![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 10, 2021, 6:54 PM IST
ಕೋಲಾರ: ಕೃಷಿ ಭೂಮಿಯ ಫಲವತ್ತತೆಗಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ರೈತನಿಗೆ 72 ಸಾವಿರದಂಡ ಹಾಕಿ ಅನ್ನದಾತರೊಬ್ಬರು ಹೃದಯಾಘಾತದಿಂದಸಾವನ್ನಪ್ಪಲು ಕಾರಣರಾದ ಕೆಜಿಎಫ್ ತಹಶೀಲ್ದಾರ್‌ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಜಿಲ್ಲಾ ಧಿಕಾರಿಗಳನ್ನು ಆಗ್ರಹಿಸಿದರು.
ಘಟನೆ ಹಿನ್ನೆಲೆಯಲ್ಲಿ ನೊಂದ ರೈತ ಕುಟುಂಬದಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿಅವರನ್ನು ಭೇಟಿಯಾದ ರೂಪಕಲಾ ಶಶಿಧರ್, ಕಳೆದ ಒಂದು ವಾರದ ಹಿಂದೆ ಕೆಜಿಎಫ್ ತಾಲೂಕಿನಚಕ್ರಬಂಡೆ ಗ್ರಾಮದ ದೊಡ್ಡ ಕೆರೆಯಲ್ಲಿ ಅದೇ ಗ್ರಾಮದಚಂಗಾರೆಡ್ಡಿ ಎಂಬ ಮಣ್ಣು ತೆಗೆಯುತ್ತಿದ್ದರು. ಈ ವೇಳೆಸ್ಥಳಕ್ಕೆ ತೆರಳಿದ್ದ ತಹಶೀಲ್ದಾರ್ ಸುಜಾತ 2 ಟ್ರಾಕ್ಟರ್‌ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು, ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿಯೊಬ್ಬರ ಮೂಲಕ 11 ಸಾವಿರ ರೂ.ಗಳನ್ನು ತಹಶೀಲ್ದಾರ್‌ಗೆ ಲಂಚವಾಗಿ ನೀಡಲಾಗಿತ್ತು. ಆದರೂ ಗಣಿಮತ್ತು ಭೂವಿಜ್ಞಾನ ಇಲಾಖೆಯಿಂದ 72 ಸಾವಿರ ರೂ.ದಂಡ ಹಾಕಲಾಗಿದ್ದು, ದಂಡದ ಮೊತ್ತ ಕೇಳಿ ರೈತಚಂಗಾರೆಡ್ಡಿ ಹೃದಯಾಘಾತದಿಂದ ಮೃತಪಟ್ಟಿದ್ದರು.ಬಳಿಕ ಚಂಗಾರೆಡ್ಡಿ ಭಾವಮೈದ ಅಶೋಕ್‌ರೆಡ್ಡಿಮೀ. ಬಡ್ಡಿಗೆ ಹಣ ಪಡೆದು ದಂಡ ಕಟ್ಟಿ ಗಾಡಿಗಳನ್ನು ಬಿಡಿಸಿಕೊಂಡಿದ್ದಾರೆ.
ರೈತನ ಸಾವಿಗೆ ಕಾರಣವಾಗಿರುವತಹಶೀಲ್ದಾರ್ ಸುಜಾತ ವಿರುದ್ಧ ಕ್ರಮಕೈಗೊಂಡು,ಪಾವತಿಸಿರುವ ದಂಡವನ್ನು ಮಾನವೀಯತೆಯಿಂದವಾಪಸ್ ಕೊಡಿಸಬೇಕೆಂದು ಶಾಸಕಿ ಮತ್ತು ರೈತನ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಕೆರೆಯಲ್ಲಿಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆದುಕೊಳ್ಳುವಸಂಬಂಧ ಮಾಹಿತಿ ಇಲ್ಲದೆ ಅವರು ಕೃಷಿ ಜಮೀನುಫಲವತ್ತತೆಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು.ಆಗ ತಹಶೀಲ್ದಾರ್ ಅವರು ದಾಳಿ ನಡೆಸಿ, ವಾಸ್ತವಾಂಶತಿಳಿಯದೆ ಈ ರೀತಿ ತೊಂದರೆಯನ್ನುಂಟುಮಾಡಿದ್ದಾರೆ.ತಹಶೀಲ್ದಾರ್ ವರ್ತನೆಯಿಂದ ರೈತನ ಕುಟುಂಬಕ್ಕೆತೊಂದರೆಯಾಗಿದ್ದು, ಮುಂದೆ ಇಂತಹ ಘಟನೆಗಳುಮರುಕಳಿಸದಂತೆ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.