ಸೋಂಕು ಮುಕ್ತಿಯತ್ತ ಗ್ರಾಮ : ಗ್ರಾಮಸ್ಥರಿಂದಲೇ ಸ್ವಯಂ ದಿಗ್ಬಂಧನ


Team Udayavani, Jun 6, 2021, 7:25 AM IST

ಸೋಂಕು ಮುಕ್ತಿಯತ್ತ ಗ್ರಾಮ : ಗ್ರಾಮಸ್ಥರಿಂದಲೇ ಸ್ವಯಂ ದಿಗ್ಬಂಧನ

ಕೊರೊನಾ ಎರಡನೇ ಅಲೆ ದೇಶವನ್ನು ನಡುಗಿಸಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಾರಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿತು. ಆದರೆ ಜಿಲ್ಲಾಡಳಿತ, ಗ್ರಾಮ ಪಂಚಾಯತ್‌ ಗಳು, ಗ್ರಾಮಸ್ಥರೇ ಸೇರಿ ಕೊರೊನಾ ನಿಯಂತ್ರಣ ಮಾಡಿದ್ದಾರೆ. ಇದರಿಂದಾಗಿ ಸೋಂಕು ಕಾಣಿಸಿಕೊಂಡಿದ್ದ ಗ್ರಾಮಗಳು ನಿಧಾನವಾಗಿ ಸೋಂಕು ಮುಕ್ತಿಯತ್ತ ಮುನ್ನಡೆಯುತ್ತಿವೆ. ರಾಜ್ಯದಲ್ಲಿ ಪ್ರಮುಖ ಜಿಲ್ಲೆಗಳ ಗ್ರಾಮಗಳ ಸ್ಥಿತಿಗತಿ ಹೇಗಿದೆ ಎಂಬುದರ ಒಂದು ಇಣುಕು ನೋಟ ಇಲ್ಲಿದೆ.

ಪರೀಕ್ಷೆ ಕಡ್ಡಾಯ
ಕಲ್ಪತರು ನಾಡಿನ 1,242 ಗ್ರಾಮಗಳಲ್ಲಿ ಕೊರೊನಾ ತನ್ನ ಆರ್ಭಟ ತೋರಿಸಿಲ್ಲ. ಹೊರಗಿನಿಂದ ಬಂದವರಿಗೆ ಪರೀಕ್ಷೆ ಕಡ್ಡಾಯ ಮಾಡಿ ಐಸೊಲೇಶನ್‌ನಲ್ಲಿ ಇರಿಸಲಾಗಿತ್ತು. ಹಲವು ಗ್ರಾಮಗಳು ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಮ ಸ್ಯಾನಿಟೈಸೇಶನ್‌, ಲಕ್ಷಣ ಕಂಡುಬಂದರೆ ತತ್‌ಕ್ಷಣ ವೈದ್ಯರ ಸಲಹೆ ಪಡೆಯುವುದು ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡಿವೆ.

ಪಡೆಗಳ ಪರಿಶ್ರಮ
ಜಿಲ್ಲೆಯಲ್ಲಿ ಕೊರೊನಾ ಮುಕ್ತ 825 ಗ್ರಾಮಗಳಿವೆ. ಕೊರೊನಾ ಹೆಚ್ಚಾಗುತ್ತಿದ್ದಂತೆ ಗ್ರಾಮ ಪಡೆ, ಪಂಚಾಯತ್‌ ಪಡೆಗಳನ್ನು ರಂಗಕ್ಕಿಳಿಸಲಾಯಿತು. ಸೋಂಕುಪೀಡಿತರು ಹೆಚ್ಚಿರುವ ಗ್ರಾಮಗಳಲ್ಲಿ ಸ್ಥಳೀಯವಾಗಿ ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಲಾಗಿದೆ.

