ಟ್ವೀಟ್ ವಿವಾದ: ಇಂಗ್ಲೆಂಡಿನ ವೇಗಿ ಓಲೀ ರಾಬಿನ್ಸನ್ ಅಮಾನತು
Team Udayavani, Jun 7, 2021, 10:20 PM IST
ಲಂಡನ್: ಇಂಗ್ಲೆಂಡಿನ ವೇಗಿ ಓಲೀ ರಾಬಿನ್ಸನ್ಗೆ ಟ್ವೀಟ್ ವಿವಾದ ದೊಡ್ಡ ಉರುಳಾಗಿ ಪರಿಣಮಿಸಿದೆ. ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತುಗೊಳಿಸಿದೆ. ಮುಂದಿನ ತನಿಖೆ ಹಾಗೂ ಇದರ ವರದಿ ಬಳಿಕ ರಾಬಿನ್ಸನ್ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ.
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಲಾರ್ಡ್ಸ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಬೆನ್ನಲ್ಲೇ 2012-13ರಲ್ಲಿ ಓಲೀ ರಾಬಿನ್ಸನ್ ಮಾಡಿದ ಅಶ್ಲೀಲ ಹಾಗೂ ಜನಾಂಗೀಯ ನಿಂದನೆಯ ಟ್ವೀಟ್ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದಕ್ಕೆ ರಾಬಿನ್ಸನ್ ಕ್ಷಮೆಯನ್ನೂ ಯಾಚಿಸಿದ್ದರು.
ಲಾರ್ಡ್ಸ್ ಟೆಸ್ಟ್ ಮುಗಿದ ಬೆನ್ನಲ್ಲೇ ಇಸಿಬಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ. ಅವರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ತನಿಖೆಗೆ ಆದೇಶಿಸಲಿದೆ. ಅವರು ಇಂಗ್ಲೆಂಡ್ ಕ್ಯಾಂಪ್ನಿಂದ ನಿರ್ಗಮಿಸಿದ್ದು, ಸಸೆಕ್ಸ್ ಕೌಂಟಿಗೆ ವಾಪಸಾಗಿದ್ದಾರೆ.
ಯಶಸ್ವಿ ಪದಾರ್ಪಣೆ…
ಓಲೀ ರಾಬಿನ್ಸನ್ ಪದಾರ್ಪಣ ಟೆಸ್ಟ್ನಲ್ಲೇ 7 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡಿನ ಯಶಸ್ವಿ ಬೌಲರ್ ಆಗಿ ಮೂಡಿಬಂದಿದ್ದರು. ಜತೆಗೆ 42 ರನ್ ಹೊಡೆದು ಬ್ಯಾಟಿಂಗ್ನಲ್ಲೂ ಮಿಂಚಿದ್ದರು. ಆದರೆ ಅವರ ಈ ಸಾಧನೆಯ ಮೇಲೆ ಟ್ವೀಟ್ ವಿವಾದದ ಕಾರ್ಮೋಡ ಆವರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.