ದಿನೇ ದಿನೆ ಕೋವಿಡ್ ರಹಿತ ಗ್ರಾಮಗಳ ಹೆಚ್ಚಳ
Team Udayavani, Jun 6, 2021, 6:44 PM IST
ಚಾಮರಾಜನಗರ: ಜಿಲ್ಲೆಯ 271 ಗ್ರಾಮಗಳುಕೋವಿಡ್ ಪ್ರಕರಣಗಳಿಂದ ಮುಕ್ತವಾಗಿವೆ. ಈ 271ಗ್ರಾಮಗಳಲ್ಲಿ ಇದುವರೆಗೂ ಪಾಸಿಟಿವ್ ಬಾರದಹಾಗೂ ಪಾಸಿಟಿವ್ ಬಂದು ಈಗ ಒಂದೂಪ್ರಕರಣಗಳಿಲ್ಲದ ಗ್ರಾಮಗಳು ಸೇರಿವೆ.
ಆಶಾದಾಯಕಬೆಳವಣಿಗೆಯೆಂದರೆ ದಿನೇ ದಿನೆ ಕೋವಿಡ್ ರಹಿತಗ್ರಾಮಗಳ ಸಂಖ್ಯೆ ಏರಿಕೆಯಾಗುತ್ತಿದೆ!ಚಾಮರಾಜನಗರ ತಾಲೂಕಿನಲ್ಲಿ 23 ಗ್ರಾಮಪಂಚಾಯಿತಿಗಳಿದ್ದು, ಒಟ್ಟು 76 ಗ್ರಾಮಗಳಲ್ಲಿಕೋವಿಡ್ ಪ್ರಕರಣಗಳಿಲ್ಲ. ಗುಂಡ್ಲುಪೇಟೆ ತಾಲೂಕಿನಲ್ಲಿ 24 ಗ್ರಾಪಂಗಳಿದ್ದು, ಈ ಪೈಕಿ 61 ಗ್ರಾಮಗಳುಕೋವಿಡ್ ಮುಕ್ತವಾಗಿವೆ. ಕೊಳ್ಳೇಗಾಲ ತಾಲೂಕಿನಲ್ಲಿ7 ಗ್ರಾಮ ಪಂಚಾಯಿತಿಗಳಿದ್ದು, 31 ಗ್ರಾಮಗಳಲ್ಲಿಕೋವಿಡ್ ಇಲ್ಲ. ಹನೂರು ತಾಲೂಕಿನಲ್ಲಿ 16ಗ್ರಾಪಂಗಳಿದ್ದು, 86 ಗ್ರಾಮಗಳು ಕೋವಿಡ್‌ರಹಿತವಾಗಿವೆ. ಯಳಂದೂರು ತಾಲೂಕಿನಲ್ಲಿ 3ಗ್ರಾಪಂಗಳಿದ್ದು, 17 ಗ್ರಾಮಗಳಲ್ಲಿ ಈಗ ಕೋವಿಡ್‌ಪ್ರಕರಣಗಳಿಲ್ಲ.ಕಾಡಂಚಿನ ಗ್ರಾಮಗಳು ಕೋವಿಡ್ ಮುಕ್ತ:ಜಿಲ್ಲೆಯಲ್ಲಿ ಶೇ. 51ರಷ್ಟು ಭಾಗ ಅರಣ್ಯಪ್ರದೇಶವಾಗಿದೆ.
ಹನೂರು ಮತ್ತು ಚಾಮರಾಜನಗರತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚು ಇವೆ.ಹಾಗಾಗಿ ಈ ತಾಲೂಕುಗಳಲ್ಲಿ ಕೋವಿಡ್ ಮುಕ್ತಗ್ರಾಮಗಳು ಹೆಚ್ಚು ಇವೆ. ಹನೂರು ತಾಲೂಕಿನಲ್ಲಿ 89ಹಾಗೂ ಚಾಮರಾಜನಗರ ತಾಲೂಕಿನಲ್ಲಿ 75ಗ್ರಾಮಗಳು ಕೋವಿಡ್ ಮುಕ್ತವಾಗಿವೆ.ಈ ಅಂಕಿ ಅಂಶಗಳಲ್ಲಿ ಪ್ರತಿದಿನ ಇದರಲ್ಲಿಬದಲಾವಣೆಗಳು ಕಂಡು ಬರುತ್ತವೆ. ಇಂದು ಒಂದೂಪ್ರಕರಣ ಇಲ್ಲದ ಗ್ರಾಮದಲ್ಲಿ ಮಾರನೆ ದಿನ ಒಂದು ಪ್ರಕರಣ ವರದಿಯಾಗಬಹುದು.
ಇಂದು ಒಂದಷ್ಟುಪ್ರಕರಣ ಇರುವ ಗ್ರಾಮ ಒಂದೆರಡು ದಿನಗಳಲ್ಲಿಕೋವಿಡ್ ಮುಕ್ತ ಗ್ರಾಮವಾಗಬಹುದು ಎಂದುಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೂಡೂರುಭೀಮಸೇನ್ ಸ್ಪಷ್ಟ ಪಡಿಸಿದರು.ಇದುವರೆಗೆ ಕೋವಿಡ್ ಕಾಲಿಡದ ಗ್ರಾಮಗಳನ್ನುವರ್ಗೀಕರಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಕೋವಿಡ್‌ಪ್ರಕರಣ ಶೂನ್ಯವಾಗಿರುವ ಗ್ರಾಮಗಳನ್ನು ಕೋವಿಡ್‌ಮುಕ್ತ ಗ್ರಾಮ ಎಂದು ಗುರುತಿಸುತ್ತೇವೆ ಎಂದುಅವರು ತಿಳಿಸಿದರು.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.