ಕರೀನಾ ವಿರುದ್ಧ ಕೆರಳಿಸಿದ ನೆಟ್ಟಿಜನ್.. Boycottkhareenakhan ಶುರುವಾಗಲು ಕಾರಣ ಏನು ?
Team Udayavani, Jun 13, 2021, 3:45 PM IST
ಮುಂಬೈ : ಬಾಲಿವುಡ್ ಬೇಬೋ ಕರೀನಾ ಕಪೂರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. Boycottkhareenakhan ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗ್ತಿದೆ. ಅಷ್ಟಕ್ಕೂ ಕರೀನಾ ವಿರುದ್ಧ ನೆಟ್ಟಿಗರು ಕೆರಳಿರುವುದು ಯಾವ ಕಾರಣಕ್ಕೆ ಗೊತ್ತಾ ?
ಸಿನಿಮಾ ರಂಗದಲ್ಲಿ ಈ ರೀತಿಯ ಟೀಕೆ-ಟಿಪ್ಪಣಿ, ವಿರೋಧಗಳು ಸಹಜ. ಇದೀಗ ಕರೀನಾ ಕಪೂರ್ ಸರದಿ. ಈ ನಟಿಯ ವಿರುದ್ಧ ಜನರು ಸಿಟ್ಟಾಗಿರುವುದಕ್ಕೆ ಮುಖ್ಯ ಕಾರಣ ರಾಮಾಯಣ ಸಿನಿಮಾ.
ಹೌದು, ಹಿಂದಿ ಚಿತ್ರರಂಗದಲ್ಲಿ ಸಿದ್ಧವಾಗಲಿರುವ ಬಿಗ್ ಬಜೆಟ್ ನ ರಾಮಾಯಣ ಕಥೆಯಾಧಾರಿತ ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಕರೀನಾ ಕಫೂರ್ ಗೆ ಆಫರ್ ಮಾಡಲಾಗಿದೆಯಂತೆ. ಇದಷ್ಟೆ ವಿಷಯವಾಗಿದ್ದರೆ ಇಷ್ಟು ರಾದ್ದಾಂತವಾಗುತ್ತಿರಲಿಲ್ಲ ಕಾಣಿಸುತ್ತದೆ. ವಿಷಯ ಅದಲ್ಲ, ಸೀತೆ ಪಾತ್ರಕ್ಕೆ ಬಣ್ಣ ಹಚ್ಚಲು ಕರೀನಾ 12 ಕೋಟಿ ರೂ. ಸಂಭಾವನೆ ಕೇಳಿರುವುದು ಕೆಲ ವರ್ಗದ ಜನರ ಕಣ್ಣು ಕೆಂಪಾಗಿಸಿದೆ. ಅಷ್ಟೇ ಅಲ್ಲ ಮುಸ್ಲಿಂ ವ್ಯಕ್ತಿಯ ಜೊತೆ ಮದುವೆ ಆಗಿರುವ ಅವರು ಸೀತೆ ಪಾತ್ರ ಮಾಡಿದರೆ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಹಲವರು ಟ್ವಿಟರ್ನಲ್ಲಿ ವಾದ ಮಂಡಿಸಿದ್ದಾರೆ.
‘ಸೈಫ್ ಅಲಿ ಖಾನ್ ನಟನೆಯ ತಾಂಡವ್ ವೆಬ್ ಸರಣಿಯಲ್ಲಿ ಹಿಂದುಗಳಿಗೆ ಅವಮಾನ ಮಾಡುವಂತಹ ದೃಶ್ಯ ಇತ್ತು. ಈಗ ಕರೀನಾ ಕೈಯಿಂದಲೂ ಅದನ್ನೇ ಮಾಡಿಸುವುದು ಬೇಡ’ ಎಂದು ಕೆಲವರು ಕಿಡಿಕಾರಿದ್ದಾರೆ.
ರಿಯಾಲಿಟಿ ಏನು ?
‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಮೂಲಗಳ ಪ್ರಕಾರ, ಕರೀನಾಗೆ ಯಾರೂ ಈ ಪಾತ್ರವನ್ನು ಆಫರ್ ಮಾಡಿಲ್ಲವಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.