ಕಾರ್ಯಪಡೆ ರಚನೆ
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ 157 ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಜಿ.ಪಂ. ಸಿಇಒ ವಿಶೇಷ ಕ್ರಮ ಕೈಗೊಂಡಿದ್ದು, ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ, ಸೋಂಕುಪೀಡಿತರ ಮನೆಗೆ ತೆರಳಿ ಸ್ಥಿತಿಗತಿ ಪರಿಶೀಲಿಸುತ್ತಿದ್ದಾರೆ.

ಗ್ರಾಮ ಪಡೆಗಳು ಸಕ್ರಿಯ
ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊರೊನಾ ಕಾಲಿಟ್ಟಿಲ್ಲ. ಇದಕ್ಕೆ ಇಲ್ಲಿನ ಭೌಗೋಳಿಕ ಲಕ್ಷಣ, ಜಿಲ್ಲಾಡಳಿತ, ಜಿ.ಪಂ ಮತ್ತು ಸ್ಥಳೀಯವಾಗಿ ಅನುಸರಿಸಿದ ಕ್ರಮಗಳು ಕಾರಣ. ಜಿ.ಪಂ. ವತಿಯಿಂದ ಗ್ರಾಮ ಪಡೆಗಳನ್ನು ಸಕ್ರಿಯಗೊಳಿಸಲಾಗಿದೆ.

ಟಾಸ್ಕ್ ಫೋರ್ಸ್ ಪರಿಶ್ರಮ
ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಸಕ್ರಿಯವಾಗಿವೆ. ಗ್ರಾಮದಿಂದ ಹೊರಗೆ ಯಾರೂ ಹೋಗದಿರುವುದು, ಸೋಂಕು ಕಾಣಿಸಿಕೊಂಡರೆ ತತ್‌ಕ್ಷಣ ಆಸ್ಪತ್ರೆಗೆ ದಾಖಲಾತಿ ಕ್ರಮ ಅನುಸರಿಸಲಾಗಿದೆ.

ಪರೀಕ್ಷೆ ಹೆಚ್ಚಳ
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮ, ಕಠಿನ ಕ್ರಮ ಜಾರಿಯಿಂದಾಗಿ ಜಿಲ್ಲೆಯ 500ಕ್ಕೂ ಹೆಚ್ಚು ಹಳ್ಳಿಗಳು ಕೋವಿಡ್‌ ಸೋಂಕಿನಿಂದ ಮುಕ್ತವಾಗಿ ಉಳಿದಿವೆ. ಗ್ರಾಮಗಳಲ್ಲಿ ಕೋವಿಡ್‌ ಪರೀಕ್ಷೆ ಸಂಖ್ಯೆ ಹೆಚ್ಚಿಸಿದ್ದರಿಂದ ಸೋಂಕು ಹತೋಟಿಗೆ ತರಲು ಸಾಧ್ಯವಾಗಿದೆ.

ಮನೆ ಮನೆ ಸಮೀಕ್ಷೆ
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ. ಈಗ ಜಿಲ್ಲೆಯಲ್ಲಿ 465 ಹಳ್ಳಿಗಳು ಸಂಪೂರ್ಣ ಸೋಂಕು ಮುಕ್ತವಾಗಿವೆ. ಜಿಲ್ಲೆಯಲ್ಲಿ ಒಟ್ಟು 1,080 ಹಳ್ಳಿಗಳಿದ್ದು, ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ರಚನೆ ಮಾಡುವುದರ ಜತೆಗೆ ಮನೆ ಮನೆ ಸಮೀಕ್ಷೆಯಿಂದ ಸೋಂಕುಪೀಡಿತರನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಜತೆಗೆ ಕಠಿನ ಲಾಕ್‌ ಡೌನ್‌ ನಿಂದಾಗಿ ಸೋಂಕು ನಿಯಂತ್ರ ಣಕ್ಕೆ ಬಂದಿದೆ

