ಬಿದಿರಿನಲ್ಲೂ ಅಂತರ ಬೆಳೆಗೆ ಅವಕಾಶ
Team Udayavani, Jun 6, 2021, 4:43 PM IST
ಬೆಂಗಳೂರು: ಅರಣ್ಯ ಕೃಷಿಗೆ ಪೂರಕವಾಗಿಬಿದಿರಿನಲ್ಲೂ ಈಗ ಅಂತರ ಬೆಳೆಗಳನ್ನು ಬೆಳೆಯಲುಸಾಧ್ಯವಿದ್ದು, ಇದರಿಂದ ರೈತರು ದುಪ್ಪಟ್ಟುಆದಾಯ ಗಳಿಸಬಹುದು ಎಂದು ಗ್ರೊ-ಮೋರ್‌ಬಯೋಟೆಕ್ ಲಿಮಿಟೆಡ್‌ನ ಕೃಷಿ ವಿಜ್ಞಾನಿಡಾ.ಎನ್. ಭಾರತಿ ತಿಳಿಸಿದರು.ಈಶ ಪ್ರತಿಷ್ಠಾನದ ಕಾವೇರಿ ಕೂಗು ಅಭಿಯಾನದ ಭಾಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಿದಿರಿನ ಕೃಷಿ ಮತ್ತು ಮಾರಾಟಕುರಿತ ವೆಬಿನಾರ್‌ನಲ್ಲಿ ಮಾತನಾ ಡಿ ದರು.
ಈ ಹಿಂದೆ ಬಿದಿರು ಬರೀ ಬದುಗಳಲ್ಲಿಬೆಳೆಯುವ ಬೆಳೆಯಾಗಿತ್ತು. ಈಚೆಗೆಪ್ರಮುಖ ವಾಣಿಜ್ಯ ಬೆಳೆಯಾಗಿರೂಪಗೊಳ್ಳುತ್ತಿದ್ದು, ಈಗ ಇನ್ನೂ ಒಂದು ಹೆಜ್ಜೆಮುಂದುವರಿದು ಬಿದಿರಿನ ಸಾಲುಗಳ ನಡುವೆಗೋಧಿ, ಸೊಯಾಬಿನ್, ಬೀನ್ಸ್, ಕಲ್ಲಂಗಡಿಸೇರಿದಂತೆ ಹಲವಾರು ಅಂತರ ಬೆಳೆಗಳನ್ನುಬೆಳೆಯಬಹುದು ಎಂದು ಹೇಳಿದರು.ಈ ಪ್ರಯೋಗ ಉತ್ತಮ ಫಲಿತಾಂಶನೀಡುತ್ತಿದ್ದು, ರೈತರಿಗೆ ಹೆಚ್ಚು ಆದಾಯ ತಂದುಕೊಡುತ್ತಿದೆ.
ಬಿದಿರಿನ ಬೆಳೆಗೆ ಮೊದಲವರ್ಷ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ.ನಂತರದ ಎರಡು ವರ್ಷಗಳು 30-40 ಸಾವಿರವೆಚ್ಚ ಆಗುತ್ತದೆ. ತದನಂತರದಲ್ಲಿ ನಿರಂತರ ಲಾಭಗಳಿಸಬಹುದು ಎಂದು ತಿಳಿಸಿದರು.ನಿರೀಕ್ಷಿತ ಪೂರೈಕೆ ಆಗ್ತಿಲ್ಲ: ಬೆಂಗಳೂರಿನ ಬಿದಿರುಅಭಿವೃದ್ಧಿ ಕೇಂದ್ರ (ಐಪಿಐಆರ್‌ಟಿಐ) ಮುಖ್ಯಸ್ಥವಿಪಿನ್ ಚಾವ್ಲಾ ಮಾತನಾಡಿ, ದೇಶದಲ್ಲಿ ಸುಮಾರು125 ಪ್ರಕಾರದ ಬಿದಿರಿನ ತಳಿಗಳಿವೆ.ಚೀನಾಕ್ಕೆ ಹೋಲಿಸಿದರೆ, ಇಲ್ಲಿ ಹೆಚ್ಚುಉತ್ಪಾದಕತೆ ಸಾಮರ್ಥ್ಯ ಇದೆ.ಆದರೆ, ನಿರೀಕ್ಷಿತ ಪ್ರಮಾಣದಲ್ಲಿಉತ್ಪಾದನೆ ಮತ್ತು ಪೂರೈಕೆಆಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಮರದ ದಿಮ್ಮಿಗಳಿಂದ ಮಾಡಬಹು ದಾದ ಉತ್ಪನ್ನಗಳೆಲ್ಲವನ್ನೂ ಬಿದಿರಿನಮೌಲ್ಯವರ್ಧನೆಯಲ್ಲಿ ಮಾಡಬಹುದಾಗಿದೆ.ಆದರೆ, ಇದುವರೆಗೆ ನಾವು ಹೆಚ್ಚಾಗಿ ಅಗರಬತ್ತಿ(ಇದಕ್ಕೇ ಶೇ. 50ರಷ್ಟು ಬಿದಿರು ಪೂರೈಕೆ ಆಗುತ್ತದೆ),ಕಡ್ಡಿಪೊಟ್ಟಣದಂತಹ ಉತ್ಪನ್ನಗ ಳಿಗೆಸೀಮಿತವಾಗಿದ್ದೇವೆ ಎಂದು ಹೇಳಿದರು.ಇಂಡಸ್ಟ್ರಿ ಫೌಂಡೇಶನ್ ಮಾರ್ಕೆಟಿಂಗ್ ಮತ್ತುಮರ್ಚಂಡೈಸಿಂಗ್ ಮುಖ್ಯಸ್ಥೆ ಸೂಸನ್ ಭಕು¤ಲ್,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿರಾಜೀವ್ ರಂಜನ್, ಹೆಚ್ಚುವರಿ ಪ್ರಧಾನ ಅರಣ್ಯಸಂರಕ್ಷಣಾಧಿಕಾರಿ ರಾಜ್‌ಕುಮಾರ್ ಶ್ರೀವಾಸ್ತವ್‌ಮತ್ತಿತರರು ಮಾತನಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.