ಜೈವಿಕ ಇಂಧನ ಬಳಕೆ ಹೆಚ್ಚಿಸಿ
Team Udayavani, Jun 6, 2021, 5:27 PM IST
ದೊಡ್ಡಬಳ್ಳಾಪುರ: ಪರಿಸರಕ್ಕೆ ಪೂರಕವಾಗಿಜೈವಿಕ ಇಂಧನ ಬಳಕೆಯನ್ನು ಹೆಚ್ಚು ಬಳಕೆಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ಹೇಳಿದರು.
ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನಕೇಂದ್ರದಲ್ಲಿ ಇಂಡಿಯನ್ ಆಯಿಲ್‌ಕಾರ್ಪೊàರೇಷನ್ ಲಿಮಿಟೆಡ್ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರದಿನಾಚರಣೆಯಲ್ಲಿ ಮಾತನಾಡಿ, ಇತ್ತೀಚಿನದಿನಗಳಲ್ಲಿ ಕಾರ್ಖಾನೆಗಳು, ವಾಹನಗಳದಟ್ಟನೆಯಿಂದ ವಾಯು ಮಾಲಿನ್ಯಹೆಚ್ಚಾಗುತ್ತಿದೆ. ಪರಿಸರದ ಮೇಲೆ ಋಣಾತ್ಮಕಪರಿಣಾಮ ಬೀರುತ್ತಿರುವುದರಿಂದ ಪರಿಸರಸಂರಕ್ಷಣೆ ಮುಖ್ಯವಾಗಿದೆ.
ಕೃಷಿ ತ್ಯಾಜ್ಯವನ್ನುಇಂಧನವನ್ನಾಗಿ ಮಾರ್ಪಡಿಸುವ ಕುರಿತಾಗಿಸಂಶೋಧನೆಗಳು ನಡೆಯುತ್ತಿದೆ. ಬೇವು,ಹೊಂಗೆ ಮುಂತಾದವುಗಳನ್ನು ಇಂಧನದಲ್ಲಿಬಳಕೆ ಹೆಚ್ಚಾದಂತೆ ಪರಿಸರ ಮಾಲಿನ್ಯಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ಹೆಚ್ಚುಗಿಡಗಳನ್ನು ನೆಡುವ ಮೂಲಕ ಪರಿಸರದಸಂರಕ್ಷಣೆಗೆ ಕೈಜೋಡಿಸಬೇಕು ಎಂದುಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಪ್ರಧಾನಿನರೇಂದ್ರ ಮೋದಿ ಅವರ ವಿಡಿಯೋಸಂವಾದದ ನೇರ ಕಾರ್ಯಕ್ರಮವನ್ನುವೀಕ್ಷಣೆಗೆ ಕಚೇರಿಯ ಸಭಾಂಗಣಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಲಿಮಿಟೆಡ್‌ನ ಬೆಂಗಳೂರು ವಿಭಾಗದಸಹಾಯಕ ವ್ಯವಸ್ಥಾಪಕರಾದ ಮೇಘಾ ಸಿಂಗ್‌ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.