ಖಾಸಗಿ ಚಿಕಿತ್ಸಾಲಯಗಳ ಮೇಲೆ ದಾಳಿ
Team Udayavani, Jun 5, 2021, 10:10 AM IST
ಹೊನ್ನಾಳಿ: ಪಟ್ಟಣದಲ್ಲಿ ಸಮಪರ್ಕ ದಾಖಲೆಗಳಿಲ್ಲದೆ ಮೂರು ಖಾಸಗಿ ಚಿಕಿತ್ಸಾಲಯಗಳು ಹಾಗು ಒಂದು ಔಷಧಿ ಅಂಗಡಿ ಮೇಲೆ ತಹಶೀಲ್ದಾರ್ ಬಸನಗೌಡ ಕೊಟೂರು ನೇತೃತ್ವದಲ್ಲಿ ದಾಳಿ ನಡೆಸಿ ಚಿಕಿತ್ಸಾಲಯ ಹಾಗೂ ಔಷ ಧಿ ಅಂಗಡಿ ಬಂದ್ ಮಾಡಿಸಲಾಯಿತು.
ತಹಶೀಲ್ದಾರ್ ಬಸನಗೌಡ ಕೊಟೂರ ಮಾತನಾಡಿ, ಚಿಕಿತ್ಸಾಲಯ, ಔಷಧ ಅಂಗಡಿ ಮಾಲೀಕರು ಅಧಿಕೃತ ಹಾಗೂ ಸಮರ್ಪಕ ದಾಖಲೆ ಇಟ್ಟುಕೊಳ್ಳದೇ ಚಿಕಿತ್ಸೆ ನೀಡುವುದು ಹಾಗೂ ಔಷಧಿ ವಿತರಿಸುವುದು ಕಾನೂನಿಗೆ ವಿರುದ್ಧವಾಗಿದೆ. ಸೂಕ್ತ ದಾಖಲೆಗಳಿಲ್ಲದೇ ಚಿಕಿತ್ಸಾಲಯ ಹಾಗೂ ಔಷಧ ಅಂಗಡಿ ನಡೆಸುವವರ ವಿರುದ್ಧ ತಾಲೂಕು ವೈದ್ಯಾಧಿ ಕಾರಿಯಿಂದ ನೋಟಿಸ್ ಜಾರಿ ಮಾಡಿಸಲಾಗುವುದು ಎಂದು ಹೇಳಿದರು.
ತಾಲೂಕು ಆಡಳಿತ ಕೋವಿಡ್ ವಿರುದ್ಧ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಇಂತಹ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ವೈದ್ಯರು ತಮ್ಮ ಚಿಕಿತ್ಸಾಲಯದ ಎಲ್ಲ ದಾಖಲೆಗಳು ಪಕ್ಕಾ ಇರಬೇಕು. ಯಾವುದೇ ಹಳೆ ದಾಖಲೆ ಇಟ್ಟುಕೊಂಡು ಚಿಕಿತ್ಸೆ ನೀಡದರೆ ಸಲ್ಲದು ಎಂದರು.
ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಅನಧಿಕೃತ ಚಿಕಿತ್ಸಾಲಯ ನಡೆಸಿದರೆ ಹಾಗೂ ಅನಧಿಕೃತ ಔಷಧಾಲಯ ನಡೆಸಿದರೆ ತಕ್ಷಣ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪಿಎಸ್‌ಐ ಬಸವರಾಜ್ ಆರ್.ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಆರೋಗ್ಯ ನಿರೀಕ್ಷಕ ನಾಗೇಶ್, ಪಿಸಿಗಳಾದ ವೆಂಕಟೇಶ್, ನಾಗರಾಜ್ ಹಾಗೂ ಸಿಬ್ಬಂದಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.