ತೆರಿಗೆ ವೆಬ್ಸೈಟ್ಗೆ ತಾಂತ್ರಿಕ ತೊಂದರೆ : ಸರಿಪಡಿಸಲು ಇನ್ಫೋಸಿಸ್ಗೆ ಸೂಚನೆ
Team Udayavani, Jun 8, 2021, 7:49 PM IST
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಸೋಮವಾರ ಲೋಕಾರ್ಪಣೆಗೊಂಡ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್ಸೈಟ್ಗೆ ಆರಂಭದಲ್ಲಿಯೇ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ, ಟ್ವಿಟರ್ ಮೂಲಕ ವಿತ್ತ ಸಚಿವರಿಗೆ ದೂರುಗಳ ಸುರಿಮಳೆಯೇ ಸಲ್ಲಿಕೆಯಾಗಿದೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ವಿತ್ತ ಸಚಿವರು “ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇರುವ ಹೊಸ ವೆಬ್ಸೈಟ್ ಸೋಮವಾರ ಉದ್ಘಾಟನೆಯಾಗಿದೆ. ಅದರಲ್ಲಿ ತಾಂತ್ರಿಕ ತೊಂದರೆ ಇರುವ ಬಗ್ಗೆ ಹಲವರು ದೂರಿತ್ತಿದ್ದಾರೆ. ಹೀಗಾಗಿ, ಅದನ್ನು ಸಿದ್ಧಪಡಿಸಿದ ಇನ್ಫೋಸಿಸ್ ಮತ್ತು ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅದನ್ನು ಪರಿಶೀಲಿಸಿ, ಸರಿಪಡಿಸುವರು ಎಂಬ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದಾರೆ. ತೆರಿಗೆ ಪಾವತಿದಾರರಿಗೆ ಹೆಚ್ಚಿನ ಹೊರೆಯಾಗಬಾರದು ಎನ್ನುವುದೇ ಸರ್ಕಾರದ ಉದ್ದೇಶ ಎಂದಿದ್ದಾರೆ.
ಇದನ್ನೂ ಓದಿ :ಸಂಪೂರ್ಣ ಲಾಕ್ಡೌನ್ ಯಶಸ್ವಿ, ಪಾಸಿಟಿವಿಟಿ ದರ ಶೇ.10ಕ್ಕೆ ಇಳಿಕೆ : ಉಡುಪಿ ಜಿಲ್ಲಾಧಿಕಾರಿ
ಜತೆಗೆ ಸಂದೇಶವನ್ನು ಇನ್ಫೋಸಿಸ್ ಮತ್ತು ನಿಲೇಕಣಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಂದ ಹಾಗೆ ತೆರಿಗೆ ಇಲಾಖೆಯ ಹೊಸ ವೆಬ್ಸೈಟ್ ಸಿದ್ಧಗೊಳಿಸಿದ್ದು ಇನ್ಫೋಸಿಸ್. ಜಿಎಸ್ಟಿ ವೆಬ್ಸೈಟ್ ಅನ್ನು ಇನ್ಫೋಸಿಸ್ ಸಂಸ್ಥೆಯೇ ಸಿದ್ಧಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.