![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 6, 2021, 7:10 PM IST
ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ), 2028ರಿಂದ 2030ರೊಳಗಾಗಿ, ಶುಕ್ರಗ್ರಹದ ಅಧ್ಯಯನಕ್ಕಾಗಿ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ.
ಇದರಲ್ಲಿ ಮೊದಲು ಶುಕ್ರಗ್ರಹದತ್ತ ತೆರಳಲಿರುವ ಡಾವಿನ್ಸಿ (ಡೀಪ್ ಅಟ್ಮಾಸ್ಪಿಯರ್ ಆಫ್ ವೀನಸ್ ಇನ್ವೆಸ್ಟಿಗೇಷನ್ ಆಫ್ ನೋಬಲ್ ಗ್ಯಾಸಸ್) ಎಂಬ ಆಕಾಶಕಾಯವು ಬುಧನಲ್ಲಿರುವ ರಾಸಾಯನಿಕಗಳ ಮಾಹಿತಿಯನ್ನು ಸಂಗ್ರಹಿಸಿ, ಭೂಮಿಗೆ ರವಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಗಳು ಅತ್ಯಂತ ಮಹತ್ವ ಹಾಗೂ ವಿಶೇಷವಾಗಿವೆ ಎಂದಿರುವ ಯು.ಕೆ.ಯ ನಾಟಿಂಗ್‌ಹ್ಯಾಮ್ ಟ್ರೆಂಟ್ ವಿವಿಯ ಭೌತಶಾಸ್ತ್ರ ಉಪನ್ಯಾಸಕ ಇಯಾನ್ ವ್ಹಿಟೇಕರ್, ಈ ಕುರಿತಂತೆ ವಿವರಣೆ ನೀಡಿದ್ದಾರೆ. 1990ರ ನಂತರ ಶುಕ್ರಗ್ರಹದ ಅಧ್ಯಯನ ಮಾಡಲಾಗಿಲ್ಲ. ಇಂಥ ದೈತ್ಯ ಪ್ರಯತ್ನವೊಂದಕ್ಕೆ ನಾಸಾ ಮುಂದಡಿಯಿಟ್ಟಿರುವುದು ಮಹತ್ವದ ವಿಚಾರ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ವೈದ್ಯನ ಚಿಕಿತ್ಸೆಗೆ 1.5 ಕೋಟಿ ಕೊಟ್ಟ ಆಂಧ್ರ ಸಿಎಂ
ಅಧ್ಯಯನ ಏಕೆ?
ಇನ್ನು, ಶುಕ್ರಗ್ರಹದ ವಾತಾವರಣ ಭಾರೀ ಭಯಂಕರ. ಅದೊಂದು ಪ್ರತಿಕೂಲ ಜಗತ್ತು. ಅಲ್ಲಿನ ವಾತಾವರಣವು ಗಂಧಕಾಮ್ಲದಿಂದ ಕೂಡಿದೆ. ಅಲ್ಲಿನ ಉಷ್ಣಾಂಶ ಸೀಸವನ್ನೂ ಕರಗಿಸುವಂಥದ್ದು! ಅಂದರೆ, 325 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು. ಇನ್ನು ಅಲ್ಲಿನ ಗಾಳಿಯಲ್ಲಿ ಶೇ. 96ರಷ್ಟು ಭಾಗ ಇಂಗಾಲದಿಂದ ಕೂಡಿದೆ. ಇದರಿಂದ ಅಲ್ಲಿ ಗರಿಷ್ಠ ತಾಪಮಾನ ಒಮ್ಮೊಮ್ಮೆ 470 ಡಿಗ್ರಿ ಸೆಲ್ಸಿಯಸ್‌ನಿಂದ 900 ಡಿಗ್ರಿ ಸೆಲ್ಸಿಯಸ್‌ವರೆಗೆ ಏರುತ್ತದೆ. ಹಾಗಾಗಿಯೇ, ಈ ಗ್ರಹದ ಅಧ್ಯಯನ ಕುತೂಹಲಕಾರಿಯಾಗಿದೆ ಎನ್ನುತ್ತಾರೆ ಇಯಾನ್.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.