ಅನೈತಿಕ ಸಂಬಂಧ: ತಿಳಿ ಹೇಳಿದರೂ ಸರಿ ಹೋಗದ ವ್ಯಕ್ತಿಯನ್ನು ಹಲ್ಲೆ ಮಾಡಿ ಕೊಲೆಗೈದ ಸಂಬಂಧಿಕರು!
Team Udayavani, Jun 13, 2021, 1:15 PM IST
ಬಾಗಲಕೋಟೆ: ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಚಿಕಿತ್ಸೆ ಫಲಕಾರಿಯಾಗದೇ ಗಾಯಗೊಂಡ ವ್ಯಕ್ತಿ ಮೃತ ಪಟ್ಟಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ನರೇನೂರ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಣ ವಡ್ಡರ (45) ಮೃತ ವ್ಯಕ್ತಿ. ಚಿಕಿತ್ಸೆ ಫಲಿಸದೇ ಕೆರೂರ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷ್ಮಣ ಮೃತಪಟ್ಟದ್ದಾನೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಲಕ್ಷ್ಮಣ ಮೇಲೆ ಹಲ್ಲೆ ಮಾಡಲಾಗಿತ್ತು.
ಇದನ್ನೂ ಓದಿ: ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಜನ್ಮ ದಿನ ಆಚರಣೆ
ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಲಾಗಿದೆ. ಅನೈತಿಕ ಸಂಬಂಧ ಬಗ್ಗೆ ಮೊದಲು ತಿಳಿ ಹೇಳಲಾಗಿದೆ. ಮಾತು ಕೇಳದ ಹಿನ್ನಲೆ,ಕೆಲವರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ.ಇದರಿಂದ ತೀವ್ರ ಗಾಯಗೊಂಡಿದ್ದ, ಲಕ್ಷ್ಮಣನನ್ನು ಸಂಬಂಧಿಕರು ಕೆರೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವ್ಯಕ್ತಿ ಮೃತ ಪಟ್ಟಿದ್ದಾನೆ.ಈ ಬಗ್ಗೆ ಕೆರೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದೂರು ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.