೆ ಸಹಾಯ ಮಾಡಲಾಗುತ್ತಿದೆ.ಸೋಂಕಿತರಿಗೆ ಬೇಕಾದ ಅಗತ್ಯ ಆಕ್ಸಿಜನ್‌, ಬೆಡ್‌ ವ್ಯವಸ್ಥೆಮಾಡಿಕೊಡಲಾಗುತ್ತಿದೆ. ಅಗತ್ಯವಾದ ಔಷಧಗಳನ್ನುವೈಯಕ್ತಿಕವಾಗಿ ವಿತರಿಸಲಾಗುತ್ತಿದೆ. ಸೀಲ್‌ಡೌನ್‌ ಆದಗ್ರಾಮಗಳಿಗೆ ಆಹಾರ ಕಿಟ್‌ಗಳನ್ನು ತಾಲೂಕು ಆಡಳಿತಹಾಗೂ ಸ್ಥಳೀಯ ಆಡಳಿತಗಳ ಜತೆ ದಾನಿಗಳ ಸಹಕಾರದಿಂದ ನೀಡಲಾಗುತ್ತಿದೆ. ಸೋಂಕಿತರನ್ನುಕರೆತರಲುಹಾಗೂ ಕರೆದುಕೊಂಡು ಹೋಗಲು ಈಗಾಗಲೇ ನಾಲ್ಕುಆಂಬ್ಯುಲೆನ್ಸ್‌ಗಳಿವೆ. ಇನ್ನೂ ನಾಲ್ಕು ಆಂಬ್ಯುಲೆನ್ಸ್‌ಗಳನ್ನುಸರ್ಕಾರ ಬಾಡಿಗೆಗೆ ತೆಗೆದುಕೊಳ್ಳುವಂತೆ ಸೂಚಿಸಿದೆ.ಅದರಂತೆ ವೈಯಕ್ತಿಕವಾಗಿ ಹಲವು ಸಹಾಯಗಳನ್ನುಮಾಡಲಾಗುತ್ತಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.