ನಾವು ನೆಟ್ಟು ಬೆಳೆಸುವ ಒಂದೊಂದು ಗಿಡ, ಒಂದೊಂದು ಆಕ್ಸಿಜನ್ ಸಿಲಿಂಡರ್ : ಎ. ಪಿ ಭಟ್
ವಿಶ್ವ ಪರಿಸರ ದಿನಾಚರಣೆಯ ವಿಶೇಷ ಲೇಖನ
ಶ್ರೀರಾಜ್ ವಕ್ವಾಡಿ, Jun 5, 2021, 8:30 AM IST
ಇಂದು ವಿಶ್ವ ಪರಿಸರ ದಿನ. ಬರಡಾದ ಭೂಮಿಯಲ್ಲಿ ಪರಿಸರ ದಿನಾಚರಣೆಯನ್ನು ಮಾಡುವ ಕಾಲದಲ್ಲಿದ್ದೇವೆ ನಾವು. ‘ಪರಿಸರವನ್ನು ರಕ್ಷಣೆ’ ಮಾಡುವ ಸಮಯ ಈಗ ಬಂದೊದಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ನಾಶ ಪರಿಸರದ ಮೂಲಭೂತ ಅಂಶಗಳ ಅವನತಿ ಅಥವಾ ನಷ್ಟವೇ ಮನುಷ್ಯನ ಅವನತಿಗೆ ಕಾರಣವಾಗುತ್ತಿದೆ. ಪರಿಸರ ಕ್ಷೀಣತೆಗೆ ಮುಖ್ಯ ಕಾರಣವೆಂದರೆ ಮಾನವ ಚಟುವಟಿಕೆಗಳು, ವಿಶೇಷವಾಗಿ ಅಭಿವೃದ್ಧಿ ಮಾದರಿಗಳು ಮತ್ತು ಪರಿಸರದ ಮೇಲೆ ಅವುಗಳ ಪರಿಣಾಮ.
ಸಸ್ಯವರ್ಗದ ಪದರದ ನಾಶ, ಮಳೆಯ ಬದಲಾವಣೆ ಮತ್ತು ಕೆಟ್ಟ ಕೃಷಿ ಪದ್ಧತಿಗಳಿಂದ ಮಣ್ಣುಗಳ ಸವೆತದಿಂದಾಗಿ ವಾರ್ಷಿಕವಾಗಿ ಸಾವಿರಾರು ಹೆಕ್ಟೇರ್ ಕೃಷಿ ಮಣ್ಣು ನಷ್ಟವಾಗುತ್ತದೆ. ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.
ಹೌದು, ಈ ಆತಂಕದ ನಡುವೆಯಲ್ಲಿಯೇ ನಾವು ಮತ್ತೊಂದು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಇದ್ದೇವೆ. ಈ ಹೊತ್ತಿಗೆ ಪರಸರವಾದಿ ಡಾ. ಎ ಪಿ ಭಟ್ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.
