ಕೋವಿಡ್ ಕುಲುಮೆಯಲ್ಲಿ ಕುದಿಯುತ್ತಿದೆ ಕಮ್ಮಾರರ ಜೀವನ
Team Udayavani, Jun 12, 2021, 4:48 PM IST
ವರದಿ: ಸಿ.ವೈ.ಮೆಣಶಿನಕಾಯಿ
ಬೈಲಹೊಂಗಲ: ಕಬ್ಬಿಣ ಕಾಯಿಸಿ, ಬಾಗಿಸಿ, ತಟ್ಟಿ-ತೀಡಿ ಕೃಷಿ ಉಪಯೋಗಿ ವಸ್ತುಗಳನ್ನು ಸಿದ್ಧಮಾಡಿಕೊಡುವ ನಾಲ್ಕೈದು ಕಮ್ಮಾರ ಕುಟುಂಬಗಳು ತಾಲೂಕಿನ ದೇಶನೂರ ಗ್ರಾಮದಲ್ಲಿ ವಾರದಿಂದ ಬೀಡು ಬಿಟ್ಟಿದೆ.
ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗುವ ಕಾಲಕ್ಕೆ ಸರಿಯಾಗಿ ರೈತರಿಗೆ ಬೇಕಾದ ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸುವ ಈ ವಲಸೆ ಕುಟುಂಬಗಳು ಮಹಾರಾಷ್ಟ್ರದಿಂದ ಇಲ್ಲಿ ಬಂದು ಬೀಡು ಬಿಟ್ಟಿದ್ದು, ಸ್ಥಳದಲ್ಲಿಯೆ ಅಗತ್ಯ ಗೃಹಬಳಕೆ ವಸ್ತುಗಳನ್ನೂ ಮಾಡಿಕೊಡುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಎಲ್ಲ ಹಳ್ಳಿಗಳಲ್ಲಿ ಕುಲುಮೆ ಇಟ್ಟು ರೈತರಿಗೆ ಕುಳ, ಕುಡುಗೋಲು, ಪಿಕಾಸಿ ಮುಂತಾದ ಕಬ್ಬಿಣ ಸಾಮಾನುಗಳನ್ನು ತಯಾರಿಸುವ ಕುಟುಂಬಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಂತೆ ಮತ್ತು ನಗರ, ಪಟ್ಟಣದ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೆಡ್ ವಸ್ತುಗಳನ್ನು ಖರೀದಿಸುತ್ತಾರೆ. ಅಲ್ಲದೆ ಕೃಷಿಯಲ್ಲಿ ಟ್ರ್ಯಾಕ್ಟರ್, ಮೊದಲಾದ ಯಂತ್ರಗಳ ಬಳಕೆಯಿಂದ ಕಬ್ಬಿಣದ ವಸ್ತುಗಳ ಬೇಡಿಕೆ ಕಡಿಮೆಯಾಗಿದೆ.
