ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಿ
Team Udayavani, Jun 7, 2021, 6:36 PM IST
ಚಾಮರಾಜನಗರ: ಗಿಡ ಮರಗಳನ್ನು ಬೆಳೆಸಿಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮಪರಿಸರ ನಿರ್ಮಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶಸದಾಶಿವ ಎಸ್.ಸುಲ್ತಾನ್ ಪುರಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾವಕೀಲರ ಸಂಘ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಮತ್ತು ನ್ಯಾಯಾಂಗ ಇಲಾಖೆಸಹಯೋಗದಲ್ಲಿ ನಗರದ ನ್ಯಾಯಾಲಯದಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಉದ್ಘಾಟಿಸಿ ಮಾತನಾಡಿದರು.
ನಮ್ಮ ಕರ್ತವ್ಯ: ಅಭಿವೃದ್ಧಿ ನೆಪದಲ್ಲಿ ಮರ ಕಡಿದುಹಾಕಿದರೆ ಪರಿಸರದಲ್ಲಿ ಅಸಮತೋಲನಉಂಟಾಗುತ್ತದೆ. ಮರ ಗಿಡ ಬೆಳೆಸುವುದರ ಮೂಲಕಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣಮಾಡುವತ್ತ ಗಮನ ಹರಿಸಬೇಕು. ಸಸಿ ನೆಟ್ಟು ಅರಣ್ಯಬೆಳೆಸಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖಕರ್ತವ್ಯ ಎಂದು ತಿಳಿಸಿದರು.
ಪರಿಸರ ದಿನ ಆಚರಣೆಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರಉಳಿಸುವ ಕಾರ್ಯ ನಿರಂತರವಾಗಿ ಸಾಗಬೇಕುಎಂದು ಸಲಹೆ ಮಾಡಿದರು.
ಪರಿಸರ ಸಂರಕ್ಷಿಸಿ: ಹಿರಿಯ ಸಿವಿಲ್ ನ್ಯಾಯಾಧೀಶಗಣಪತಿ ಜಿ.ಬಾದಾಮಿ ಮಾತನಾಡಿ, ಜ್ವಾಲಾಮುಖೀ,ಮಣ್ಣು ಕುಸಿತ, ಜಲ ಪ್ರಳಯ, ಜಾಗತಿಕ ತಾಪಮಾನಏರಿಕೆಯಂತಹ ಅನೇಕ ತೊಂದರೆ ಸಂಭವಿಸಲುಪರಿಸರ ನಾಶವೇ ಪ್ರಮುಖ ಕಾರಣ. ಹೀಗಾಗಿಪರಿಸರ ಸಂರಕ್ಷಿಸಿ ಭೂಮಿ ರಕ್ಷಿಸಬೇಕು ಎಂದರು.ಪರಿಸರ ಪ್ರಾಮುಖ್ಯತೆ ತಿಳಿಸಿ: ಕಾನೂನು ಸೇವೆಗಳಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.ಮನುಷ್ಯ ತನ್ನ ನಿರ್ಲಕ್ಷ್ಯದಿಂದ ಸುತ್ತಮುತ್ತಲಿನಪರಿಸರ ಹಾಳು ಮಾಡುತ್ತಿದ್ದಾನೆ.
ಇದಕ್ಕೆಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ. ಅದಕ್ಕೆಈಗಲೇ ಎಚ್ಚೆತ್ತು ಪರಿಸರ ಸಂರಕ್ಷಣೆ ಮಾಡುವುದರಜತೆಗೆ ಮಕ್ಕಳಿಗೂ ಗಿಡ ಮರ ಹಾಗೂ ಪರಿಸರದಪ್ರಾಮುಖ್ಯತೆ ತಿಳಿಸಬೇಕು ಎಂದರು.
ಜೀವಿಸಲು ಅವಕಾಶ ನೀಡಿ: ಪ್ರಧಾನ ಸಿವಿಲ್‌ನ್ಯಾಯಾಧೀಶ ಮಹಮ್ಮದ್ ರೋಷನ್ ಷಾಮಾತನಾಡಿ, ಪರಿಸರ ನಾಶ ಮಾಡುವುದರಿಂದಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಿಸಬೇಕಾಗುತ್ತದೆ. ಮರ ಕಡಿದ ಸ್ಥಳದಲ್ಲಿ ಒಂದು ಸಸಿನೆಡಬೇಕು.
ಪ್ರಾಣಿ, ಪಕ್ಷಿ ಇತರೆ ಜೀವ ಸಂಕುಲ ಗಿಡಮರಗಳನ್ನು ನಂಬಿ ಬದುಕುತ್ತವೆ. ಅವುಗಳಿಗೆಜೀವಿಸಲು ಅವಕಾಶ ಮಾಡಿಕೊಡಬೇಕೆಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರುಇಂದುಶೇಖರ್, ಹೆಚ್ಚುವರಿ ಸಿವಿಲ್‌ನ್ಯಾಯಾಧೀಶರಾದ ಸ್ಮಿತಾ, ಸಾಮಾಜಿಕ ಅರಣ್ಯವಲಯದ ಅಧಿಕಾರಿ ಟಿ.ಆರ್. ಅಮೃತಾನ್ಯಾಯಾಂಗ ಇಲಾಖೆ ಮುಖ್ಯ ಆಡಳಿತಾಧಿಕಾರಿಸುರೇಶ್, ನ್ಯಾಯಾಂಗ ಇಲಾಖೆ ನೌಕರರಅಧ್ಯಕ್ಷರಾದ ಯಂಕನಾಯಕ, ಪರಿಸರ ಮಂಡಳಿಹರಿಪ್ರಸಾದ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.