(ಮರಗಿಡಗಳಿಂದ ಕೂಡಿ ಹಸಿರನ್ನು ಹೊದ್ದು ನಿಂತ ಪಶ್ಚಿಮ ಘಟ್ಟದ ಒಂದು ವಿಹಂಗಮ ನೋಟ)
ಸಸ್ಯ ಸಂಕುಲಗಳ ರಕ್ಷಣೆಯೇ ನಮಗೆ ಶ್ರೀರಕ್ಷೆ ಹಾಗಾಗಿ ಸಸ್ಯಗಳನ್ನು ರಕ್ಷಣೆ ಮಾಡುವ ಅಗತ್ಯ ಹಾಗೂ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನುಷ್ಯನೊಬ್ಬ ಸ್ವಾಸ್ಥ್ಯ ಬದುಕನ್ನು ಕಾಣಬೇಕಾದರೇ ಅವನ ಸುತ್ತ ಮುತ್ತ ಸರಿ ಸುಮಾರು 48 ರಿಂದ 50 ಮರಗಳಿರಬೇಕು. ಆಗ ಮಾತ್ರ ಪರಿಸರವೂ ಸಮೃದ್ಧಿಯಾಗಿರುತ್ತದೆ. ಆರೋಗ್ಯವೂ ಸಮೃದ್ಧಿಯಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಒಬ್ಬ ಮನುಷ್ಯ ವರ್ಷವೊಂದರಲ್ಲಿ 4800 ಕೆ.ಜಿ ಕಾರ್ಬನ್ ಡೈ ಆಕ್ಸೈಡ್ ನನ್ನು ಹೊರ ಹಾಕುತ್ತಾನೆ. 50 ವರ್ಷವಾದಂತಹ ಮರವೊಂದು 100 ರಿಂದ 200 ಕೆ. ಜಿ ಕಾರ್ಬನ್ ಡೈ ಆಕ್ಸೈಡ್ ನನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ 48 ರಿಂದ 50 ಮರಗಳಿದ್ದರೇ ಆರೋಗ್ಯವಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ.
ಮನುಷ್ಯ ಆರೋಗ್ಯಕರವಾಗಿ ಇರಬೇಕೆಂದರೇ, ಶೇಕಡಾ 32 ರಷ್ಟು ಅರಣ್ಯ ಪ್ರದೇಶ ಇರಬೇಕು. ಭಾರತದಲ್ಲಿ ಈಗ ಕೇಂದ್ರ ಸರ್ಕಾರ ಹೇಳುವ ಪ್ರಕಾರ ಶೇಕಡಾ 24 ರಷ್ಟು ಅರಣ್ಯ ಪ್ರದೇಶ ಇದೆ. ಇದು ಮಾನವನ ಬದುಕಿಗೆ ಸಾಕೇ..? ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಅರಣ್ಯಗಳನ್ನು ಉಳಿಸುವ ಉದ್ದೇಶಗಳಿಂದ ನಾವೆಲ್ಲರೂ ಹೊಸ ಚಿಂತನೆ ಮಾಡಬೇಕಾಗಿದೆ. ನಾವೆಲ್ಲರೂ ಪರಿಸರವನ್ನು ರಕ್ಷಣೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ. ಪಶ್ಚಿಮ ಘಟ್ಟಗಳು ಬರಡಾಗುತ್ತಿವೆ. ಅದನ್ನು ರಕ್ಷಿಸುವ ಚಿಂತನೆ ನಾವು ಮಾಡಬೇಕಿದೆ. ನಮ್ಮ ಮನೆ, ನಮ್ಮ ಶಾಲೆ, ನಮ್ಮ ದೇವಸ್ಥಾನ, ನಮ್ಮ ಮಸೀದಿ, ನಮ್ಮ ಚರ್ಚು … ಹೀಗೆ ಎಲ್ಲರೂ ನಮ್ಮದು ಎಂದು ಭಾವಿಸಿಕೊಂಡು ಮರಗಳನ್ನು ರಕ್ಷಿಸುವತ್ತ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಹಸಿರು ವಲಯಗಳನ್ನು ಸೃಷ್ಟಿಸಿಕೊಳ್ಳಬೇಕಿದೆ.
ನಮ್ಮ ಊರಿನಲ್ಲಿ ನಾವು ನೆಟ್ಟು ಬೆಳೆಸುವ ಒಂದೊಂದು ಗಿಡ, ಒಂದೊಂದು ಆಕ್ಸಿಜನ್ ಸಿಲಿಂಡರ್ ನಂತೆ. ಹಾಗಾಗಿ ಮರಗಳನ್ನು ರಕ್ಷಿಸುವ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಬೇಕಿದೆ. ಪರಿಸರ ನಾಶದಿಂದ ಮನುಷ್ಯನ ಮೇಲೆ ಆಗುತ್ತಿರುವ ದುಷ್ಪರಿಣಾಮ ತಪ್ಪಿಸಲು ಹಸರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.