ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್; ಆಸ್ಪತ್ರೆಗೆ ದೌಡು
Team Udayavani, Jun 13, 2021, 8:06 AM IST
ಅಬುಧಾಬಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಪ್ ಡು ಪ್ಲೆಸಿಸ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾಕಿಸ್ಥಾನ್ ಸೂಪರ್ ಲೀಗ್ ನಲ್ಲಿ ಆಡುತ್ತಿರುವ ಫಾಫ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಮತ್ತೋರ್ವ ಆಟಗಾರನಿಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.
ಪಿಎಸ್ ಎಲ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುವ ಫಾಫ್ ಡು ಪ್ಲೆಸಿಸ್ ಪೇಶಾವರ್ ಜಲ್ಮಿ ವಿರುದ್ಧ ಶನಿವಾರದ ಪಂದ್ಯದಲ್ಲಿ ಪಾಕ್ ಆಟಗಾರ ಮೊಹಮ್ಮದ್ ಹಸ್ನೈನ್ ಗೆ ಢಿಕ್ಕಿ ಹೊಡೆದಿದ್ದಾರೆ. ಏಳನೇ ಓವರ್ ವೇಳೆ ಬೌಂಡರಿ ತಡೆಯಲು ಫಾಪ್ ಡೈವ್ ಹೊಡೆದಿದ್ದಾರೆ. ಈ ವೇಳೆ ಎದುರಿನಿಂದ ಬಂದ ಹಸ್ನೈನ್ ಕಾಲು ಗಂಟಿಗೆ ಫಾಫ್ ತಲೆ ಬಡಿದಿದೆ. ಕೂಡಲೇ ಅವರು ಮೈದಾನಕ್ಕೆ ಕುಸಿದು ಬಿದ್ದರು.
ನಂತರ ಫಾಫ್ ಅವರು ಪಂದ್ಯದಲ್ಲಿ ಭಾಗವಹಿಸಿಲ್ಲ. ಅವರನ್ನು ಚಿಕಿತ್ಸೆಗೆ ಅಬುಧಾಬಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪಾಕಿಸ್ಥಾನಿ ಮಾಧ್ಯಮಗಳು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.