ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ
Team Udayavani, Jun 13, 2021, 11:49 AM IST
ಸಾಂದರ್ಭಿಕ ಚಿತ್ರ
ಮೈಸೂರು: ತನ್ನ ಸ್ನೇಹಿತೆಗೆ ಬಾಲ್ಯ ವಿವಾಹವಾಗುವುದನ್ನು ತಿಳಿದ ಬಾಲಕಿ, ಅದನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ತನ್ನ ಸ್ನೇಹಿತೆಗೆ ರಾಮನಗರದ ಯುವಕನ ಜೊತೆ ಮದುವೆಗೆ ಸಿದ್ಧತೆ ನಡೆದಿರುವ ಮಾಹಿತಿ ತಿಳಿದ ಬಾಲಕಿ, ತಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಶಿಕ್ಷಕಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಶಿಕ್ಷಕಿ ಒಡನಾಡಿಯ ಸ್ಟ್ಯಾನ್ಲಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಸ್ಟ್ಯಾನ್ಲಿ ಅವರು, ಮಕ್ಕಳ ರಕ್ಷಣಾ ಘಟಕದೊಂದಿಗೆ ವಿಜಯ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದಿಢೀರ್ ಮನೆಗೆ ಭೇಟಿ ನೀಡಿದ ಪೊಲೀಸರು, ಬಾಲಕಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಪೋಷಕರು, ಮನೆಯಲ್ಲಿ ಇಲ್ಲ ಎಂದು ಸಬೂಬು ಹೇಳಲು ಮುಂದಾಗಿದ್ದಾರೆ. ಮನೆಯೇಲ್ಲಾ ಶೋಧ ಕಾರ್ಯ ನಡೆಸಿದಾಗ ಕೋಣೆಯಲ್ಲಿ ಮಂಚದ ಕೆಳಗೆ ಬಾಲಕಿಯನ್ನು ಬಚ್ಚಿಟ್ಟಿರುವುದು ಕಂಡು ಬಂದಿದೆ. ಬಾಲಕಿ ಯನ್ನು ರಕ್ಷಿಸಿದ ಪೊಲೀಸರು, ಆಕೆಯ ಹೇಳಿಕೆ ಪಡೆದು ಪೋಷಕರಿಗೆ ಬುದ್ಧಿವಾದ ಹೇಳಿದ್ದಾರೆ.
ಈ ಸಂಬಂಧ ಮಕ್ಕಳ ಪೊಲೀಸ್ ಘಟಕದವರು ನೀಡಿದ ದೂರಿನ ಮೇರೆಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.