8 ದಿನದಲ್ಲಿ ಕನಿಷ್ಟ 30 ಹಳ್ಳಿ ಸೋಂಕು ಮುಕ್ತ ಗುರಿ
Team Udayavani, Jun 6, 2021, 6:48 PM IST
ಯಳಂದೂರು: ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 8 ಗ್ರಾಮಗಳುಕೋವಿಡ್ ಮುಕ್ತವಾಗಿವೆ. ಜೂ.14ರೊಳಗೆ ಕನಿಷ್ಠ 30ಹಳ್ಳಿಗಳನ್ನು ಸೋಂಕು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಎನ್. ಮಹೇಶ್ ಸಲಹೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿದಅವರು, ತಾಲೂಕನ್ನು ಕೋವಿಡ್ ಮುಕ್ತಗೊಳಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.
ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಇದ್ದಾರೆ.ಗ್ರಾಮೀಣ ಭಾಗದಲ್ಲಿ ಪತ್ರಿಕಾ ಏಜೆಂಟರು ಹಾಗೂ ವಿತರಕರೇಬಿಡಿವರದಿಗಾರರಾಗಿರುತ್ತಾರೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆಸಿಲುಕಿದ್ದಾರೆ. ಇವರಿಗೂ ಕನಿಷ್ಠ 5 ಸಾವಿರ ರೂ. ಪರಿಹಾರನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದುಎಂದರು.
ಸಭೆಯಲ್ಲಿ ತಹಶೀಲ್ದಾರ್ ಜಯಪ್ರಕಾಶ್, ಚಿದಾನಂದಗುರುಸ್ವಾಮಿ, ಇಒ ಪ್ರೇಮ್‌ಕುಮಾರ್, ಆರೋಗ್ಯಾಧಿಕಾರಿ ಡಾ.ಮಂಜುನಾಥ್, ವೈದ್ಯಾಧಿಕಾರಿಗಳಾ ಡಾ| ಶ್ರೀಧರ್, ಡಾ|ರೇಣುಕಾದೇವಿ, ಸಿಡಿಪಿಒ ದೀಪಾ, ಜಯಶೀಲ, ಪಪಂಮುಖ್ಯಾಧಿಕಾರಿ ಎಂ.ಸಿ ನಾಗರತ್ನ, ಸಿಪಿಐ ಶೇಖರ್ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.