ನಗರಸಭೆ ಚುನಾವಣೆಗೆ ಮೀಸಲಾತಿ ಪ್ರಕಟ
Team Udayavani, Jun 9, 2021, 9:47 AM IST
ನೆಲಮಂಗಲ: ತಾಲೂಕಿನಲ್ಲಿ ಜಿಪಂ ಸದಸ್ಯರ ಅಧಿಕಾರ ಅವಧಿ ಮುಗಿದು ಮತ ಕ್ಷೇತ್ರಗಳ ವಿಂಗಡನೆಯಾದ ಬೆನ್ನಲ್ಲೆ ನಗರಸಭೆ ಚುನಾವಣೆ ವಾರ್ಡ್ ವಿಂಗಡಣೆ ಕಾರ್ಯ ಮುಗಿಸಿದ್ದ ಚುನಾವಣಾ ಆಯೋಗ, ಕ್ಷೇತ್ರಗಳ ಮೀಸಲಾತಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ, 7 ದಿನದೊಳಗಾಗಿ ಯಾವುದಾದರೂ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಕಾರಣ ಸಹಿತ ಸೂಕ್ತ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಬೆಂ.ಗ್ರಾ ಡೀಸಿಗೆ ಸಲ್ಲಿಸಬೇಕೆಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.ಪ್ರಸಾದ್ ಜೂ.8ರ ರಾಜ್ಯಪತ್ರದಲ್ಲಿ ತಿಳಿಸಿದ್ದಾರೆ.
ಈ ಮೊದಲಿದ್ದ ನೆಲಮಂಗಲ ನಗರ ಸಭೆಗೆ ಅರಿಶಿನಕುಂಟೆ, ವಾಜರಹಳ್ಳಿ, ಬಸವನಹಳ್ಳಿ, ವಿಶ್ವೇಶ್ವಪುರ ಗ್ರಾಪಂಗಳನ್ನು ವಿಲೀನಗೊಳಿಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ನೂತನ ನಗರಸಭೆಯ 31ವಾರ್ಡ್‌ಗಳ ಮೀಸಲಾತಿ ಘೋಷಣೆಯಾಗಿದೆ, ವಾರ್ಡ್ 1 ಅರಿಶಿನಕುಂಟೆ- ಹಿಂ. ವರ್ಗ(ಎ) ಮಹಿಳೆ ಸ್ಥಾನಕ್ಕೆ ಮೀಸಲಾಗಿದ್ದರೆ, ವಾರ್ಡ್ 2 ನೆಲಮಂಗಲ ನ್ಯೂಟೌನ್- ಸಾಮಾನ್ಯ ವರ್ಗ, ವಾರ್ಡ್ 3 ವಿನಾಯಕನಗರ- ಹಿಂ. ವರ್ಗ (ಬಿ)ಮಹಿಳೆ, ವಾರ್ಡ್ 4 ವೀವರ್ಸ್ ಕಾಲೋನಿ – ಸಾಮಾನ್ಯ ವರ್ಗ, ವಾರ್ಡ್ 5 ಚನ್ನಪ್ಪ ಬಡಾವಣೆ- ಹಿಂ.ವರ್ಗ (ಎ), ವಾರ್ಡ್ 6 ವಾಜರಹಳ್ಳಿ- ಪ.ಜಾ, ವಾರ್ಡ್ 7 ಮಾರುತಿನಗರ- ಸಾ. ಮಹಿಳೆ, ವಾರ್ಡ್ 8 ಗಜಾರಿಯಾ ಲೇಔಟ್- ಹಿಂ.ವರ್ಗ (ಬಿ), ವಾರ್ಡ್ 9 ಸುಭಾಷ್ ನಗರ- ಹಿಂ.ವರ್ಗ (ಎ) ಮಹಿಳೆ, ವಾರ್ಡ್ 10 ಗಣೇಶ್‌ರಾವ್ ಲೇಔಟ್- ಸಾಮಾನ್ಯ, ವಾರ್ಡ್ 11 ವಿಜಯನಗರ- ಸಾ. ವರ್ಗ, ವಾರ್ಡ್ 12 ಗೋವಿಂದಪ್ಪ ಲೇಔಟ್- ಸಾ. ಮಹಿಳೆ, ವಾರ್ಡ್ 13 ಪರಮಣ್ಣ ಲೇಔಟ್- ಹಿಂ.ವರ್ಗ (ಎ), ವಾರ್ಡ್ 14 ಹಿಪ್ಪೇಆಂಜನೇಯ ಸ್ವಾಮಿ ಲೇಔಟ್ – ಹಿಂ.