ತತ್ತ್ವಾಂಕುರ – 2021 : ಅಂತಾರಾಷ್ಟ್ರೀಯ ಆನ್ ಲೈನ್ ಸ್ಪರ್ಧೆಗಳ ಫಲಿತಾಂಶ ಪ್ರಕಟ
Team Udayavani, Jun 8, 2021, 9:40 PM IST
ಮಣಿಪಾಲ : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆ್ಯಂಡ್ ಸೈನ್ಸಸ್, ಮೇ 27, 28 ರಂದು ಎರಡು ದಿನಗಳ ವಿದ್ಯಾರ್ಥಿಗಳಿಗಾಗಿ ಅಂತಾರಾಷ್ಟ್ರೀಯ ಆನ್ ಲೈನ್ ಉತ್ಸವ ತತ್ತ್ವಾಂಕುರವನ್ನು ಆಯೋಜಿಸಿತು.
ತತ್ತ್ವಾಂಕುರ ಎಂಬುದು ಹೊಸ ವಿಚಾರಗಳು, ಹೊಸ ಅರ್ಥ ಮತ್ತು ಸೃಜನಶೀಲತೆಯ ಹುಡುಕಾಟದ ಒಂದು ಪ್ರಯತ್ನ. ಇದು ಸಾಮಾನ್ಯ ಅರ್ಥದ ವಿದ್ಯಾರ್ಥಿಗಳ ಉತ್ಸವವಾಗದೆ, ಇವತ್ತಿನ ಬಿಕ್ಕಟ್ಟಿನ ಸಂದರ್ಭವನ್ನು ಮೀರಲು, ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಉದ್ದೀಪಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ.
ದೇಶಾದ್ಯಂತ ಇಪ್ಪತ್ತೈದು ವಿವಿಧ ಕಾಲೇಜುಗಳು ಮತ್ತು ಸುಮಾರು 160 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಲೆ, ಬರವಣಿಗೆ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಮಾಧ್ಯಮಾ (ಮೋಕ್ ಪ್ರೆಸ್), ಗೀತಾಂಜಲಿ (ಕವನ ವಾಚನ), ಅಂತರ್ವಾಣಿ (ಆಡಿಯೋ ಪಿಎಸ್‌ಎ), ಕೃತಿ-ಸಿ (ಚಲನಚಿತ್ರ ವಿಮರ್ಶೆ) ಪರ್ಯಾವರಣ (ಪರಿಸರ-ಬಿಕ್ಕಟ್ಟು ನಿರ್ವಹಣೆ ) ಸೇರಿದಂತೆ ವಿವಿಧ ಆನ್ ಲೈನ್ ಸ್ಪರ್ಧೆಗಳು ನಡೆದವು.
ತತ್ತ್ವಾಂಕುರ -2021 ರ ವಿಜೇತರ ಪಟ್ಟಿ ಇಂತಿದೆ:
ಗೀತಾಂಜಲಿ (ಕವನ ವಾಚನ)
ಪ್ರಥಮ ಬಹುಮಾನ-ಲಿಯೋನಾ, ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು.
ಎರಡನೇ ಬಹುಮಾನ- ಸೂರ‍್ಣೋ ಭಟ್ಟಾಚರ‍್ಯ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನ್ನೈ.
ಮಾಧ್ಯಮಾ (ಮೋಕ್ ಪ್ರೆಸ್)
ಪ್ರಥಮ ಬಹುಮಾನ- ಶಿಹಾಸ್, ಪರ‍್ಣಪ್ರಜ್ಞ ಕಾಲೇಜು, ಉಡುಪಿ.
ಎರಡನೇ ಬಹುಮಾನ- ಆಂಡ್ರಿಯಾ ಮಿಥೈ, ಮೌಂಟ್ ಕರ‍್ಮೆಲ್ ಕಾಲೇಜು ಬೆಂಗಳೂರು ಮತ್ತು
ಶಿಲ್ಪಾ ಸಿಆರ್, ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.
ಅಂತರ್ವಾಣಿ- (ಆಡಿಯೋ ಪಿಎಸ್ಎ)
ಪ್ರಥಮ ಬಹುಮಾನ- ಮೈತ್ರೇಯಿ ಬಹುಗುಣ ಮತ್ತು ಸ್ವರ್ಣಾಲಿ ಮುಖರ್ಜಿ, ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರು.
ದ್ವಿತೀಯ ಬಹುಮಾನ- ನವಶ್ರೀ ಟಿ, ಸೇಂಟ್ ಆಗ್ನೆಸ್ ಕಾಲೇಜು ಮಂಗಳೂರು.
ಕೃತಿ-ಸಿ (ಚಲನಚಿತ್ರ ವಿಮರ್ಶೆ)
ಪ್ರಥಮ ಬಹುಮಾನ- ಅಪರ್ಣಾ ಮನೋಜ್, ಎಂ.ಸಿ.ಎಚ್ ಮಣಿಪಾಲ್.
ದ್ವಿತೀಯ ಬಹುಮಾನ- ಮನಸ್ ಗೋಯೆಲ್, ಕೆಎಂಸಿ ಮಂಗಳೂರು.
ಪರ್ಯಾವರಣ – (ಪರಿಸರ ಬಿಕ್ಕಟ್ಟು ನಿರ್ವಹಣೆ)
ಪ್ರಥಮ ಬಹುಮಾನ- ಸ್ಮೃತಿ ಮತ್ತು ಸ್ವೆತ್ಯ, ಕ್ರಿಯಾ ವಿಶ್ವವಿದ್ಯಾಲಯ, ಆಂಧ್ರಪ್ರದೇಶ.
ಎರಡನೇ ಬಹುಮಾನ- ಪ್ರೇರಣಾ, ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.