ಸ್ಪೋರ್ಟ್ಸ್ ಗಾರ್ಡನ್ ಮುಕುಟ
Team Udayavani, Jun 8, 2021, 2:29 PM IST
ಹುಬ್ಬಳ್ಳಿ: ನಗರದಲ್ಲಿ ನ್ಪೋರ್ಟ್ಸ್ ಫೋಕಸ್ ಹೊಂದಿದ ದೇಶದಲ್ಲೇ ಪ್ರಪ್ರಥಮ ಹಾಗೂ ಏಷ್ಯಾ ಖಂಡದಲ್ಲಿಯೇ 2ನೇ ನ್ಪೋರ್ಟ್ಸ್ ಗಾರ್ಡನ್ ನಿರ್ಮಾಣವಾಗುತ್ತಿದ್ದು, 3-4 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಗೋಕುಲ ರಸ್ತೆ-ಶಿರೂರ ಪಾರ್ಕ್ ನಡುವಿನ ತೋಳನಕೆರೆಯ 14 ಎಕರೆ ಜಾಗದಲ್ಲಿ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 2ರಿಂದ 80 ವರ್ಷ ವಯೋಮಾನದವರು ಉಪಯೋಗಿಸಬಹುದಾದ 56 ಬಗೆಯ ಆಟದ ಉಪಕರಣಗಳಿರಲಿವೆ. ಈಗಾಗಲೇ ಗಾರ್ಡನ್‌ದಲ್ಲಿ ಮಕ್ಕಳಿಗೆ ಎರಡು ಕಡೆ ಆಟದ ಸಾಮಗ್ರಿ, ಸಾಮಾನ್ಯ ಓಪನ್ ಜಿಮ್ ಸೇರಿ ಒಟ್ಟು 38 ಉಪಕರಣಗಳನ್ನು ಅಳವಡಿಸಲಾಗಿದೆ.
ಇವೆಲ್ಲವು ಅತ್ಯುತ್ತಮ ಗುಣಮಟ್ಟದ ಜನಸ್ನೇಹಿ ಸಾಮಗ್ರಿಗಳಾಗಿವೆ. ಮಕ್ಕಳು ಇವುಗಳನ್ನು ಬಳಸುವಾಗ ತರಚಿದ ಗಾಯ ಕೂಡ ಆಗಲ್ಲ. ಇವುಗಳ ಬಳಕೆ ಬಗ್ಗೆ ಸೂಚನಾ ಫಲಕ ಅಳವಡಿಸಲಾಗುತ್ತದೆ. ಇವೆಲ್ಲವೂ ಮ್ಯಾನುವಲ್ ಆಗಿವೆ. ಸೈಕ್ಲಿಂಗ್ ಟ್ರ್ಯಾಕ್, ಸ್ಕೇಟಿಂಗ್ ರಿಂಗ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಹಾಪ್ ಬಾಸ್ಕೆಟ್‌ಬಾಲ್, ಟೆನ್ನಿಸ್ ಲಾಂಜ್ ಹಾಗೂ ಮಿಲಿಟರಿಯಲ್ಲಿ ತರಬೇತಿ ನೀಡುವ ಸಾಹಸ ಪ್ರದರ್ಶನದ ಬೂಟ್ ಕ್ಯಾಂಪ್ ಜತೆಗೆ ಅಂಗವಿಕಲರಿಗೆ ಪ್ರತ್ಯೇಕವಾಗಿ ಜಿಮ್ ಇರಲಿದೆ.
ಆಟ ಆಡುವಾಗ ಮಕ್ಕಳಿಗೆ, ವೃದ್ಧರಿಗೆ, ಕ್ರೀಡಾಪಟುಗಳಿಗೆ ಗಾಯವಾಗದಂತೆ ಸಾಫ್ಟ್‌ಟೈಮ್ ಆಫ್ ಫ್ಲೋರಿಂಗ್ ನಿರ್ಮಿಸಲಾಗುತ್ತಿದೆ. ಪಿಕ್ನಿಕ್ ಸ್ಪಾಟ್: ಕೆರೆಯ ಸುತ್ತಮುತ್ತಲಿನ ಸ್ಥಳವನ್ನು ಎತ್ತರದಿಂದ ವೀಕ್ಷಿಸಲು ವಾಚ್ ಟವರ್ ನಿರ್ಮಿಸಲಾಗಿದೆ. ಸಂಜೆ ಮ್ಯೂಜಿಕ್ ಕಾರ್ಯಕ್ರಮ ಆಯೋಜಿಸಲು ಓಪನ್ ಆ್ಯಂಪಿ ಥೇಟರ್ ಇದೆ. ಫುಡ್ ಸ್ಟಾಲ್‌ಗಳು ಇರಲಿವೆ. ಯೋಗ, ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ಪಿಕ್‌ನಿಕ್ ಸ್ಪಾಟ್ ಆಗುವ ಎಲ್ಲ ಲಕ್ಷಣಗಳಿವೆ.
