ಬಿಜೆಪಿ ವಿರುದ್ಧ ಎಲ್ ಡಿ ಎಫ್ ಷಡ್ಯಂತ್ರ : ಕುಂಬ್ಡಾಜೆ ಪಂಚಾಯಿತಿಯಲ್ಲಿ ಪ್ರತಿಭಟನೆ
Team Udayavani, Jun 10, 2021, 3:56 PM IST
ಬದಿಯಡ್ಕ : ಕೇರಳದ ಎಲ್ ಡಿ ಎಫ್ ಸರಕಾರವೂ ಸುಳ್ಳು ಆರೋಪವನ್ನು ಹೊರಿಸಿ ಬಿಜೆಪಿಯ ಮೇಲೆ ನಡೆಸುವ ಷಡ್ಯಂತ್ರವನ್ನು ಪ್ರತಿಭಟಿಸಿ ಬಿಜೆಪಿ ಕುಂಬ್ಡಾಜೆ ಪಂಚಾಯತಿನಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಿದೆ. ಕುಂಬ್ಡಾಜೆ ಪಂಚಾಯತಿಗೊಳಪಟ್ಟ ಪ್ರಧಾನ ಕೇಂದ್ರಗಳಲ್ಲಿ ಒಟ್ಟು 21 ಪ್ರತಿಭಟನಾ ಸಭೆಗಳನ್ನು ನಡೆಸಿ ಸರಕಾರದ ಅನೀತಿಯನ್ನು ಖಂಡಿಸಲಾಯಿತು.
ರಾಜ್ಯ ಸರಕಾರವೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸುತ್ತಿದೆ. ಕಳೆದ ದಿನಗಳಲ್ಲಿ ಎಲ್ ಡಿಎಫ್ ಸರಕಾರದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಬೆಳಕಿಗೆ ತಂದು ಜನರ ಮುಂದಿಟ್ಟ ಬಿಜೆಪಿ ಇದೀಗ ಅವರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದೆ. ಬಿಜೆಪಿಯನ್ನು ತೇಜೋವಧೇ ಮಾಡುವ ಮೂಲಕ ಕಾರ್ಯಕರ್ತರ ಹಾಗೂ ನೇತಾರರ ಮನೋಸ್ಥೈರ್ಯವನ್ನು ಕುಗ್ಗಿಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹದೊಂದಿಗೆ ಹೊರಟಿರುವ ಎಲ್ ಡಿ ಎಫ್ ನ ಈ ನೀತಿ ವ್ಯಾಮೋಹ ಮಾತ್ರವೆಂದು ಸಭೆಗಳಲ್ಲಿ ಮುನ್ನೆಚ್ಚರಿಕೆಯನ್ನು ನೀಡಲಾಯಿತು.
ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕು ಎಂದೂ ಸಭೆಗಳಲ್ಲಿ ಆಗ್ರಹಿಸಲಾಯಿತು. ಈ ರೀತಿಯ ಅನೀತಿಯನ್ನು ನಡೆಸಿ ರಾಜಕೀಯ ಬೆಳೆಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹವನ್ನು ಇಂದೇ ಬಿಟ್ಟುಬಿಡಬೇಕೆಂದೂ ಸೂಚಿಸಲಾಯಿತು.
ಪಂಚಾಯಾತಿನ ವಿವಿಧ ಭಾಗಗಳಲ್ಲಾಗಿ ನಡೆದ ಕಾರ್ಯಕ್ರಮಗಳಲ್ಲಿ ನೇತಾರರಾದ ಎಂ ಸಂಜೀವ ಶೆಟ್ಟಿ, ಶೈಲಜಾ ಭಟ್, ರವೀಂದ್ರ ರೈ ಗೋಸಾಡ, ಶಶೀಧರ ತೆಕ್ಕೇಮೂಲೆ,ಸುಂದರ ಮವ್ವಾರು, ಹರೀಶ್ ಗೋಸಾಡ, ಕೃಷ್ಣ ಶರ್ಮಾ, ರಾಜೇಶ್ ಶೆಟ್ಟಿ ಬಲೆಕ್ಕಳ,ರಾಜೇಶ್ ಕೆ ಪೊಡಿಪಳ್ಳ, ಸುನೀತಾ ಜೆ ರೈ, ಯಶೋದಾ ಎನ್, ಮೀನಾಕ್ಷಿ, ,ರಘು ಮಾಚಾವು, ವಾಸುದೇವ ಭಟ್, ಹರೀಶ್ ಕುಣಿಕುಳ್ಳಾಯ ಮೊದಲಾದವರು ಭಾಗವಹಿಸಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.