ಕಾವ್ಯ ಮಲ್ಲಿಗೆ: ಅಬ್ಬರದ ಮಳೆರಾಯನ
Team Udayavani, Jun 14, 2021, 9:00 AM IST
ದಿಬ್ಬಣದ ದಿನ
ಇಳೆಯಿಂದ ಹೊಮ್ಮಿ ಧರೆಯಲ್ಲಿ ಪುಟಿಸಲು…
ಮುಸುಕಿದ ಮೋಡ, ಗುಡುಗು, ಸಿಡಿಲುಗಳ ದಿಬ್ಬಣದೊಂದಿಗೆ ಆಗಮಿಸುವ ಮಳೆರಾಯನು…
ಭೂ ಕುಲಕ್ಕೆ, ಕಾತುರತೆ ನೀಡಿ…
ಉಣಬಡಿಸುವ ಮುತ್ತಿನಂತ ಹನಿಗಳನು…
ಗಿಡ-ಮರಗಳು ಹಾತೊರೆಯುವವು ಸೊಂಪಾಗಲು…
ಕಾದು ಕೆಂಪಾದ ನೆಲವು ಕಾಯುತ್ತಿದೆ ಹಸುರಾಗಲು…
ಜಲಚರ, ಪ್ರಾಣಿ-ಪಕ್ಷಿಗಳು ಕಾದಿಹವು ಜಲಕ್ರೀಡೆಗೆ…
ರೈತರು ಬೇಡುವರು ಸಮೃದ್ಧಿಗೆ…
ಆರ್ಭಟ ಮುಗಿಲ ಮುಟ್ಟಲು ಜಲತಾರೆಗೆ ತವಕ…
ಜುಳು-ಜುಳು ಹರಿಯಲು ನದಿಗಳಿಗೆ ಸಂತಸ…
ಪ್ರಕೃತಿಯು ತಂಪಾಗಲು ಗಾಳಿಗೂ ಕಾತುರ…
ಬಗೆ ಬಗೆಯ ಹಣ್ಣನ್ನು ಸವಿಯುವ ಆತುರ…
ಭೂ ತಾಯಿಯು ಸಜ್ಜಾದಳು ಶೃಂಗಾರಕ್ಕೆ…
ತನ್ನ ಕುಲವನ್ನು ಸಂತೋಷ ಗೊಳಿಸಲಿಕ್ಕೆ…
ಬರೆದಳು ಕವನವನ್ನು ಮಳೆರಾಯನಿಗೆ…
ವೈಭೋಗದಿ ಬರುವ ಮಳೆರಾಯ ಧರೆಗೆ…
ಕಾವ್ಯಾ
ಶ್ರೀ ಶಾರದಾ ಕಾಲೇಜು ಬಸ್ರೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.