ಒಲಿಂಪಿಕ್ಸ್ : ಭಾರತ ತಂಡಕ್ಕೆ ಇಬ್ಬರು ಧ್ವಜಧಾರಿಗಳು?
Olympics: Two flags for Indian team?
Team Udayavani, Jun 9, 2021, 11:25 PM IST
ಹೊಸದಿಲ್ಲಿ : ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡದ “ಧ್ವಜಧಾರಿ ಗೌರವ’ ಇಬ್ಬರಿಗೆ ಲಭಿಸುವ ಸಾಧ್ಯತೆ ಇದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮುಖ್ಯಸ್ಥ ನರೀಂದರ್ ಬಾತ್ರಾ ತಿಳಿಸಿದ್ದಾರೆ.
“ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಒಬ್ಬರಿಗೆ ರಾಷ್ಟ್ರೀಯ ಧ್ವಜ ಹಿಡಿದು ಉದ್ಘಾಟನಾ ಕಾರ್ಯಕ್ರಮದಲ್ಲಿ ತಂಡವನ್ನು ಮುನ್ನಡೆಸುವ ಗೌರವ ಸಿಗಬಹುದು. ಇದನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಈ ರೀತಿ ಒಂದು ಯೋಚನೆಯಂತೂ ಇದೆ. ಲಿಂಗ ತಾರತಮ್ಯವನ್ನು ಪರಿಹರಿಸಲು ಇದೊಂದು ಸೂಕ್ತ ನಡೆ ಎಂಬ ಚಿಂತನೆ ನಮ್ಮದು’ ಎಂದು ಬಾತ್ರಾ ತಿಳಿಸಿದ್ದಾರೆ.
ನೂರಕ್ಕೂ ಹೆಚ್ಚು ಆ್ಯತ್ಲೀಟ್ಸ್
ಜುಲೈ 23ರಂದು ಟೋಕಿಯೊದಲ್ಲಿ ಆರಂಭವಾಗುವ ಈ ಒಲಿಂಪಿಕ್ಸ್ ಕೂಟದಲ್ಲಿ 100ಕ್ಕೂ ಅಧಿಕ ಆ್ಯತ್ಲೀಟ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಧ್ವಜ ಗೌರವ ಯಾರಿಗೆ ಸಿಗಲಿದೆ ಎಂಬುದೊಂದು ಕುತೂಹಲ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ತಾರೆ ಅಭಿನವ್ ಬಿಂದ್ರಾ ಧ್ವಜಧಾರಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.