ತೆರಿಗೆ ಪಾವತಿಸದ ಸಿರಿವಂತರು; ಪಟ್ಟಿಯಲ್ಲಿದ್ದಾರೆ ಬೆಜೋಸ್, ಮಸ್ಕ್; ದುಡ್ಡಿಲ್ಲ ಎಂದ ಕಂಗನಾ
Team Udayavani, Jun 10, 2021, 8:28 AM IST
ನ್ಯೂಯಾರ್ಕ್: ಶ್ರೀಮಂತರು ಹೆಚ್ಚಿನ ಪ್ರಮಾಣದ ತೆರಿಗೆ ಪಾವತಿ ಮಾಡುವುದೇ ಇಲ್ಲ ಎಂಬ ಆರೋಪಗಳಿವೆ. ಅದಕ್ಕೆ ಪುಷ್ಟೀಕರಣವೋ ಎಂಬಂತೆ ಅಮೆಜಾನ್ ಸಿಇಒ ಜೆಫ್ ಬೆಜೋಸ್, ಟೆಸ್ಲಾ ಸಂಸ್ಥೆ ಮುಖ್ಯಸ್ಥ ಇಲಾನ್ ಮಸ್ಕ್ ಸೇರಿದಂತೆ 23 ಮಂದಿ ಸಿರಿವಂತ ಅಮೆರಿಕ ಪ್ರಜೆಗಳು 2007 ಮತ್ತು 2018ರ ನಡುವೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನೇ ಪಾವತಿ ಮಾಡಿಲ್ಲ. ಈ ಬಗ್ಗೆ ತನಿಖಾ ಪತ್ರಿಕೋದ್ಯಮಕ್ಕೆಹೆಸರಾಗಿರುವ “ಪ್ರೊಪಬ್ಲಿಕಾ’ ವರದಿ ಮಾಡಿದೆ.
ಅಮೆರಿಕದ ತೆರಿಗೆ ಇಲಾಖೆಯ ಆಂತರಿಕ ಕಂದಾಯ ಸೇವೆ (ಐಆರ್ ಎಸ್) ವರದಿ ಗಮನಿಸಿದ ಬಳಿಕ ಈ ಅಂಶ ಪ್ರಕಟಿಸಲಾಗಿದೆ. ಅಮೆಜಾನ್ ಸಿಇಒ ಜೆಫ್ ಬೆಜೋಸ್ 2007 ಮತ್ತು 2011ರ ನಡುವೆ ಅವರು ತೆರಿಗೆ ಪಾವತಿ ಮಾಡಿಲ್ಲ. ಟೆಸ್ಲಾ ಇಂಕ್‌ನ ಸಿಇಒ ಇಲಾನ್ ಮಸ್ಕ್ 2018ರಲ್ಲಿ, ಬ್ಲೂಮ್ ಬರ್ಗ್ ಎಲ್‌ಪಿಯ ಸಂಸ್ಥಾಪಕ ಮೈಕೆಲ್ ಬ್ಲೂಮ್‌ಬರ್ಗ್ ಕನಿಷ್ಠ ಮೊತ್ತದ ತೆರಿಗೆ ಪಾವತಿ ಮಾಡಿದ್ದಾರೆ.
ಇದನ್ನೂ ಓದಿ:ಮುಂಬೈ: ಧರೆಗುರುಳಿದ ಬಹುಮಹಡಿ ಕಟ್ಟಡ; 11 ಮಂದಿ ಸಾವು, ಹಲವರಿಗೆ ಗಂಭೀರ ಗಾಯ
ತೆರಿಗೆ ಪಾವತಿ ಮಾಡದವರನ್ನು ಸಂಪರ್ಕಿಸಿದಾಗ ವಾರೆನ್ ಬಫೆಟ್, ಮೈಕೆಲ್ ಬ್ಲೂಮ್‌ಬರ್ಗ್ ಮತ್ತು ಕಾರ್ಲ್ ಇಚಾನ್ ತೆರಿಗೆ ಬಾಕಿ ಪಾವತಿ ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾರೆಂದು ಪ್ರೊ ಪಬ್ಲಿಕಾ ಹೇಳಿಕೊಂಡಿದೆ.
ತೆರಿಗೆ ಪಾವತಿಗೆ ದುಡ್ಡಿಲ್ಲ
“ಈ ವರ್ಷ ಸಿನೆಮಾಗಳಲ್ಲಿ ನಟಿಸಲಾಗಿಲ್ಲ. ಹೀಗಾಗಿ ತೆರಿಗೆ ಪಾವತಿ ಮಾಡಲು ದುಡ್ಡು ಇಲ್ಲ’ ಹೀಗೆಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಹೇಳಿಕೊಂಡಿದ್ದಾರೆ. “ನಾನು ಅತ್ಯಂತ ಹೆಚ್ಚಿನ ಸ್ತರದ ತೆರಿಗೆ ಪಾವತಿ ವ್ಯಾಪ್ತಿ ಯಲ್ಲಿದ್ದರೂ ಆ ಮೊತ್ತದ ಪೈಕಿ ಹೆಚ್ಚಿನ ಭಾಗವನ್ನು ಪಾವತಿ ಮಾಡಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಸಿನೆಮಾ ಇರಲಿಲ್ಲ. ಹೀಗಾಗಿ, ತೆರಿಗೆ ಪಾವತಿ ಮಾಡಲು ಅಸಾಧ್ಯವಾಗಿದೆ. ಅದಕ್ಕೆ ಸರಕಾರ ಬಡ್ಡಿ ವಿಧಿಸಲಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.