ರೈತರಿಂದ ತರಕಾರಿ ಖರೀದಿಸಿ 5 ಸಾವಿರ ಮಂದಿಗೆ ವಿತರಣೆ


Team Udayavani, Jun 11, 2021, 7:19 PM IST

kolara news

ಕೋಲಾರ: ಕೋವಿಡ್‌ ಸಂಕಷ್ಟದಲ್ಲಿ ಜನ ಜೀವರಕ್ಷಣೆಗೆ ಸೆಣೆಸುತ್ತಿದ್ದರೆ, ರೈತರು ಕಷ್ಟಪಟ್ಟು ಬೆಳೆದಬೆಳೆಗಳಿಗೆ ಬೆಲೆ ಸಿಗದೇ ತತ್ತರಿಸಿದ್ದಾರೆ.

ಇಂತಹಸ್ಥಿತಿಯಲ್ಲಿ ಕುರ್ಚಿಗಾಗಿ ಜಗಳ, ಪರ-ವಿರೋಧದ ಹೇಳಿಕೆ ನೀಡುತ್ತಿದ್ದು, ಇಂತಹ ಕೆಟ್ಟ ಪರಿಸ್ಥಿತಿ ಹಾಗೂಸರ್ಕಾರವನ್ನು ತಮ್ಮ 50 ವರ್ಷದ ರಾಜಕೀಯಜೀವನದಲ್ಲಿ ಕಂಡಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಷಾದಿಸಿದರು.ಮನ್ವಂತರ ಜನಸೇವಾ ಟ್ರಸ್ಟ್‌, ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ರೈತರಿಂದಖರೀದಿಸಿದ 25 ಟನ್‌ ತರಕಾರಿಯನ್ನು ರಹಮತ್‌ನಗರ ವ್ಯಾಪ್ತಿಯ 5 ಸಾವಿರ ಕುಟುಂಬಗಳಿಗೆ ವಿತರಿಸಿ ಮಾತನಾಡಿ, ಜನಪರ ಯೋಜನೆಗಳ ಮೂಲಕಜನತೆಗೆ ಶಕ್ತಿ ತುಂಬಬೇಕಾದ ಸರ್ಕಾರ, ರಾಜಕೀಯಟೀಕೆಗಳಿಗೆ ಸೀಮಿತವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯಬೇಕಾಗಿದೆ. ಇನ್ನಾದರೂ ಎಚ್ಚೆತ್ತುರೈತರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.ಪರಸ್ಪರ ಟೀಕೆಗಳನ್ನು ಬಿಟ್ಟು ಶಾಸಕರು, ಮಂತ್ರಿಗಳು ಕೋವಿಡ್‌ನಿಂದ ತತ್ತರಿಸಿರುವ ಕುಟುಂಬಗಳಿಗೆಸಾಂತ್ವನ ಹೇಳಲು ಹೊರಬಂದು ಮಾನವೀಯತೆಮೆರೆಯಬೇಕು ಎಂದು ಸಲಹೆ ನೀಡಿದರು.ಗೋವಿಂದಗೌಡರಿಂದ ಪವಿತ್ರವಾದ ಕೆಲಸ:ರೈತರು ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟದಲ್ಲಿದ್ದರೈತರಿಂದ ತರಕಾರಿ ಖರೀದಿಸಿ ಕೋಲಾರ ನಗರದ30 ಸಾವಿರ ಕುಟುಂಬಗಳಿಗೆ ವಿತರಿಸುವ ಪವಿತ್ರವಾದ ಕೆಲಸವನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಅವರ ತಂಡ ಮಾಡಿದೆ.  ಓರ್ವ ರೈತನ ಮಗನಾಗಿ ಅವರು ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸುಲಭದ ಕೆಲಸ ಅಲ್ಲ: ರೈತರನ್ನು ಉಳಿಸುವ ಮತ್ತುಬಡವರಿಗೆ ನೆರವಾಗುವ ಇಂತಹ ಶ್ರೇಷ್ಠ ಕಾರ್ಯಕ್ಕೆಮತ್ತಷ್ಟು ಮಂದಿ ಕೈಜೋಡಿಸಬೇಕು, ಸರ್ಕಾರ ಮಾಡದ ಕೆಲಸವನ್ನು ಗೋವಿಂದಗೌಡರು ಮಾಡಿ ದ್ದಾರೆ.30 ಸಾವಿರ ಕುಟುಂಬಗಳಿಗೆ ತರಕಾರಿ ನೀಡು ವುದುಎಂದರೆ ಸುಲಭದ ಕೆಲಸವಲ್ಲ ಎಂದು ವಿವರಿಸಿದರು.

ರೈತನ ಸಂಕಷ್ಟಕ್ಕೆ ನೆರವಾಗೋಣ: ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ,ಒಂದೇ ದಿನ 25 ಟನ್‌ಗೂ ಹೆಚ್ಚು ತರಕಾರಿ ವಿತರಿಸಲಾಗುತ್ತಿದೆ. ರೈತರ ತೋಟಗಳಿಂದಲೇ ನೇರವಾಗಿಖರೀದಿಸಿ ಅವರಿಗೂ ನೆರವಾಗುತ್ತಿದ್ದೇವೆ ಎಂದುತಿಳಿಸಿದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳಸೋಮಣ್ಣ, ಮನ್ವಂತರ ಜನಸೇವಾ ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್‌, ಅಣ್ಣಿಹಳ್ಳಿಎಸ್‌ಎಫ್‌ಸಿಎಸ್‌ ಅಧ್ಯಕ್ಷ ನಾಗರಾಜ್‌, ಮೇಸ್ತ್ರಿನಾರಾಯಣಸ್ವಾಮಿ, ಮನ್ವಂತರ ಟ್ರಸ್ಟ್‌ನ ಬಾಲನ್‌,ಸತ್ಯನಾರಾಯಣರಾವ್‌, ಮುಖಂಡ ರಾದಆಟೋ ನಾರಾಯಣಸ್ವಾಮಿ, ಅನ್ವರ್‌ ಪಾಷ,ನಿರಂಜನ್‌, ರಹಮತ್‌ ನಗರದ ಯಾರಬ್‌,ಗೋರ್‌, ತಬ್ಬು, ಸಾಧಿಕ್‌, ಸಲಾಂ, ಇಲಿಯಾಸ್‌,ನದೀಂ, ಅಪ್ಸರ್‌, ಸಜಾದ್‌, ಅಸೀಫ್‌ ಮತ್ತಿತರರುಸಾಮಾಜಿಕ ಅಂತರ ನಿರ್ವಹಿಸಿ ತರಕಾರಿ ವಿತರಣೆಯಲ್ಲಿ ಕಾರ್ಯನಿರ್ವಹಿಸಿದರು.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.