ಶಿಕಣ ತಜ್ಞ ಡಾ.ಎಚ್‌ಎನ್ ಸ್ಮರಣೆ
Team Udayavani, Jun 7, 2021, 7:11 PM IST
ಚಿಕ್ಕಬಳ್ಳಾಪುರ: ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರು ಬೆಂಗಳೂರು ವಿಶ್ವವಿದ್ಯಾಲಯಉನ್ನತ ಮಟ್ಟಕ್ಕೆ ಕೊಂಡೊಯ್ದವರು. ಸ್ವಾತಂತ್ರ್ಯಹೋರಾಟದಲ್ಲೂ ತಮ್ಮ ಛಾಪು ಮೂಡಿಸಿದ್ದರುಎಂದು ಶಿಕ್ಷಣ ತಜ್ಞ ಡಾ.ಕೋಡಿರಂಗಪ್ಪಅಭಿಪ್ರಾಯಪಟ್ಟರು.
ನಗರದ ವಿವೇಕ ಕೇಂದ್ರದಲ್ಲಿ ನಡೆದ ಡಾ.ಎಚ್. ಎನ್. ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ನಿಕಟ ಪೂರ್ವ, ಸರಳ ವ್ಯಕ್ತಿತ್ವ ಹೊಂದಿದ್ದ ಎಚ್‌ಎನ್ ಅವರು ವೈಚಾರಿಕತೆಯ ಹರಿಕಾರರಾಗಿದ್ದು, ಹಲವು ಶಾಲಾ ಕಾಲೇಜು ಸ್ಥಾಪಿಸಿ ಬಡವಿದ್ಯಾರ್ಥಿ ಗಳಿಗೆ ಸ್ಫೂ ರ್ತಿಯ ಚಿಲುಮೆ ಆಗಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಬೇಡಿಎನ್ನುವ ನಿಲುವನ್ನು ತಾಳಿದವರು,
ವಿಜ್ಞಾನಕೇವಲ ಪಠ್ಯವಾಗದೆ ಜೀವನ ವಿಧಾನವಾಗಬೇಕು ಮತ್ತು ಜೀವನ ಧರ್ಮವಾಗಬೇಕುಎಂದು ತಿಳಿಸಿದ ಮಹಾನ್ ವ್ಯಕ್ತಿ ಎಚ್.ನರಸಿಂಹಯ್ಯನವರು ಎಂದು ಹೇಳಿದರು.
ಈ ಭಾಗದ ಅಸಂಖ್ಯಾತ ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಕೇವಲಕನಸಾಗಿತ್ತು. ಇದನ್ನು ಸಾಕಾರಗೊಳಿಸಲುಎಚ್.ಎನ್ ಅವರು ಬಾಗೇಪಲ್ಲಿ, ಗೌರಿಬಿದನೂ ರು ಎಲ್ಲೂರು ಹೊಸೂರಿನಲ್ಲಿ ಶಾಲಾ-ಕಾಲೇಜು ಆರಂಭಿಸಿ ಮುಂದಿನ ಪೀಳಿಗೆಯಏಳಿಗೆಗೆ ನೆರವಾದರು ಎಂದು ತಿಳಿಸಿದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಉಪನ್ಯಾಸಕ ಡಾ.ಎಂ.ಶಂಕರ್ ಮಾತನಾಡಿ,ಎಚ್.ಎನ್. ಅವರ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ,ಗಾನ ಅಶ್ವತ್ಥ, ಶಿಕ್ಷಕ ಚನ್ನಕೃಷ್ಣಪ್ಪ, ಕೆ.ಎಂ.ರೆಡ್ಡಪ್ಪ,ನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕು ವಚನಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್‌ನಾರಾಯಣಸ್ವಾಮಿ, ಪ್ರಗತಿಪರ ಚಿಂತಕಯಲವಳ್ಳಿ ಸೊಣ್ಣೇಗೌಡ, ಅಂತಾರಾಷ್ಟ್ರೀಯಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಪತ್ರಕರ್ತರಾದ ಜಯರಾಂ, ನಾರಾಯಣ ಸ್ವಾಮಿ,ಟೀವಿ ಚಂದ್ರಶೇಖರ್, ನಾರಾಯಣಸ್ವಾಮಿ,ಉಪನ್ಯಾಸಕ ಹರೀಶ್, ಶಿಕ್ಷಕ ಮುನಿರಾಜು,ಗೋಪಾಲಕೃಷ್ಣ, ಗಂಗಾಧರಮೂರ್ತಿಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.