ಕೊರೊನಾದಿಂದಲೂ ವೈತ್ತಿಗೆ ಸಮಸ್ಯೆಯಾಗಿದೆ. ಜನ ಇತರ ಉದ್ಯೋಗಗಳತ್ತ ಹೊರಳಿದ್ದಾರೆ. ಆದರೆ ಮಹಾರಾಷ್ಟ್ರದ ಔರಂಗಾಬಾದ್‌ದ ಈ ಕುಟುಂಬಗಳು ತಮ್ಮ ಕುಲಕಸುಬು ಮಾಡುತ್ತ ದೇಶ ಸುತ್ತುತ್ತಿವೆ. ತಂದೆ ಸಂತೋಷ ಪವಾರ ಕಬ್ಬಿಣ ಕಾಯಿಸಿ ಕೊಡುತ್ತಿದ್ದರೆ ಪುತ್ರಿ ಸವಿತಾ ಅದನ್ನು ಬಡಿದು ರೂಪಕೊಡುವುದು ಗಮನ ಸೆಳೆಯುತ್ತದೆ. ತಮ್ಮ ಗ್ರಾಮದಲ್ಲಿ ಬದುಕಿನ ಅಗತ್ಯಕ್ಕೆ ತಕ್ಕಷ್ಟು ಕೆಲಸ ಸಿಗದಿದ್ದರಿಂದ ಎಲ್ಲ ಕಡೆ ಸಂಚರಿಸುತ್ತ ಕೆಲಸ ಮಾಡುತ್ತೇವೆ. ಕೊರೊನಾ ಚೇತರಿಕೆ ಕಾಣುವವರೆಗೆ ಅಲ್ಲಲ್ಲಿ ಸಂಚರಿಸಿ ರೈತರ ಕೆಲಸ ಮಾಡುತ್ತೇವೆ. ನಂತರ ನಮ್ಮೂರಿಗೆ ಪ್ರಯಾಣ ಬೆಳೆಸುವ ವಿಚಾರವಿದೆ ಅಂತಾರೆ ಪ್ರಕಾಶ ಪಡೋಲಕರ.
ಕುಟುಂಬಕ್ಕೆ ಕುಲಕಸುಬೇ ಆಧಾರ: ಸಾಮಾನ್ಯವಾಗಿ ರೈತರು ಬಳಸುವ ಕುಡಗೋಲು, ಕೊಡಲಿ, ಮಚ್ಚು, ಸುತ್ತಿಗೆ, ಗುದ್ದಲಿ, ಸಲಿಕೆ, ಪಿಕಾಸಿ, ಗೃಹಬಳಕೆಯ ಚಾಕು ಇತ್ಯಾದಿ ವಸ್ತುಗಳನ್ನು ಮಾಡಿಕೊಡುತ್ತಾರೆ. ಜನ ಹಳೆಯ ಕಬ್ಬಿಣ ತಂದು ಕೊಟ್ಟರೆ ಅದನ್ನು ಅವರ ಮುಂದೆಯೇ ಕಾಯಿಸಿ ಬೇಕಾದ ಆಕಾರ ಮಾಡಿ ಕೊಡುತ್ತಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಹೊಟ್ಟೆಗಾಗುವಷ್ಟನ್ನು ಈ ಕುಟುಂಬಗಳು ದುಡಿಯುತ್ತಿದ್ದರೂ ನಿಗದಿತ ಆದಾಯವಿಲ್ಲ. ಬೆಳಗ್ಗೆ ಜನ ಸಂಚರಿಸುವಾಗ ಮಾತ್ರ ಇವರಿಗೆ ಒಂದಿಷ್ಟು ವ್ಯಾಪಾರವಾಗುತ್ತದೆ. ಈ ನಾಲ್ಕೈದು ಕುಟುಂಬದಲ್ಲಿ 30ಕ್ಕೂ ಹೆಚ್ಚು ಜನರಿದ್ದರೂ ಯಾರೂ ಶಾಲೆಗೆ ಹೋದವರಿಲ್ಲ. ಅಕ್ಷರಾಭ್ಯಾಸವಿಲ್ಲದೇ ಕೆಲಸಕ್ಕಾಗಿ ಕುಲಕಸಬು ನಂಬಿ ಊರಿಂದ ಊರಿಗೆ ಸಂಚರಿಸುತ್ತಾ ಜೀವನ ಸಾಗಿಸುವ ಇವರಿಗೆ ಸರಕಾರದಿಂದ ಯಾವುದೇ ಪ್ಯಾಕೇಜ್, ಪರಿಹಾರ ಸಿಕ್ಕಿಲ್ಲ. ರೇಶನ್ ಕಾರ್ಡ, ಆಧಾರ ಕಾರ್ಡಗಳೂ ಇವರ ಬಳಿ ಇಲ್ಲ. ಇಂಥ ಅಲೆಮಾರಿಗಳ ಸಹಾಯಕ್ಕೆ ಸರ್ಕಾರಗಳು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.