ಡಿಸಿ ರೋಹಿಣಿ ಸಿಂಧೂರಿ ಅವರದ್ದು ಇಬ್ಬಗೆಯ ನೀತಿ: ಮಾಜಿ ಸಚಿವ ಮಂಜು ಮತ್ತೊಂದು ಆರೋಪ
Team Udayavani, Jun 5, 2021, 2:53 PM IST
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ, ಆಯುಕ್ತರೊಂದಿಗೆ ಜಗಳದ ವಿಚಾರಗಳು ಸುದ್ದಿಯಲ್ಲಿರುವಾಗಲೇ ಮಾಜಿ ಸಚಿವ ಎ.ಮಂಜು ಮತ್ತೊಂದು ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎ.ಮಂಜು, ಜಿಲ್ಲಾಧಿಕಾರಿಗಳಿಗೆ ಒಂದು ನಿಯಮ, ಸಾಮಾನ್ಯ ಜನರಿಗೊಂದು ನಿಯಮ. ಸಾಮಾನ್ಯ ಜನರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಆದರೆ ಜಿಲ್ಲಾಧಿಕಾರಿಯವರ ಮಕ್ಕಳಿಗೆ 20ಕ್ಕೂ ಹೆಚ್ಚು ಶಿಕ್ಷಕರಿಂದ ಶಿಕ್ಷಣ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್
ರೋಹಿಣಿ ಸಿಂಧೂರಿ ಅವರ ಈ ಬಗೆಯ ಇಬ್ಬಗೆಯ ನೀತಿ ಕೇಳೋರು ಯಾರು ಎಂದು ಮಾಜಿ ಸಚಿವ ಎ. ಮಂಜು ಹೊಸ ಆರೋಪ ಮಾಡಿದರು.
ದನ ಕಾಯುವವನು ಐಎಎಸ್ ಮಾಡುತ್ತಾನೆ: ಈಗ ಧನ ಕಾಯುವವನು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲೂ ಐಎಎಸ್ ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಆದರೆ ಜನರ ಸೇವೆ ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂದು ಡಿಸಿ ವಿರುದ್ದ ಕಿಡಿಕಾರಿದರು.
ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ ಸಮಯದಲ್ಲಿ ಈಜುಕೊಳ ಬೇಕಿತ್ತೇ? ಸರ್ಕಾರಿ ಅಧಿಕಾರಿ ಒಂದೇ ಕಡೆ ಇರುತ್ತಾರಾ? ಐದು ವರ್ಷ ಆದ ಮೇಲೆ ವರ್ಗಾವಣೆಯಾಗುತ್ತಾರೆ. ಇದು ಗುತ್ತಿಗೆ ಕಂಟ್ರಾಕ್ಟರ್ ಗೋಸ್ಕರ ಮಾಡಿರುವ ಕೆಲಸ ಅಷ್ಟೇ ಎಂದು ಮಂಜು ಆರೋಪಿಸಿದರು.
ಇದನ್ನೂ ಓದಿ: ರೋಹಿಣಿಗೆ ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ತಪ್ಪುಗಳನ್ನ ತಿದ್ದಿ ತಿಳಿ ಹೇಳಿದ್ದೆ : ಎ ಮಂಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.