ಆರಂಭಗೊಂಡಿದೆ ಆದಾಯ ತೆರಿಗೆ ಹೊಸ ವೆಬ್ ಸೈಟ್..!
Team Udayavani, Jun 7, 2021, 5:21 PM IST
ನವ ದೆಹಲಿ : ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೊಸ ವೆಬ್ ಸೈಟ್ ಇಂದಿನಿಂದ ಪ್ರಾರಂಭವಾಗಿದೆ.ಆದಾಯ ತೆರಿಗೆಯ ಹೊಸ ವೆಬ್ ಸೈಟ್ ನಲ್ಲಿ ಮೊದಲಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ವೆಬ್ ಸೈಟ್ ಪ್ರಾರಂಭಿಸುವ ಮೊದಲು ಹಳೆಯ ವೆಬ್ ಸೈಟ್ ನನ್ನು ಜೂನ್ 1 ರಿಂದ 6 ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು.
ಈ ಹೊಸ ಪೋರ್ಟಲ್‌ನಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಮರುಪಾವತಿ ಸಮಸ್ಯೆಯ ತ್ವರಿತ ಪ್ರಕ್ರಿಯೆಯೊಂದಿಗೆ ಹಲವಾರು ವಿಶೇಷತೆಗಳು ಇರಲಿದೆ.
ಇದನ್ನೂ ಓದಿ : ಕಾಲುಬಾಯಿ ರೋಗ: ಲಸಿಕೆ ಖರೀದಿಗೆ ಚವಾಣ್ ಸೂಚನೆ
- ಒಂದೇ ಡ್ಯಾಶ್ ಬೋರ್ಡ್ ನಲ್ಲಿ ಎಲ್ಲಾ ವಹಿವಾಟುಗಳು ಮತ್ತು ಅಪ್ ಲೋಡ್ ಗಳು ಅಥವಾ ಬಾಕಿ ಇರುವ ಕಾರ್ಯಗಳು ಕಾಣಸಿಗುತ್ತದೆ. ಆದ್ದರಿಂದ ತೆರಿಗೆದಾರರು ತಮ್ಮ ಎಲ್ಲಾ ಅಗತ್ಯತೆಗಳನ್ನು ಒಂದೇ ಪುಟದಲ್ಲಿ ನೋಡಬಹುದಾಗಿದೆ.
- ಐಟಿಆರ್ ನನ್ನು ಸ್ವಂತವಾಗಿ ಭರ್ತಿ ಮಾಡಲು, ತೆರಿಗೆದಾರರಿಗೆ ತಮ್ಮ ಐಟಿಆರ್ 1, 4 /ಆನ್‌ಲೈನ್ ಅಥವಾ ಆಫ್ ಲೈನ್, ಐಟಿಆರ್ 2/ ಆಫ್ ಲೈನ್ ತುಂಬಲು ಸಹಾಯ ಮಾಡಲು ಕೆಲವು ಪ್ರಶ್ನೆಗಳೊಂದಿಗೆ ಐಟಿಆರ್ ರೆಡಿ ಸಾಫ್ಟ್ ವೇರ್ ಇರುತ್ತದೆ. ಈ ಸಾಫ್ಟ್‌ವೇರ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಐಟಿಆರ್ 3, 5, 6, 7 ಗೆ ಶೀಘ್ರದಲ್ಲೇ ಇಂತಹ ಸೌಲಭ್ಯ ನೀಡಲಾಗುವುದು.
- ಸಂಬಳ, ಮನೆ ಆಸ್ತಿ, ವ್ಯವಹಾರ / ವೃತ್ತಿ ಸೇರಿದಂತೆ ತಮ್ಮ ಆದಾಯದ ಕೆಲವು ವಿವರಗಳನ್ನು ಒದಗಿಸಲು ತಮ್ಮ ಪ್ರೊಫೈಲ್ ನನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಇದನ್ನು ಅವರ ಐಟಿಆರ್ ಪ್ರಿ-ಫೈಲಿಂಗ್ ನಲ್ಲಿ ಬಳಸಬಹುದಾಗಿದೆ
- ಇನ್ನು ಆದಾಯ ತೆರಿಗೆಯ ಹೊಸ ವೆಬ್ ಸೈಟ್ ನಲ್ಲಿ ತೆರಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಹೊಸ ಕಾಲ್ ಸೆಂಟರ್ ಕೂಡ ಇರಲಿದ್ದು, ಆಧುನಿಕ ಸೌಲಭ್ಯಗಳಾದ ವಿವರವಾದ FAQ ಗಳು, ಬಳಕೆದಾರರ ಕೈಪಿಡಿ, ವೀಡಿಯೊಗಳು ಮತ್ತು ಚಾಟ್‌ಬಾಟ್ / ಲೈವ್ ಏಜೆಂಟ್ ಸಹ ಒದಗಿಸಲಾಗುವುದು.
- ಹೊಸ ಪೋರ್ಟಲ್‌ನಲ್ಲಿ ಹೊಸ ಆನ್ ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಮತ್ತು ಅದರಲ್ಲಿ ಅನೇಕ ಹೊಸ ಪಾವತಿ ಆಯ್ಕೆಗಳನ್ನು ನೀಡಲಾಗುವುದು. ಇವುಗಳಲ್ಲಿ ನೆಟ್ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್ ಮತ್ತು ಆರ್‌ಟಿಜಿಎಸ್ / ನೆಫ್ಟ್ ಪಾವತಿ ಆಯ್ಕೆಗಳಿವೆ.
- ತೆರಿಗೆಗೆ ಸಂಬಂಧಿಸಿದ ಕೆಲಸವನ್ನು ಮೊಬೈಲ್ ಆ್ಯಪ್ ಮೂಲಕವೂ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು: ಸಿಎಂ ವಿರುದ್ಧ ಮತ್ತೆ ಗುಡುಗಿದ ಗುರು ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.