ನಿಮಿಷಕ್ಕೆ 500 ಲೀ.ಆಕ್ಸಿಜನ್ ಉತ್ಪಾದಿಸುವ ಜನರೇಟರ್
Team Udayavani, Jun 10, 2021, 6:22 PM IST
ಮೈಸೂರು: ನಗರದ ಕೆಆರ್ಎಸ್ ರಸ್ತೆಯಲ್ಲಿರುವಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ500 ಎಲ್ಪಿಎಂ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಅಳವಡಿಕೆ ಕಾಮಗಾರಿಯನ್ನು ಶಾಸಕ ಎಲ್. ನಾಗೇಂದ್ರ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಮೆಡಿಕಲ್ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್,ಕಾನ್ಪುರ ಐಐಟಿ ಕಾಲೇಜಿಗೆ ಆಕ್ಸಿಜನ್ ಜನರೇಟರ್ನೀಡುವಂತೆ ಕೇಳಿಕೊಂಡ ಹಿನ್ನೆಲೆ ಉಚಿತವಾಗಿಪ್ರತಿನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆಮಾಡುವ ಒಂದೂವರೆ ಕೋಟಿ ರೂ.ಬೆಲೆಬಾಳುವ ಜನರೇಟರನ್ನು ನೀಡಿದ್ದಾರೆ.
ಡೀನ್ಅವರು ಮಾಡಿರುವುದು ಬಹಳ ಒಳ್ಳೆಯ ಕೆಲಸ.ಡೀನ್ ಅವರಿಗೂ ಐಐಟಿ ಕಾಲೇಜಿವರಿಗೂಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಆಕ್ಸಿಜನ್ ಇಲ್ಲದೆಯೂ 50 ಜನರನ್ನು ಜನರೇಟರ್ಸಹಾಯದಿಂದ ನೋಡಿಕೊಳ್ಳಬಹುದು ಎಂದರು.
ಇದೇ ವೇಳೆ ಮೇಯರ್ ಚುನಾವಣೆ ಕುರಿತಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ನಿರ್ಧಾರ ಏನಿರತ್ತೆಅದಕ್ಕೆ ತಕ್ಕಂತೆ ನಾವು ನಡೆಯಬೇಕು. ನನ್ನವೈಯುಕ್ತಿಕ ನಿರ್ಧಾರ ಏನಿಲ್ಲ ಎಂದುಸ್ಪಷ್ಟಪಡಿಸಿದರು.ಈ ವೇಳೆ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ,ಡೀನ್ ಡಾ. ನಂಜರಾಜ್, ಸೂಪರ್ ಸ್ಪೆಷಾಲಿಟಿಆಸ್ಪತ್ರೆಯ ಆರ್ಎಂಒ ಡಾ.ಮೋಹನ್,ಎಂಜಿನಿಯರ್ ಶ್ರೀನಾಥ್, ಕುಮಾರ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.