ವೈರಸ್ ಫ್ಯಾಕ್ಟರಿ ಚೀನಾದಲ್ಲಿ ಮತ್ತೊಂದು ಕೋವಿಡ್ ವಂಶವಾಹಿ ಸೋಂಕು ಪತ್ತೆ..!
ವಿವಿಧ ಭಾವಲಿಗಳ ಪ್ರಭೇದಗಳಲ್ಲಿ ಪತ್ತೆಯಾಯ್ತು ಒಟ್ಟು 24 ಕರೋನಾ ವೈರಸ್ ವಂಶವಾಹಿಗಳು
Team Udayavani, Jun 13, 2021, 4:36 PM IST
ಪ್ರಾತಿನಿಧಿಕ ಚಿತ್ರ
ಯುನ್ನಾನ್ : ಕೋವಿಡ್ 19 ಸೋಂಕಿನ ಮೂಲದ ಪತ್ತೆ ಕಾರ್ಯ ಆಗಬೇಕು ಎಂಬ ಕೂಗು ಜಗತ್ತಿನಾದ್ಯಂತಕೇಳಿ ಬರುತ್ತಿರುವುದರ ನಡುವೆ, ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಹೌದು, ಚೀನಾದ ಸಂಶೋಧಕರು ಬಾವಲಿಗಳಲ್ಲಿ ರೈನೋಲೋಫಸ್ ಪುಸಿಲಸ್ ವೈರಸ್ ಎಂಬ ಹೊಸದೊಂದು ವೈರಸ್ ನನ್ನು ಪತ್ತೆ ಹಚ್ಚಿದ್ದು, ಇದು ಕೋವಿಡ್ ಸೋಂಕಿನ ಮತ್ತೊಂದು ರೂಪಾಂತರ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಈ ಹಿಂದೆ ಶಿವಸೇನೆಯನ್ನು ಬಿಜೆಪಿಯವರು ಗುಲಾಮರಂತೆ ನೋಡುತ್ತಿದ್ದರು: ಸಂಜಯ್ ರಾವತ್
ಚೀನಾದ ಯುನ್ನಾನ್ ಪ್ರದೇಶದಲ್ಲಿ ಪತ್ತೆಯಾಯ್ತು ರೈನೋಲೋಫಸ್ ಪುಸಿಲಸ್ ವೈರಸ್ :
ಚೀನಾದ ಯುನ್ನಾನ್ ಪ್ರಾಂತ್ಯದ ಸಣ್ಣ ಪ್ರದೇಶದಲ್ಲಿನ ಬಾವಲಿಗಳಲ್ಲಿ ಎಷ್ಟು ಕರೋನವೈರಸ್ ಗಳಿವೆ ಅಸ್ತಿತ್ವದಲ್ಲಿವೆ ಮತ್ತು ಎಷ್ಟು ಜನರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಹಂದಿಗಳು, ದನಗಳು, ಇಲಿಗಳು, ಬೆಕ್ಕುಗಳು ಸೇರಿದಂತೆ ನಾಯಿಗಳು ಮತ್ತು ಕೋಳಿಗಳಮತಹ ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳಿಗೆ ಹರಡುತ್ತವೆಯೇ ಎಂಬ ವಿಚಾರದಲ್ಲಿ ನಡೆಸಲಾಗುತ್ತಿರುವ ಅಧ್ಯಯನದ ಸಂದರ್ಭದಲ್ಲಿ ಬಾವಲಿಗಳಲ್ಲಿ ಈ ಹೊಸ ವೈರಸ್ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಕೋವಿಡ್ ಸೋಂಕಿನ ಮತ್ತೊಂದು ತಳಿ..!?
2020 ರಲ್ಲಿ ಚೀನಾದ ವುಹಾನ್ ನಲ್ಲಿ SARS-CoV-2 ಎಂಬ ಸಾಂಕ್ರಾಮಿಕ ಸೋಂಕು ಗುರುತಿಸಲ್ಪಟ್ಟಿತ್ತು, ಇಡೀ ಜಗತ್ತಿಗೆ ಹಬ್ಬಿ ನಾಗರಿಕ ವ್ಯವಸ್ಥೆಯನ್ನೇ ಅಡಿಮೇಲಾಗಿಸಿತ್ತು. ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ SARS-CoV-2 ಸೋಂಕಿನ ಮತ್ತೊಂದು ತಳಿ ಇದು ಎಂದು ಅಲ್ಲಿನ ಸಂಶೋಧಕರು ಹೇಳಿರುವುದಾಗಿ ವರದಿಯಾಗಿದೆ.
ಸಂಶೋಧಕರು ಮೇ 2019 ಮತ್ತು ನವೆಂಬರ್ 2020 ರ ನಡುವೆ ಯುನ್ನಾನ್ ಪ್ರಾಂತ್ಯದ ಒಂದು ಕೌಂಟಿಯಲ್ಲಿ ಉಷ್ಣವಲಯದ ಸಸ್ಯೋದ್ಯಾನ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬಾವಲಿಗಳಿಂದ 283 ಮಲ ಮಾದರಿಗಳು, 109 ಸ್ವ್ಯಾಬ್ ಗಳು ಮತ್ತು 19 ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳ ಪಡಿಸಿದಾಗ ಈ ಹೊಸ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು, ವಿವಿಧ ಬಾವಲಿ ಪ್ರಭೇದಗಳಿಂದ ಒಟ್ಟು 24 ಕರೋನ ವೈರಸ್ ವಂಶವಾಹಿಗಳನ್ನು ಸಂಯೋಜಿಸಿದ್ದೇವೆ, ಇದರಲ್ಲಿ ನಾಲ್ಕು SARS-CoV-2 ಗೆ ಸಂಬಂಧಿಸಿದವು ಎಂದು ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಚೀನಾದ ಸಂಶೋಧಕರು ಹೇಳಿರುವುದಾಗಿ ಸೆಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಇದನ್ನೂ ಓದಿ : ಬೈಕ್ ಅಪಘಾತ : ನಟ ಸಂಚಾರಿ ವಿಜಯ್ ಗಂಭೀರ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.