ಆರೋಗ್ಯ ಸುಧಾರಣೆಗೆ ಸರ್ಕಾರ ಜಾಗೃತರಾಗಲಿ
Team Udayavani, Jun 11, 2021, 5:14 PM IST
ಮಾಗಡಿ: ರಾಜ್ಯ ಸರ್ಕಾರ ಆರೋಗ್ಯ ಸುಧಾರಣೆಗೆ ಜಾಗೃತರಾಗಬೇಕಿದೆ ಎಂದು ಮಾಜಿಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಆಗಲಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ,ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿ ಅಭಿನಂದಿಸಿ ಮಾತನಾಡಿ, ಆರೋಗ್ಯತಜ್ಞರು ಮಾಹಿತಿ ನೀಡಿದ್ದರೂ ಕೊರೊನಾಎರಡನೇ ಅಲೆ ತಡೆಗೆ ವಿಫಲವಾದ ರಾಜ್ಯಸರ್ಕಾರ, ಮೂರನೇ ಅಲೆ ಬಗ್ಗೆ ಮುನ್ನೆಚ್ಚರಿಕೆವಹಿಸಬೇಕು. ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಸಿಗದೆ ಬಡಜನರು ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚುಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಚಿಕಿತ್ಸೆಪಡೆಯುವ ಮಕ್ಕಳ ಜೊತೆ ಪೋಷಕರುಕೋವಿಡ್ ಕೇರ್ ಕೇಂದ್ರದಲ್ಲಿಇರಬೇಕಾಗುತ್ತದೆ. ಆದ್ದರಿಂದ 8ನೇತರಗತಿವರೆಗಿನ ಮಕ್ಕಳ ಪೋಷಕರಿಗೆ ಲಸಿಕೆನೀಡಬೇಕು. ಇಂತಹ ಸಮಯದಲ್ಲಿಬಡಜನರಿಗೆ ನೆರವು ನೀಡಬೇಕು ಎಂದುಸಲಹೆ ನೀಡಿದರು.
ಜುಟ್ಟನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷಜೆ.ಪಿ ಚಂದ್ರೇಗೌಡ ಮಾತನಾಡಿದರು.ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ,ಜಿಪಂ ಮಾಜಿ ಸದಸ್ಯರಾದ ಎಂ.ಕೆಧನಂಜಯ್ಯ, ವಿಜಯ್‌ಕುಮಾರ್, ಡಾ.ರಾಮಚಂದ್ರಯ್ಯ, ತಾಪಂ ಸದಸ್ಯೆ ಸುಮಾರಮೇಶ್, ಕೋರಮಂಗಲ ಶ್ರೀನಿವಾಸ್,ತೋಟದಮನೆ ಗಿರೀಶ್, ತಾಪಂ ಮಾಜಿಅಧ್ಯಕ್ಷ ಕಾಂತರಾಜು, ಸೀಗೇಕುಪ್ಪೆಶಿವಲಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷಕೆ.ಎನ್ ಗಂಗರಾಜು, ಸಿ.ಎಂ ಮಾರೇಗೌಡ,ಹರೀಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.