ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ


Team Udayavani, Jun 12, 2021, 10:44 AM IST

ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ

ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರ ಬಹು ನಿರೀಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ, ಅರ್ಜಿದಾರರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ.

ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡ ಜನರಲ್ಲಿ ಈಗಿನ ಯೋಜನೆ ಹೊಸ ಆಶಾಭಾವ ಮೂಡಿಸಿದೆ. ಕಳೆದ ವರ್ಷ ಮಾ.31ರೊಳಗೆಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ ನಂತರದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಯೋಜನೆಗೆ ಸ್ಥಗಿತಗೊಂಡಿತ್ತು. ಕೋವಿಡ್‌ 2ನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದರಿಂದ ಬಡವರಲ್ಲಿ ಹೊಸ ಕನಸು ಚಿಗುರೊಡೆದಿದೆ.

ಗ್ರಾಮೀಣ ಸ್ಥಿತಿ ಏನು?: ಸರ್ಕಾರ ಭೂ ಕಂದಾಯ ಅಧಿನಿಯಮ 1964ರ ಕಲಂ 94ಸಿ ಮತ್ತು 94 ಸಿಸಿಯಡಿ ಅರ್ಜಿ ಸಲ್ಲಿಸಲು ಕಳೆದ ವರ್ಷವೇ ಸೂಚಿಸಿತ್ತು. ಆದರೆ, ನಂತರದಲ್ಲಿ ಇತ್ಯರ್ಥಪಡಿಸಿರಲಿಲ್ಲ. ಸಿಂಧನೂರು ಹೋಬಳಿಯಲ್ಲಿ 11, ಹೆಡಗಿನಾಳ-32, ತುರುವಿಹಾಳ-190, ಬಾದರ್ಲಿ-57, ವಲ್ಕಂದಿನ್ನಿ-13, ಗೊರೇಬಾಳ-1, ಕುನ್ನಟಗಿ-47, ಜವಳಗೇರಾ-1, ಹುಡಾ-133, ಸಾಲಗುಂದಾ-78, ಗುಂಜಳ್ಳಿ ಹೋಬಳಿಯಲ್ಲಿ 118 ಅರ್ಜಿ ಸಲ್ಲಿಕೆಯಾದರೆ, ಜಾಲಿಹಾಳ ಹೋಬಳಿಯಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಕಂದಾಯ ಇಲಾಖೆಗೆ ಸಂಬಂಧಿಸಿ ಜಮೀನುಗಳ ಮಾಲೀಕತ್ವಕ್ಕಾಗಿ 681 ಜನ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಸರ್ಕಾರ ವಿಧಿಸಲಿರುವ ಶುಲ್ಕ ಭರಿಸಲಿಕ್ಕೂ ಹಲವರು ಮುಂದೆ ಬಂದಿದ್ದರು. ಆ ಎಲ್ಲ ಜನರಲ್ಲಿ ಹೊಸದಾಗಿ ಅಕ್ರಮ-ಸಕ್ರಮ ಯೋಜನೆಯಲ್ಲಿ ಸೌಲಭ್ಯ ಪಡೆಯುವ ನಿರೀಕ್ಷೆ ಮೂಡಿಸಿದೆ.

ನಗರ ವ್ಯಾಪ್ತಿಯಲ್ಲಿ ಬೇಡಿಕೆ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಜನರು ನಗರ ಪ್ರದೇಶದಲ್ಲೂ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿಪಡಿಸಿದ ಪ್ರಕಾರ ಜಾಗದ ಅಳತೆ ಆಧರಿಸಿ ದಂಡ ಕಟ್ಟಲಿಕ್ಕೂ ಮುಂದೆ ಬಂದಿದ್ದರು. ಇದರ ಪರಿಣಾಮ ಇಲ್ಲಿನ ನಗರಸಭೆ ಕಚೇರಿಗೆ 18 ಲಕ್ಷ ರೂ. ಮುಂಗಡವೂ ಸಲ್ಲಿಕೆಯಾಗಿತ್ತು. ಮಾ.31, 2019ರ ನಂತರ ಅರ್ಜಿ ಇತ್ಯರ್ಥಪಡಿಸದ ಹಿನ್ನೆಲೆಯಲ್ಲಿ ಬಹುತೇಕರು ಅರ್ಜಿ ವಾಪಸ್‌ ಪಡೆದಿದ್ದರು. ಜತೆಗೆ 6 ಲಕ್ಷ ರೂ. ಡಿಡಿ ಮೊತ್ತ ವಾಪಸ್‌ ಪಡೆದಿದ್ದರು.

ಬೇಡಿಕೆ ಈಡೇರುವ ಆಸೆ: ಸರ್ಕಾರ ಕಂದಾಯ ಭೂಮಿಯಲ್ಲಿ ವಾಸವಾಗಿರುವ ಮನೆಗಳನ್ನು ಸಕ್ರಮಗೊಳಿಸುವ ಆದೇಶ ಹೊರಡಿಸುತ್ತಿದ್ದಂತೆ ಬಹುತೇಕರಲ್ಲಿ ಸಂತಸ ಮೂಡಿದೆ. ಮಾ.31, 2022ರ ತನಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಸುವ ಸಿದ್ಧತೆಗಳು ಗರಿಗೆದರಿವೆ. ಕಚ್ಚಾ ಲೇಔಟ್‌ಗಳನ್ನು ಪಕ್ಕಾ ಮಾಡಿಕೊಳ್ಳುವ ಧಾವಂತ ನಗರದಲ್ಲಿ ಕಂಡುಬಂದಿದ್ದು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯೂ ಚುರುಕು ಪಡೆದಿದೆ.

ಅಕ್ರಮ-ಸಕ್ರಮ ಸಮಿತಿಗೆ ಶಾಸಕರು ಅಧ್ಯಕ್ಷರು. ನಾನು ಕಾರ್ಯದರ್ಶಿ. ಸರ್ಕಾರದಿಂದ ಆದೇಶ ಹೊರಬಿದ್ದರೆ ಕೋವಿಡ್‌ ನಂತರದಲ್ಲಿ ಸಭೆ ಕರೆದು ಸ್ಥಳ ಪರಿಶೀಲಿಸಿ ಅರ್ಜಿಗಳನ್ನು ಇತ್ಯರ್ಥಪಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು.-ಮಂಜುನಾಥ ಭೋಗಾವತಿ,  ತಹಶೀಲ್ದಾರ್‌, ಸಿಂಧನೂರು

 

-ಯಮನಪ್ಪ ಪವಾರ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.