ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ ರಾಮಲಿಂಗಾರೆಡ್ಡಿ


Team Udayavani, Jun 12, 2021, 1:41 PM IST

covid news

ಬೆಂಗಳೂರು:ಕೊರೊನಾ ಲಾಕ್‌ಡೌನ್‌ನಿಂದ ಕಷ್ಟಕ್ಕೆ ಸಿಲುಕಿರುವಬಡವರು, ಶ್ರಮಿಕರು, ಬೀದಿ ವ್ಯಾಪಾರಿಗಗಳಿಗೆ ಬಿಟಿಎಂ ಲೇಟ್‌ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ನೆರವಿನ ಸಹಾಯ ಹಸ್ತ ಚಾಚಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಬಿಟಿಎಂ ಲೇಟ್‌ ವಿಧಾನ ಕ್ಷೇತ್ರದಪ್ರತಿ ವಾರ್ಡ್‌ಗೂ ಭೇಟಿ ನೀಡಿ ಜನರ ಸುಖ ಕಷ್ಟಗಳನ್ನುಆಲಿಸುತ್ತಿರುವ ಅವರು ಕೊರೊನಾ ನಿಯಂತ್ರಣ ಕುರಿತು ಜಾಗೃತಿಮೂಡಿಸಿ ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಹಾಗೂದುರ್ಬಲ ವರ್ಗದವರಿಗೆ ಆಹಾರದ ಪೊಟ್ಟಣ, ಬಡಕುಟುಂಬಗಳಿಗೆ ಆಹಾರ ಧಾನ್ಯಗಳು ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

ಕೊರೊನಾ ಎರಡನೇ ಅಲೆ ಸೃಷ್ಟಿಸಿದಸಂಕಷ್ಟ ಅರಿತ ರಾಮಲಿಂಗಾರೆಡ್ಡಿ ಅವರು, ಕ್ಷೇತ್ರದ ಜನತೆಯನೋವುಗಳಿಗೆ ಸ್ಪಂದಿಸಿದರು. ಕ್ಷೇತ್ರದ ಜನರಿಗೆ ನೆರವಾಗಲುವೈದ್ಯಕೀಯ ತಜ್ಞರ ತಂಡ ರಚನೆ ಮಾಡಿದ್ದಾರೆ.ಪ್ರತಿ ವಾರ್ಡ್‌ನಲ್ಲೂ ಸ್ಯಾನಿಟೈಜೇಷನ್‌ಗೆ ಕ್ರಮ ಕೈಗೊಂಡುಉಸಿರಾಟ ಸಮಸ್ಯೆ ಇರುವರಿಗೆ ಆಮ್ಲಜ®ಕ ಸಾಂದ್ರಕ ವಿತರಣೆಮಾಡಿ, ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಆಸ್ಪತ್ರೆಗಳಲ್ಲಿಹಾಸಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಗ್ಯಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಅವರು ಸಂಚಾರಿ ಕ್ಲಿನಿಕ್‌,ವೈದ್ಯಕೀಯ ಕಿಟ್‌ ವಿತರಣೆ, ವೈದ್ಯರ ಆನ್‌ಲೈನ್‌ ಸಮಾಲೋಚನೆಯಂತಹ ಅಪರೂಪ ವೈದ್ಯಕೀಯ ಕಾರ್ಯಗಳನ್ನು ರೂಪಿಸಿ ದರು.ಈ ಎಲ್ಲ ಕಾರ್ಯಕ್ರಮಗಳು ಜನರಿಗೆ ಸಹಾಯ ಕಾರಿಯಾದವು.ಆಹಾರ ಕಿಟ್‌: ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಕ್ಷೇತ್ರದಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಪ್ರತಿವಾರ್ಡ್‌ಗಳಿಗೂ ತೆರೆಳಿ ಬಡ ಕುಟುಂಬಗಳಿಗೆ ಒಂದು ತಿಂಗಳಿಗೆಆಗುವಷ್ಟು ಆಹಾರದ ಕಿಟ್‌ ವಿತರಣೆ ಮಾಡಿದರು. ಬಿಟಿಎಂ ಲೇಔಟ್‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆಡುಗೋಡಿ, ಈಜಿಪುರ,ಕೋರಮಂಗಲ, ಕಲ್ಲಸಂದ್ರ, , ಸುದ್ದಗುಂಟೆ ಪಾಳ್ಯ, ಮಡಿವಾಳ,ಜಕ್ಕಸಂದ್ರ, ಬಿಟಿಎಂ ಬಡಾವಣೆ ಒಳಗೊಂಡಂತೆ ಸೇರಿದಂತೆ ಎಲ್ಲಾವಾರ್ಡ್‌ಗಳಲ್ಲೂ ಆಹಾರ ಮತ್ತು ದಿನಸಿ ಕಿಟ್‌ ವಿತರಣೆಮಾಡಿದ್ದಾರೆ. ಅಷ್ಟೇ ಅಲ್ಲ ಪಕ್ಷದ ಕಾರ್ಯಕರ್ತರನ್ನು ವಾರ್ಡ್‌ನಪ್ರತಿ ಮನೆಗೆ ಕಳುಹಿಸಿ ಆಹಾರ ಮತ್ತು ದಿನಸಿ ಕಿಟ್‌ಗಳನ್ನುವಿತರಿಸುತ್ತಿದ್ದಾರೆ.

ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು,ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆವಿವಿಧ ವರ್ಗದವರಿಗೆ ಅಕ್ಕಿ, ಬೆಳೆ ಸೇರಿದಂತೆ ದಿನಬಳಕೆಸಾಮಗ್ರಿಗಳನ್ನು ಒಳಗೊಂಡ 15 ಕೆಜಿಯ 60 ಸಾವಿರ ಕಿಟ್‌ಗಳನ್ನು ವಿತರಿಸಿ ತಾವು ಕ್ಷೇತ್ರದ ಜನತೆಯ ಜೊತೆಯಲ್ಲಿಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಆರೋಗ್ಯ ಸೇವೆಗಾಗಿ ಇಂದಿರಾ ಕ್ಲಿನಿಕ್‌: ಕೋವಿಡ್‌ಸೋಂಕಿತರ ಸಂಖ್ಯೆ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿವೈದ್ಯಕೀಯ ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳುಕಂಡು ಬಂದವು.ಹಾಗೆಯೇ ರೋಗಿಗಳು ಆಸ್ಪತ್ರೆ ಗಳಿಗೆತೆರಳಲು ಆಂಬುಲೆನ್ಸ್‌ ಸಮಸ್ಯೆ ಕೂಡ ಎದುರಾಯಿತು.ಕೋವಿಡ್‌ ಸೋಂಕಿತರು ದಿನವಿಡೀ ಆಂಬುಲೆನ್ಸ್‌ಗಾಗಿಕಾಯ ಬೇಕಾ ದಂತಹ ಪರಿಸ್ಥಿತಿ ಕೂಡ ಉಂಟಾಗಿತ್ತು. ಆಗತಮ್ಮದೇ ವೈಯಕ್ತಿಕ ವೆಚ್ಚದಲ್ಲಿ ಆಂಬ್ಯುಲೆನ್ಸ್‌ ಸೇವೆಒದಗಿಸಿದರು.22 ಲಕ್ಷ ರೂ. ವೆಚ್ಚದಲ್ಲಿ’ಇಂದಿರಾ ಸಂಚಾರಿಚಿಕಿತ್ಸಾಲಯ’: ಸಾರ್ವಜನಿಕರಿಗೆ ಉಚಿತಆರೋಗ್ಯ ತಪಾಸಣೆಮತ್ತು ಔಷಧಿ ವಿತರಣೆಸಲುವಾಗಿ ‘ಇಂದಿರಾಸಂಚಾರಿ ಚಿಕಿತ್ಸಾಲಯ’ವನ್ನು ಪ್ರಾರಂಭಿಸಲಾಗಿದೆ. ಈಚಿಕಿತ್ಸಾಲಯದಲ್ಲಿ ಒಬ್ಬರುವೈದ್ಯರು, ಶುಶ್ರೂಷಕರನ್ನುನೇಮಿಸಲಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿವೈದ್ಯಕೀಯ ಉಪಕರಣಗಳನ್ನುಅಳವಡಿಸಲಾಗಿದೆ. ಇಸಿಜಿ, ಬಿಪಿ, ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿಮಾಡಲಾಗುತ್ತಿದೆ.

