ಪರಿಸರ ಸಂರಕ್ಷಣೆ: ವೈಯಕ್ತಿಕ ಜವಾಬ್ದಾರಿಗಳು
Team Udayavani, Jun 5, 2021, 6:45 AM IST
ಮಾನವ ಪರಿಸರ ಜೀವಿ. ಮನುಷ್ಯ ಬದುಕಲು ಅನಿವಾರ್ಯ ವಾಗಿರುವ ಮೂಲ ಆವಶ್ಯಕಗಳು ಸಿಗುವುದೇ ಪರಿಸರದಿಂದ. ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರವನ್ನು ಸಂಕ್ಷಿಸುವುದು ಅಗತ್ಯ. ಪರಿಸರ ಸಂರಕ್ಷಣೆ ಎನ್ನುವುದು ಸಾಮೂಹಿಕ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೋರ್ವರ ಹೊಣೆಗಾರಿಕೆಯೂ ಆಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ವೈಯಕ್ತಿಕವಾಗಿ ನಾವು ಏನು ಮಾಡಬಹುದು ಎಂದು ಕೇಳಿಕೊಂಡಾಗ ನಮ್ಮ ಕರ್ತವ್ಯಗಳ ಬಲುದೊಡ್ಡ ಪಟ್ಟಿಯೇ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಮನೆಗೊಂದು ಮರ, ಊರಿಗೊಂದು ವನ
ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ, ಮರಗಳನ್ನು ಬೆಳೆಸಬೇಕಿದೆ. ಇದು ಸದ್ಯ ಆಗಬೇಕಾದ ತುರ್ತು ಕಾರ್ಯವಾಗಿದೆ. ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣ ರಾಗಲು ನಾವು ಸವಿನೆನಪಿಗಾಗಿ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುತ್ತೇವೆ. ಇದರ ಜತೆಗೆ ಪರಿಸರಕ್ಕೆ ಪೂರಕವಾಗು ವಂತೆ ಒಂದು ಗಿಡ ನೆಟ್ಟು ಪೋಷಿಸಿದಾಗ ಪರಿಸರ ಸಂರಕ್ಷಣೆಗೆ ವೈಯಕ್ತಿಕ ಜವಾಬ್ದಾರಿ ಮೆರೆದಂತೆ ಆಗುತ್ತದೆ. ಜತೆಗೆ ನಮ್ಮ ಸುಸ್ಥಿರ ಬದುಕಿಗೂ ಅನುಕೂಲವಾಗುತ್ತದೆ. ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತನ್ನಿಂತಾನೆ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ.
ಬಳಕೆ, ಪುನರ್ ಬಳಕೆಯ ಮಂತ್ರ
ವಸ್ತುಗಳನ್ನು ನಾವು ಒಂದು ಬಾರಿ ಬಳಸಿ, ಅದನ್ನು ಎಸೆ ಯುವುದರಿಂದ ಅದು ಕಸವಾಗಿ ಮಾರ್ಪಟ್ಟು ಪರಿಸರ ದೃಷ್ಟಿಯಲ್ಲಿ ಹಾನಿಯಾಗುತ್ತದೆ. ಹೀಗಾಗಿ ಒಂದು ವಸ್ತುವನ್ನು ಸಾಧ್ಯವಾದಷ್ಟು ಬಾರಿ ಅಂದರೆ ಎರಡು ಅಥವಾ ಮೂರು ಬಾರಿ ಬಳಕೆ ಮಾಡಲು ಮುಂದಾಗಬೇಕು. ಪರಿಸರ ತಜ್ಞರ ಪ್ರಕಾರ, ಬಳಕೆ ಮಾಡಿದ ವಸ್ತುವನ್ನು ಪುನರ್ ಬಳಕೆ ಮಾಡಿದಾಗ ಪರಿಸರ ಹಾನಿಯನ್ನು ಆಂಶಿಕವಾಗಿ ಕಡಿಮೆ ಮಾಡಬಹುದಾಗಿದೆ.
ಕಸದಿಂದ ರಸ
ಮರುಬಳಕೆ ಜತೆಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಮೂಲಕ ಪರಿಸರ ಪ್ರಜ್ಞೆ ಮೆರೆಯಬಹುದಾಗಿದೆ. ಕಾಂಪೋಸ್ಟ್ ಪ್ರಕ್ರಿಯೆಯೂ ಪರಿಸರಕ್ಕೆ ಪೂರಕ. ಮನೆಯ ಮುಂದೆ ಗುಂಡಿ ತೋಡಬೇಕು. ಅದಕ್ಕೆ ಬೇರ್ಪಡಿಸಿದ ಹಸಿ, ಒಣ ಕಸವನ್ನು ತ್ಯಾಜ್ಯ ಗುಂಡಿಯಲ್ಲಿ ಹಾಕು ವುದರಿಂದ ಅದು ಕೆಲವು ದಿನಗಳ ಬಳಿಕ ಗೊಬ್ಬರವಾಗುತ್ತದೆ. ಅದನ್ನು ಉದ್ಯಾನ, ಕೃಷಿಗೆ ಬಳಕೆ ಮಾಡಬಹುದು.
ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ನಿಯಂತ್ರಣ
ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಕಡಿಮೆ ಬಳಕೆ ಮಾಡು ತ್ತೇವೆಯೋ ಅಷ್ಟು ಪರಿಸರಕ್ಕೆ ಒಳ್ಳೆಯದು. ಜಲ, ವಿದ್ಯುತ್ ನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ನಾವು ಯೋಚಿಸಿ, ಯೋಜಿಸಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು. ಪ್ರತಿಯೊಂದೂ ನೈಸರ್ಗಿಕ ಸಂಪನ್ಮೂಲವೂ ಕೂಡ ನಮ್ಮ ಜೀವನದಲ್ಲಿ ಮಹತ್ವದ್ದಾಗಿದ್ದು ಇವುಗಳ ಮಿತಬಳಕೆ ನಮ್ಮ ಮತ್ತು ಪರಿ ಸರದ ಸುಸ್ಥಿರ ಬದುಕಿಗೆ ಪೂರಕ.
ವೈಯಕ್ತಿಕ ಕಾನೂನು ರೂಪಿಸಿಕೊಳ್ಳಿ
ನಮ್ಮ ದೈನಂದಿನ ಬದುಕಿ ನಲ್ಲಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಇದೇ ರೀತಿ ಪರಿಸರ ಸಂರಕ್ಷಣೆಗಾಗಿ ನಾವು ವೈಯಕ್ತಿಕ ಕಾನೂನುಗಳ ಪಾಲನೆಗೆ ಮುಂದಾಗಬೇಕು. ಮರ ಕಡಿಯುವುದಿಲ್ಲ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ, ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದಿಲ್ಲ ಇವೇ ಮೊದಲಾದ ಸಂಕಲ್ಪಗಳು ನಮ್ಮದಾಗಲಿ. ಇದು ಕೇವಲ ಬಾಯಿಮಾತಿನಲ್ಲಿ ಉಳಿಯದೇ ಕಾರ್ಯರೂಪಕ್ಕೆ ಬರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.