ಆರಂಭದಲ್ಲೇ ಪತ್ತೆ
ಜಿಲ್ಲೆಯ 380 ಗ್ರಾಮಗಳಲ್ಲಿ ಶೂನ್ಯ ಪ್ರಕರಣಗಳಿವೆ. ಗ್ರಾಮಸ್ಥರೇ ಮುಂಜಾಗ್ರತೆ ವಹಿಸಿದ್ದರಿಂದ ಕೊರೊನಾ ಮುಕ್ತಿ ಸಾಧ್ಯವಾಗಿದೆ. ಗ್ರಾಮಸ್ಥರೇ ಜಿ.ಪಂ. ಮಾರ್ಗಸೂಚಿಯಂತೆ ಕುಟುಂಬ ಆರೋಗ್ಯ ಸಂರಕ್ಷಣ ತಂಡ ರಚಿಸಿಕೊಂಡು ಪ್ರತೀ 3 ದಿನಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿದ್ದಾರೆ. ಲಕ್ಷಣ ಕಾಣಿಸಿಕೊಂಡವರಿಗೆ ಆರಂಭದಲ್ಲೇ ಔಷಧಗಳ ಕಿಟ್‌ ನೀಡಲಾಗುತ್ತಿದೆ.

ಬಿಗಿ ಲಾಕ್‌ಡೌನ್‌
ಜಿಲ್ಲೆಯ 635 ಹಳ್ಳಿಗಳ ಪೈಕಿ 357 ಹಳ್ಳಿಗಳು ಕೊರೊನಾ ಮುಕ್ತವಾಗಿವೆ. ವಾರಕ್ಕೆ ಎರಡು ದಿನ ಸ್ಯಾನಿಟೈಸೇಶನ್‌, ಮಾಸ್ಕ್ ಧಾರಣೆ ಮತ್ತು ಬಿಗಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಪರಿಣಾಮ ಸಾಧಿಸಲಾಗಿದೆ.

ರ‍್ಯಾಪಿಡ್ ಪರೀ ಕ್ಷೆ
ಜಿಲ್ಲೆಯ ಪ್ರತೀ ಹಳ್ಳಿಯಲ್ಲಿ ಸೋಂಕು ಕಾಲಿಟ್ಟಿದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಆ್ಯಂಟಿಜನ್‌ ರ‍್ಯಾಪಿಡ್ ತಪಾಸಣೆ ನಡೆಸಲಾಗಿದೆ. ಸದ್ಯ ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ತಪಾಸಣೆ ಮುಗಿದಿದೆ.

ಹೊಲದಲ್ಲೇ ಕ್ವಾರಂಟೈನ್‌
ಜಿಲ್ಲೆಯಲ್ಲಿ 200 ಹಳ್ಳಿಗಳು ಕೊರೊನಾ ಮುಕ್ತವಾಗಿದ್ದರೆ, 500ಕ್ಕೂ ಹೆಚ್ಚು ಗ್ರಾಮಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿವೆ. ಹೊರಗಿನಿಂದ ಬಂದವರನ್ನು ಊರ ಹೊರಗಿನ ಹೊಲ, ಶೆಡ್‌ಗಳಲ್ಲಿ 8-10 ದಿನ ಪ್ರತ್ಯೇಕವಾಗಿ ಉಳಿಯಲು ವ್ಯವಸ್ಥೆ ಮಾಡಿ ಬಳಿಕ ಊರಿಗೆ ಪ್ರವೇಶ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಅನುಸರಿಸಿದ ಮಾರ್ಗಗಳು
– ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ
– ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ
– ಮನೆ ಮನೆಗೆ ತೆರಳಿ ಸಮೀಕ್ಷೆ, ಕಡ್ಡಾಯ ಪರೀಕ್ಷೆ
– ಪರವೂರಿನವರಿಗೆ ಪ್ರವೇಶ ನಿರಾಕರಣೆ
– ಊರ ಹೊರಗೇ ಕ್ವಾರಂಟೈ ನ್‌
– ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ಚಿಕಿತ್ಸೆ
– ವಲಸೆ ಹೋಗಿ ವಾಪಸ್‌ ಬಂದವರ ಮೇಲೆ ನಿಗಾ

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.