ಜತೆಗೆ ಒಂದು ವಾರಕ್ಕೆಆಗುವಷ್ಟು ಔಷಧವನ್ನು ರೋಗಿಗಳಿಗೆನೀಡಲಾಗುತ್ತಿದೆ.ಬಿಟಿಎಂ ಲೇಔಟ್‌ ಕ್ಷೇತ್ರದ ಪ್ರತಿಯೊಂದುಬಡಾವಣೆಯಲ್ಲೂ ಇಂದಿರಾ ಸಂಚಾರಿಚಿಕಿತ್ಸಾಲಯದ ಮೂಲಕ ಆರೋಗ್ಯ ತಪಾಸಣಾಶಿಬಿರವನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆಮತ್ತು ಸಂಜೆ ಮೂರು ಗಂಟೆಗಳ ಕಾಲ ಒಂದೊಂದುಪ್ರದೇಶದಲ್ಲಿ ಚಿಕಿತ್ಸಾಲಯ ನಿಲ್ಲಲಿದೆ. ನಿತ್ಯ ಸುಮಾರು250 ಮಂದಿ ಚಿಕಿತ್ಸಾಲಯದಲ್ಲಿಆರೋಗ್ಯ ತಪಾಸಣೆ ಮಾಡಿಸಿಕೊಂಡುಔಷಧ ಪಡೆದುಕೊಳ್ಳುತ್ತಿದ್ದಾರೆ.ರಾಮಲಿಂಗರೆಡ್ಡಿ ಅವರುವೈಯಕ್ತಿಕವಾಗಿ 22 ಲಕ್ಷ ರೂ. ವೆಚ್ಚದಲ್ಲಿಇಂದಿರಾ ಸಂಚಾರಿ ಚಿಕಿತ್ಸಾಲಯಕ್ಕೆಚಾಲನೆ ನೀಡಿದ್ದಾರೆ.

“ಆರ್‌ಎಲ್‌ಆರ್‌ ಬಾಂಧವ’ತಂಡದಿಂದ ಉಚಿತ ಔಷಧ: ಬಿಟಿಎಂಬಡಾವಣೆ ಕ್ಷೇತ್ರದಲ್ಲಿ ನಾಗರಿಕರಿಗೆಆರೋಗ್ಯ ಸೇವೆಯನ್ನು ಒದಗಿಸಲುಶಾಸಕ ರಾಮಲಿಂಗಾ ರೆಡ್ಡಿ ವಿಶೇಷ ಒತ್ತುನೀಡಿದ್ದಾರೆ. ಸರ್ಕಾರ, ಬಿಬಿಎಂಪಿಯುಸೋಂಕಿತರಿಗೆ ಟೆಲಿ ಕನ್ಸಲ್ಟೆನ್ಸಿ ಸೇವೆಆರಂಭಿಸುವ ಮೊದಲೇ ತಮ್ಮಕ್ಷೇತ್ರದಲ್ಲಿ ಆನ್‌ಲೈನ್‌ ಮೂಲಕ ಉಚಿತವೈದ್ಯಕೀಯ ಸಮಾಲೋಚನೆಗೆ ವ್ಯವಸ್ಥೆಮಾಡಿದ್ದಾರೆ. ಇದಕ್ಕಾಗಿ 15 ಮಂದಿವೈದ್ಯರ ತಂಡವನ್ನೇಸಜ್ಜುಗೊಳಿಸಲಾಗಿದೆ. ಮನೆಯಲ್ಲಿಯೇಪ್ರತ್ಯೇಕ ಆರೈಕೆಗೆ ಒಳಗಾಗಿರುವಕೊರೊನಾ ಸೋಂಕಿತರ ಮನೆಬಾಗಿಲಿಗೆ ಅಗತ್ಯವಿರುವ ಔಷಧವನ್ನು”ಆರ್‌ಎಲ…ಆರ್‌ ಬಾಂಧವ’ ತಂಡವುಉಚಿತವಾಗಿ ತಲುಪಿಸುತ್ತಿದೆ.ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿಆಡುಗೋಡಿಯ ಬಾಷ್‌ ಕ್ರೀಡಾಸಂಕೀರ್ಣದಲ್ಲಿ 75 ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ200 ಹಾಸಿಗೆ ಸಾಮರ್ಥ್ಯದ ಕೋವಿಡ್‌ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.ಪ್ರತಿನಿತ್ಯ ಹೋಂ ಐಸೋಲೇಷನ್‌ನಲ್ಲಿರುವ 25ರಿಂದ 30 ಸೋಂಕಿತರಿಗೆ ಅಗತ್ಯಔಷಧಿಯನ್ನು ನೀಡಲಾಗುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಉಚಿತಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.