ಕರಾವಳಿ ಕಾವಲು ಪಡೆಗೆ ಎಚ್‌ಎಎಲ್‌ನ 3 ಹೆಲಿಕಾಪ್ಟರ್
Team Udayavani, Jun 13, 2021, 7:20 AM IST
ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿ. (ಎಚ್‌ಎಎಲ್) ತಯಾರಿಸಿರುವ ಎಎಲ್‌ಎಚ್ ಎಂ.ಕೆ.-3 ಮಾದರಿಯ 3 ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳು ಭಾರತೀಯ ಕರಾವಳಿ ಕಾವಲು ಪಡೆಗೆ ಸೇರ್ಪಡೆಗೊಂಡಿವೆ.
ಕರಾವಳಿ ಕಾವಲುಪಡೆ ದಿಲ್ಲಿ ಕೇಂದ್ರ ಕಚೇರಿ ಮತ್ತು ಬೆಂಗಳೂರಿನ ಎಚ್‌ಎಎಲ್ ಹೆಲಿಕಾಪ್ಟರ್ ಎಂಆರ್‌ಒ ವಿಭಾಗದೊಂದಿಗೆ ಶನಿವಾರ ನಡೆದ ವರ್ಚುವಲ್ ಸಮಾರಂಭ ದಲ್ಲಿ ರಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಅಜಯ್ ಕುಮಾರ್ ಈ ಹೆಲಿಕಾಪ್ಟರ್‌ಗಳನ್ನು ವಿಧ್ಯುಕ್ತವಾಗಿ ಕರಾವಳಿ ಕಾವಲು ಪಡೆಗೆ ಸೇರ್ಪಡೆಗೊಳಿಸಿದರು.
ಕರಾವಳಿ ಕಾವಲು ಪಡೆಯ ಬಳಿ ಈಗಾಗಲೇ ಇರುವ ಎಎಲ್‌ಎಚ್ ಎಂಕೆ-3 ಮಾದರಿಯ ಹೆಲಿಕಾಪ್ಟರ್ ಸಮೂಹಕ್ಕೆ ಈ ಮೂರು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಕರಾವಳಿ ಪಡೆಯ ನೆಲೆಗಳು ಇರುವ ಭುವನೇಶ್ವರ, ಪೋರ್‌ಬಂದರ್, ಚೆನ್ನೈ ಮತ್ತು ಕೊಚ್ಚಿಯಲ್ಲಿ ಇವು ಕಾರ್ಯ ನಿರ್ವಹಿಸುತ್ತವೆ ಎನ್ನಲಾಗಿದೆ.
ಹೆಲಿಕಾಪ್ಟರ್‌ಗಳ ವಿಶೇಷತೆ
ಈ ಹೆಲಿಕಾಪ್ಟರ್‌ಗಳು ಸರ್ವೇಲನ್ಸ್ ರಾಡಾರ್, ಎಲೆಕ್ಟ್ರೋ ಆಪ್ಟಿಕ್ ಪಾಡ್, ಮೆಡಿಕಲ್ ಇಂಟೆನ್ಸಿವ್ ಕೇರ್ ಯೂನಿಟ್, ಹೈ ಇಂಟೆನ್ಸಿಟಿ ಸರ್ಚ್ ಲೈಟ್, ಮೆಷಿನ್ ಗನ್ ಮುಂತಾದ ಸೌಲಭ್ಯಗಳನ್ನು ಹೊಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.