ತಾಲೂಕು ಹಸಿರೀಕರಣಕ್ಕೆ ಕೈಜೋಡಿಸಿ
Team Udayavani, Jun 5, 2021, 7:50 PM IST
ಗೌರಿಬಿದನೂರು: ತಾಲೂಕಿನಲ್ಲಿ ಸಸಿ ನೆಟ್ಟುಹಸಿರೀಕರಣ ಮಾಡಲು ತಾವೆಲ್ಲಮುಂದಾಗಬೇಕು. ಇದರಿಂದ ಉತ್ತಮ ಪರಿಸರ,ಆರೋಗ್ಯಕ್ಕೆ ಬೇಕಾದಷ್ಟು ಆಕ್ಸಿಜನ್‌ಲಭ್ಯವಾಗುತ್ತದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರಸಭೆ ಕಚೇರಿ ಆವರಣದಲ್ಲಿ ಸಸಿ ವಿತರಣೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವಮಹತ್ವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ.ಕಳೆದ ವರ್ಷ ತಾಲೂಕಿನಲ್ಲಿ ಲಕ್ಷ ಸಸಿ ನೆಟ್ಟಿದ್ದು,ಅದರಲ್ಲಿ ಉತ್ತರ ಪಿನಾಕಿನ ನದಿಯ ಎರಡೂ ಕಡೆ32 ಕಿ.ಮೀ. ಹಾಕಲಾಗಿದೆ.
ಈ ಬಾರಿಯೂ 60ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ.ಇದಕ್ಕೆ ಜನರ ಸಹಕಾರ ಅಗತ್ಯ ಎಂದುಹೇಳಿದರು.ಅರಣ್ಯ ಬೆಳೆಸಲು ಮುಂದಾಗಿ: ತಾಲೂಕನ್ನುನಾವು ಹಸಿರೀಕರಣ ಮಾಡಲು, ಗಡಿ ಭಾಗದಎಲ್ಲಾ ಖಾಲಿ ಜಾಗಗಳಲ್ಲಿ ಸಸಿ ನೆಡಲುಮುಂದಾಬೇಕು. ಸರ್ಕಾರಿ ಕಚೇರಿ, ಶಾಲಾಆವರಣ, ನಮ್ಮ ಮನೆ ಸುತ್ತಮುತ್ತ ಸಸಿ ನೆಟ್ಟುಪೋಷಣೆ ಮಾಡಬೇಕು.
ನಗರದ ಅಂಬೇಡ್ಕರ್‌ವೃತ್ತದಿಂದ ಬೈಪಾಸ್ ರಸ್ತೆಯವರೆಗೂ ಸಸಿನೆಡಬೇಕಿದೆ. ಇದರಿಂದ ನಗರ ಮತ್ತು ತಾಲೂಕಿನಎಲ್ಲಾ ಪ್ರದೇಶವನ್ನು ಹಸಿರೀಕರಣ ಮಾಡಲುಕೈಜೋಡಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಎಚ್.ಶ್ರೀನಿವಾಸ್, ನಗರಸಭೆಅಧ್ಯಕ್ಷೆ ಗಾಯತ್ರಿ ಬಸವರಾಜು, ವಲಯಅರಣ್ಯಾಧಿಕಾರಿ ಮಂಜುನಾಥ್, ಪೌರಾಯುಕ್ತಸತ್ಯನಾರಾಯಣ್, ಪದ್ಮಜಾ, ಯಲ್ಲಪ್ಪ, ನಗರಸಭೆಸದಸ್ಯ ಮಾರ್ಕೆಟ್ ಮೋಹನ್, ನಗರಸಭೆ ಮಾಜಿಸದಸ್ಯ ಕೆ.ಎಸ್.ಅನಂತರಾಜು, ಕಂದಾಯಇಲಾಖೆಯ ಖಾದರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.