ಚಿಕ್ಕಬಳ್ಳಾಪುರ: ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು
Team Udayavani, Jun 11, 2021, 7:10 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಪೂರ್ವಮಳೆ ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿದ್ದು, ರೈತರುಜಮೀನು ಹದ ಮಾಡಿಕೊಂಡು ಈಗಾಗಲೇ ತೊಗರಿ,ನೆಲಗಡಲೆ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ತಿಂಗಳಾಂತ್ಯದೊಳಗೆ ರಾಗಿ, ಮುಸುಕಿನ ಜೋಳ ಬಿತ್ತನೆಕ್ಕೂ ಸಿದ್ಧತೆನಡೆದಿದೆ.ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ 130.7 ಮಿ.ಮೀ. ಮಳೆಆಗಬೇಕಿತ್ತು. ಆದರೆ, ಈ ಬಾರಿ ಹೆಚ್ಚು ಅಂದರೆ 245.5.ಮಿ.ಮೀ. ಆಗಿದೆ. ಇದು ಮುಂಗಾರು ಹಂಗಾಮಿನಶುಭ ಸೂಚನೆಯಾಗಿದೆ. ರೈತರಿಗೆ ಜೂನ್ ತಿಂಗಳುನೆಲಗಡಲೆ, ತೊಗರಿ ಬಿತ್ತನೆ ಮಾಡಲು ಸೂಕ್ತಸಮಯವಾಗಿದೆ. ಇದರಿಂದ ದ್ವಿದಳ ಧಾನ್ಯ, ಎಣ್ಣೆಕಾಳುಗಳ ವಿಸ್ತೀರ್ಣ, ಉತ್ಪಾದನೆ ಹೆಚ್ಚಿಸಲು ಸದಾವಕಾಶವಾಗಿದೆ.
ಶೇ.50 ದಾಸ್ತಾನು: ರಾಗಿ, ಮುಸುಕಿನ ಜೋಳ, ಅಲಸಂದಿ ಮತ್ತು ತೃಣಧಾನ್ಯಗಳ ಬಿತ್ತನೆ ಸಮಯವುಜೂನ್ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದ್ದು,ಇದಕ್ಕೆ ಪೂರಕವಾಗಿ ಬಿತ್ತನೆ ಬೀಜಗಳ ದಾಸ್ತಾನನ್ನುಕೃಷಿ ಇಲಾಖೆ ಅಧಿ ಕಾರಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50 ಈಗಾಗಲೇ ದಾಸ್ತಾನು ಮಾಡಿದ್ದಾರೆ.ಉಳಿದಿದ್ದನ್ನು ಹಂತವಾಗಿ ಪೂರೈಕೆ ಮಾಡಲು ಸಿದ್ಧತೆಮಾಡಿಕೊಳ್ಳಲಾಗಿದೆ. ಇಲಾಖೆಯಿಂದ ರೈತರಿಗೆಕೆ-ಕಿಸಾನ್ ತಂತ್ರಾಂಶದಿಂದ ಹಿಡುವಳಿಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ಪೂರೈಕೆಗೆ ಕ್ರಮ: ಹಿಂದಿನ ವರ್ಷ ಎಕರೆಗೆ ರಾಗಿ-5ಕೆ.ಜಿ., ಮುಸುಕಿನ ಜೋಳ-5 ಕೆ.ಜಿ. ನೀಡಲಾಗುತ್ತಿತ್ತು.ಈ ವರ್ಷದಿಂದ ರೈತರ ಬೇಡಿಕೆಯಂತೆ ಪ್ರತಿ ಎಕರೆಗೆರಾಗಿ 10 ಕೆ.ಜಿ., ಮುಸುಕಿನ ಜೋಳ 8 ಕೆ.ಜಿ., ನೆಲಗಡಲೆ 60 ಕೆ.ಜಿ. ಬಿತ್ತನೆ ಬೀಜ ವಿತರಿಸಲು ಕೃಷಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತುತ ಜಿಲ್ಲೆಗೆರಾಗಿ 1200 ಕ್ವಿಂಟಲ್, ನೆಲಗಡಲೆ 2400 ಕ್ವಿಂಟಲ್,ಮುಸುಕಿನ ಜೋಳ 1600 ಕ್ವಿಂಟಲ್ ಒಟ್ಟು 4760ಕ್ವಿಂಟಲ್ ಬಿತ್ತನೆ ಬೀಜಗಳ ಪೂರೈಕೆಗೆ ಕಾರ್ಯಕ್ರಮರೂಪಿಸಲಾಗಿದೆ.
ಹಂತವಾಗಿ ಪೂರೈಕೆ: ಅದರಲ್ಲಿ ಈಗಾಗಲೇ ಜಿಲ್ಲೆಯ26 ರೈತ ಸಂಪರ್ಕ ಕೇಂದ್ರಗಳಲ್ಲಿ 3000 ಕ್ವಿಂಟಲ್‌ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಉಳಿದದಾಸ್ತಾನನ್ನು ಹಂತವಾಗಿ ಸರಬರಾಜು ಮಾಡಲು ಕೃಷಿಇಲಾಖೆಯ ಅಧಿ ಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬಿತ್ತನೆ ಬೀಜ ವಿತರಣೆ: ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,256 ಮೆಟ್ರಿಕ್ ಟನ್-ಯೂರಿಯಾ, 1000 ಮೆಟ್ರಿಕ್ ಟನ್- ಡಿ.ಎ.ಪಿ, 900ಮೆಟ್ರಿಕ್ ಟನ್-ಎಂ.ಒ.ಪಿ, 5500 ಮೆಟ್ರಿಕ್ ಟನ್-ಇತರೆ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ ಎಂದುಕೃಷಿ ಅಧಿ ಕಾರಿಗಳು ಹೇಳಿದ್ದಾರೆ.ಈಗಾಗಲೇ ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ ಗೂಗಲ್-ಮೀಟ್ ಮೂಲಕ ರಸಗೊಬ್ಬರ,ಕೀಟನಾಶಕ, ಬಿತ್ತನೆ ಬೀಜಗಳ ದಾಸ್ತಾನು, ಮಾರಾಟಕ್ಕೆಸಂಬಂಧಿ ಸಿದಂತೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಪರಿವೀಕ್ಷಕರು ಕೃಷಿ ಪರಿಕರಮಾರಾಟಗಾರರ ಮಳಿಗೆಗಳ ತಪಾಸಣೆ ಕೈಗೊಂಡುಮಾದರಿ ಸಂಗ್ರಹಣೆ ಮಾಡಿ ಪ್ರಯೋಗಾ ಲಯಕ್ಕೆಸಲ್ಲಿಸಲು ಕ್ರಮ ಕೈಗೊಂಡಿದ್ದಾರೆ.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.