ಯಾವ್ಯಾವ ಆಟದ ಸಾಮಗ್ರಿ? : ಸೈರಾಕಸ್, ಎಂಪಿಎಸ್ ಬ್ರೈಟನ್, ವ್ಯಾಂಕಿಶ್, ಕಾಯಾ, ಮೇರಿ ಗೋ ಗ್ರೌಂಡ್, ಡಬಲ್ ಪೋಡ್‌ಸ್ವಿಂಗ್, ಕ್ರೀಪಿ ಕ್ರಾವ್ಲಿ, ಬೋಂಗೋ, ಮರಿಂಬಾ, ಚಿಮ್ಸ್, ರೋಪ್ ಕ್ಲಿಂಬರ್, ಪ್ಯಾರಲಲ್ ರೇಲ್ಸ್, ಟ್ರಿಪಲ್ ಮಲ್ಟಿಸ್ಟೇಶನ್, ಡಬಲ್ ಸ್ಕಿ ಸ್ಟೆಪರ್, ಡಬಲ್ ಹೆಲ್ತ್ ವಾಕರ್, ಡಬಲ್ ಹಾರ್ಸ್ ರೈಡರ್, ಗಾರ್ಡನ್ ಸ್ವಿಂಗ್, ಸ್ಟಾಂಡಿಂಗ್ ಸೀಸಾ, ಎಲಿಫೆಂಟ್ ರೈಡರ್, ಪಪ್ಪಿ ಡಾಗ್ ರೈಡರ್, ಹಾರ್ಸ್ ರೈಡರ್ ಅಳವಡಿಸಲಾಗಿದೆ. ಬಾಲಿಯಿಂದ ಬಂದ ವಿನ್ಯಾಸಗಾರ ಇದನ್ನು ನಿರ್ಮಿಸುತ್ತಿದ್ದಾರೆ.
ತೋಳನಕೆರೆಯ 14 ಎಕರೆ ಪ್ರದೇಶವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ದೇಶದ ಯಾವ ನಗರದಲ್ಲೂ ಇಷ್ಟು ದೊಡ್ಡ ಪ್ರಮಾಣದ ನ್ಪೋರ್ಟ್ಸ್ ಗಾರ್ಡನ್ ನಿರ್ಮಾಣವಾಗಿಲ್ಲ. ಗುತ್ತಿಗೆದಾರರು ಐದು ವರ್ಷ ನಿರ್ವಹಣೆ ಮಾಡಲಿದ್ದಾರೆ. ಅವರೇ ಭದ್ರತೆ ನಿಯೋಜಿಸಲಿದ್ದಾರೆ. ಪಾಲಿಕೆ ಉಸ್ತುವಾರಿ ನೋಡಿಕೊಳ್ಳಲಿದೆ. ಇನ್ನು 15-20 ದಿವಸಗಳಲ್ಲಿ ಕೆರೆಯ ಸುತ್ತಲೂ 150-160 ಸ್ಟ್ರೀಟ್‌ಲೆçಟ್ ಡಿಸೈನರ್ ಪೋಲ್ ಅಳವಡಿಸಲಾಗುತ್ತದೆ. ಮುಂಜಾಗ್ರತೆಯಾಗಿ ಸುರಕ್ಷತೆ ದೃಷ್ಟಿಯಿಂದ 16 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.-ಬಸವರಾಜ,ಹು-ಧಾ ಸ್ಮಾರ್ಟ್ ಸಿಟಿ ಡಿಜಿಎಂ
ತೋಳನಕೆರೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ 2ರಿಂದ 80 ವರ್ಷದವರಿಗೆ ಅನುಕೂಲವಾಗುವಂತೆ ನ್ಪೋರ್ಟ್ಸ್ ಫೋಕಸ್ ಹೊಂದಿದ ನ್ಪೋರ್ಟ್ಸ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಇಂತಹ ನ್ಪೋರ್ಟ್ಸ್ ಗಾರ್ಡನ್ ಚೀನಾದಲ್ಲಿ ನೋಡಿದ್ದೆ. ಅದನ್ನು ಹು-ಧಾ ಅವಳಿ ನಗರದ ಜನರಿಗೂ ಏಕೆ ಒದಗಿಸಬಾರದೆಂದು ಯೋಚಿಸಿ ಇದನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಜನರ ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಗಾರ್ಡನ್ ಪೂರ್ಣಗೊಂಡ ಬಳಿಕ ತೋಳನಕೆರೆ ಪ್ರದೇಶವು ಪಿಕ್‌ನಿಕ್ ಸ್ಪಾಟ್ ಆಗಲಿದೆ.-ಅರವಿಂದ ಬೆಲ್ಲದ, ಶಾಸಕ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ
-ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rapper Badshah: ಬಾಲಿವುಡ್ ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.