ವರ್ಗ (ಎ) ಮಹಿಳೆ, ವಾರ್ಡ್ 15 ಚನ್ನಕೇಶವಗುಡಿ ಬೀದಿ- ಸಾ. ವರ್ಗ, ವಾರ್ಡ್ 16 ದೇವಾಂಗಬೀದಿ- ಹಿಂ. ವರ್ಗ (ಎ), ವಾರ್ಡ್ 17 ಇಂದಿರಾ ನಗರ – ಸಾ. ವರ್ಗ, ವಾರ್ಡ್ 18 ರಾಯನ್‌ನಗರ – ಪ.ಜಾ ಮಹಿಳೆ, ವಾರ್ಡ್ 19 ಜಯನಗರ- ಸಾ. ಮಹಿಳೆ,ವಾರ್ಡ್ 20 ಕೋಟೆಬೀದಿ- ಸಾ. ವರ್ಗ, ವಾರ್ಡ್ 21 ಬಸವನಗುಡಿ- ಸಾ. ಮಹಿಳೆ, ವಾರ್ಡ್ 22 ಬಸವನಹಳ್ಳಿ- ಪ.ಪಂ, ವಾರ್ಡ್ 23 ಲೋಹಿತ್‌ನಗರ – ಪ.ಜಾ, ವಾರ್ಡ್ 24 ವಿಶ್ವೇಶ್ವರಪುರ – ಹಿಂ.ವರ್ಗ (ಎ), ವಾರ್ಡ್ 25 ಕೆಂಪಲಿಂಗನಹಳ್ಳಿ – ಪ.ಜಾ, ವಾರ್ಡ್ 26 ದಾದಾಪೀರ್ ಲೇಔಟ್- ಸಾಮಾನ್ಯ,ವಾರ್ಡ್ 27 ಜಕ್ಕಸಂದ್ರ- ಸಾ. ಮಹಿಳೆ, ವಾರ್ಡ್ 28 ಪ.ಜಾ ಮಹಿಳೆ, ವಾರ್ಡ್ 29 ದಾನೋಜಿಪಾಳ್ಯ- ಸಾ. ಮಹಿಳೆ, ವಾರ್ಡ್ 30 ಆದರ್ಶನಗರ- ಸಾ. ಮಹಿಳೆ, ವಾರ್ಡ್ 31 ಬಸವೇಶ್ವರನಗರ- ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಿರಿಸಲಾಗಿದೆ.
ಕಾನೂನು ಹೋರಾಟ: ಕಳೆದ ಪುರಸಭೆ ಚುನಾವಣೆ ಯಲ್ಲಿ ಗೆಲುವು ಸಾಧಿಸಿ ಸದಸ್ಯರಾಗಿ ಆಯ್ಕೆದ ನೂತನ ಸದಸ್ಯರು ನಗರಸಭೆ ಘೋಷಣೆಯಾದ ಹಿನ್ನಲೆಯಲ್ಲಿ ಅಧಿಕೃತವಾಗಿ ಪುರಸಭೆ ಪ್ರವೇಶಿಸಲಾಗದೆ, ಗ್ರಾಪಂ ಮುಖಂಡರು ಮತ್ತು ಪುರಸಭೆ ಸದಸ್ಯರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ರಾಜ್ಯ ಹೈಕೋರ್ಟ್ ಗ್ರಾಪಂ ಮುಖಂಡರ ಪರವಾಗಿ ಚುನಾವಣೆಗೆ ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪುರಸಭೆ ಸದಸ್ಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕಾನೂನು ಹಗ್ಗಜಗ್ಗಾಟದಲ್ಲಿದ್ದಾರೆ. ಈ ಮಧ್ಯೆ ಮೀಸಲಾತಿ ಪ್ರಕಟಗೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಲಾಕ್‌ಡೌನ್ ನಡುವೆಯೂ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದು ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಲ್ಲೆಡೆಯೂ ಮೀಸಲಾತಿಯ ಚರ್ಚೆ ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.