![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 4, 2021, 9:26 PM IST
ಹೊಸದಿಲ್ಲಿ : ಭಾರತೀಯ ನೌಕಾಪಡೆಗಾಗಿ ಆರು ಹೊಸ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ತಯಾರಿಸುವ ಬೃಹತ್ ಪ್ರಸ್ತಾವನೆಗೆ ರಕ್ಷಣ ಸಚಿವಾಲಯ ಒಪ್ಪಿಗೆ ನೀಡಿದೆ. “ಪಿ-75′ ಹೆಸರಿನ ಈ ಯೋಜನೆಯ ಅನುಷ್ಠಾನದ ಬಗ್ಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣ ಖರೀದಿ ಮಂಡಳಿ (ಡಿಎಸಿ)ಯ ಸಭೆಯಲ್ಲಿ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿದೆ.
ಮುಂದಿನ 12 ವರ್ಷಗಳಲ್ಲಿ ಈ ಜಲಾಂತರ್ಗಾಮಿಗಳು ಹಂತಹಂತವಾಗಿ ತಯಾರಾಗಲಿವೆ. ಸದ್ಯ ಈ ಯೋಜನೆಯ ಅಂದಾಜು ವೆಚ್ಚವನ್ನು 43 ಸಾವಿರ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಯೋಜನೆಯ ಅನುಷ್ಠಾನದ ಹೊಣೆಯನ್ನು ಎಲ್ ಆ್ಯಂಡ್ ಟಿ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಮಝಗಾಂವ್ ಡಾಕ್ಸ್ ಲಿ.ಗೆ (ಎಂಡಿಎಲ್) ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಕಂಪೆನಿಗಳು ಭಾರತೀಯ ರಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ವಿಶ್ವದ ದೈತ್ಯ ಕಂಪೆನಿಗಳ ಜತೆ ಸೇರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಿವೆ.
ವ್ಯೂಹಾತ್ಮಕ ಪಾಲುದಾರಿಕೆ ಮಾದರಿಯಡಿ ಈ ಸಬ್‌ಮರೀನ್‌ಗಳ ನಿರ್ಮಾಣ ನಡೆಯಲಿದೆ. ಇವುಗಳ ನಿರ್ಮಾಣದಲ್ಲಿ ವಿದೇಶಿ ರಕ್ಷಣ ಸಂಸ್ಥೆಗಳೊಂದಿಗೆ ದೇಶೀಯ ರಕ್ಷಣ ಸಂಸ್ಥೆಗಳೂ ಕೈಜೋಡಿಸಲಿದ್ದು, ಆ ಮೂಲಕ ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
ಇದನ್ನೂ ಓದಿ :2 ಡೋಸ್ ಹಾಕಿದವರಿಗೆ ಸೋಂಕು ತಟ್ಟಿದ್ದರೂ, ಜೀವ ಹಾನಿಯಾಗಿಲ್ಲ: ಏಮ್ಸ್ ಅಧ್ಯಯನದಲ್ಲಿ ಉಲ್ಲೇಖ
ಚೀನಕ್ಕೆ ಸಡ್ಡು
ಚೀನವು ಇತ್ತೀಚೆಗೆ ತನ್ನ ನೌಕಾದಳದ ಬಲವರ್ಧನೆಗಾಗಿ ಹಲವಾರು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತವೂ ತನ್ನ ನೌಕಾಪಡೆಯನ್ನು ಶಕ್ತಿಶಾಲಿಯಾಗಿಸಲು ಹೊಸ ಹೆಜ್ಜೆಗಳನ್ನು ಇರಿಸುತ್ತಿದ್ದು, ಅದರ ಭಾಗವಾಗಿ ಆರು ಹೊಸ ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.